ಪಾಕಿಸ್ತಾನಿಗಳೇ ಹೇಳಿದ್ದು: ದೇಶ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ

ಇಸ್ಲಾಮಾಬಾದ್, ಡಿಸೆಂಬರ್ 16: ಪಾಕಿಸ್ತಾನವು ತಪ್ಪು ದಿಕ್ಕಿನೆಡೆಗೆ ಸಾಗುತ್ತಿದೆ ಎಂದು ಶೇ.77ರಷ್ಟು ಪಾಕಿಸ್ತಾನಿಯರು ಒಪ್ಪಿಕೊಂಡಿದ್ದಾರೆ.

ಐಪಿಎಸ್‌ಒಎಸ್ ಕಂಪನಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಕೇವಲ 23ರಷ್ಟು ಮಂದಿ ಮಾತ್ರ ದೇಶವು ಉತ್ತಮ ಮಾರ್ಗದಲ್ಲಿ ಸಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಉಳಿದ ಶೇ.77ರಷ್ಟು ಮಂದಿ ದೇಶವು ಕೆಟ್ಟ ಮಾರ್ಗದಲ್ಲಿ ಸಾಗುತ್ತಿದೆ ಎಂದು ಹೇಳಿದ್ದಾರೆ.

ಡಿಸೆಂಬರ್ 1ರಿಂದ 6ರವರೆಗೆ ಸಮೀಕ್ಷೆ ನಡೆದಿತ್ತು, ಈ ಸಮೀಕ್ಷೆಯಲ್ಲಿ ದೇಶದ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.ಕಳೆದ ವರ್ಷ ಇದೇ ಸಂದರ್ಭದಲ್ಲಿ ಶೇ.79ರಷ್ಟು ಮಂದಿ ದೇಶ ತಪ್ಪು ದಾರಿಯಲ್ಲಿದೆ ಎಂದಿದ್ದರೆ ಶೇ.21ರಷ್ಟು ಮಂದಿ ದೇಶವು ಸರಿಯಾದ ದಾರಿಯಲ್ಲಿದೆ ಎಂದಿದ್ದರು.

77 Per Cent Pakistanis Believe Country Heading Towards Wrong Direction

ದೇಶದಲ್ಲಿ ಶೇ.36ರಷ್ಟು ಮಂದಿ ಆದಾಯ ಕ್ಷೀಣಿಸಿದೆ. ಶೇ.13ರಷ್ಟು ಮಂದಿ ಆರ್ಥಿಕವಾಗಿ ಸದೃಢರಾಗಿದ್ದಾರೆ. ಶೇ.51ರಷ್ಟು ಮಂದಿ ದುರ್ಬಲರೂ ಆಗಿಲ್ಲ, ಸದೃಢರೂ ಆಗಿಲ್ಲ.

ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಸೇ.20ರಷ್ಟು ಮಂದಿಗೆ ಉದ್ಯೋಗವಿಲ್ಲ. ಖೈಬರ್‌ನಲ್ಲಿ ಶೇ.18ರಷ್ಟು ಮಂದಿಗೆ ಉದ್ಯೋಗವಿಲ್ಲ, ಕೊರೊನಾ ಸೋಂಕಿನಿಂದ ಶೇ.12ರಷ್ಟು ಮಂದಿ ಕೆಲಸ ಕಳೆದುಕೊಂಡಿದ್ದರೆ, ಶೇ.8ರಷ್ಟು ಮಂದಿ ಬಡವರಿದ್ದಾರೆ.

ಬಲೂಚಿಸ್ತಾನದಲ್ಲಿ ಶೇ.25ರಷ್ಟು ಮಂದಿ ನಿರುದ್ಯೋಗಿಗಳಿದ್ದಾರೆ, ಐದು ಮಂದಿಯಲ್ಲಿ ನಾಲ್ಕು ಮಂದಿ ಪಾಕಿಸ್ತಾನವು ಕೆಟ್ಟ ದಿಕ್ಕಿನಲ್ಲಿ ಸಾಗುತ್ತಿದೆ ಎಂದೇ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+