ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಸಿಸಿಪ್ಪಿ ಶೂಟೌಟ್, ಮುಸ್ಲಿಂ ನಾಯಕ ಸೇರಿ 8 ಜನರ ಹತ್ಯೆ

By ವಿಕಾಸ್ ನಂಜಪ್ಪ
|
Google Oneindia Kannada News

ಮಿಸಿಸಿಪ್ಪಿ, ಮೇ 29: ಭಾನುವಾರ ಮಂಜಾನೆ ಮಿಸಿಸಿಪ್ಪಿಯಲ್ಲಿ ನಡೆದ ಶೂಟೌಟ್ ನಲ್ಲಿ ಮುಸ್ಲಿಂ ಮುಖಂಡರೊಬ್ಬರು ಸೇರಿ 8 ಜನ ಅಸುನೀಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಂಕಿತ ಬಂದೂಕುದಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಪೊಲೀಸರು ಲಿಂಕನ್ ನಗರದ ಹೊರವಲಯದಲ್ಲಿ ಈ ಶೂಟೌಟ್ ನಡೆದಿದೆ. ಮೂರು ಪ್ರತ್ಯೇಕ ಮನೆಗಳಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಹೇಳಿದ್ದಾರೆ.

8 including deputy sheriff killed in Mississippi shooting

ಮಿಸಿಸಿಪ್ಪಿ ರಾಜ್ಯದ ರಾಧಾನಿ ಜಾಕ್ಸನ್ ನಿಂದ 68 ಮೈಲು ದೂರದಲ್ಲಿ ಈ ಘಟನೆ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ ಮುಸ್ಲಿಂ ನಾಯಕರು ಫೋನಿನಲ್ಲಿ ಮಾತನಾಡುತ್ತಿದ್ದ ಸಂದರ್ಭ ಶಂಕಿತ ಭಯೋತ್ಪಾದಕ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ಇನ್ನು ಶೂಟೌಟ್ ನಡೆದ ಮೂರೂ ಪ್ರದೇಶಗಳಿಗೆ ತನಿಖಾ ತಂಡದ ಸದಸ್ಯರು ಭೇಟಿ ನೀಡಿದ್ದು ತನಿಖೆ ಇನ್ನೂ ಪ್ರಗತಿಯಲ್ಲಿದೆ. ಶಂಕಿತನ ಮೇಲೆ ಇನ್ನೂ ಯಾವುದೇ ಕೇಸುಗಳನ್ನು ಹಾಕಿಲ್ಲ. ಇದೇ ವೇಳೆ ಶೂಟೌಟಿಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಇದೊಂದು ದ್ವೇಷದ ಕೃತ್ಯವೇ, ಸತ್ತವರಿಗೂ ಕೊಂದವನಿಗೂ ಸಂಬಂಧಗಳಿತ್ತಾ ಎಂಬುದು ತನಿಖೆಯಿಂದಷ್ಟೇ ಬಯಲಾಗಬೇಕಾಗಿದೆ.

ಆದರೆ ಬಂಧಿತ ಆರೋಪಿ ಕೋರಿ ಗೊಡ್ಬೋಲ್ಟ್ , 'ತನಗೂ ಘಟನೆಗೂ ಯಾವುದೇ ಸಂಬಂಧವಿಲ್ಲ. ಪೊಲೀಸರು ಕರೆ ಮಾಡುವಾಗ ತಾನು ಮನೆಯಲ್ಲಿದ್ದುದಾಗಿಯೂ, ನನ್ನ ಹೆಂಡತಿ ಮತ್ತು ಕುಟುಂಬ ಸದಸ್ಯರ ಜತೆ ಮಾನಾಡುತ್ತಿದ್ದುದಾಗಿ' ವೀಡಿಯೊದಲ್ಲಿ ಹೇಳಿದ್ದಾನೆ.

English summary
Eight people, including a deputy sheriff, were killed in a shootout in Mississippi on Sunday morning, according to police. The suspect has been taken into custody. Mississippi Bureau of Investigation spokesman Warren Strain said the shootings occurred at three separate homes in the state’s rural Lincoln County.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X