ಇಂಡೋನೇಷ್ಯಾದಲ್ಲಿ 7.5 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ ಇಲ್ಲ

ಜಕಾರ್ತಾ, ಜೂನ್ 24: ಇಂಡೋನೇಷ್ಯಾದ ಬಂಡಾ ಸಮುದ್ರ ಪ್ರದೇಶದ ಬಳಿ ಸೋಮವಾರ ಭಾರೀ ಪ್ರಮಾಣದ ಭೂಕಂಪ ಸಂಭವಿಸಿದ್ದು, ಸಾವು ನೋವಿನ ಬಗ್ಗೆ ಇದುವರೆಗೆ ವರದಿಯಾಗಿಲ್ಲ.

ಭೂಕಂಪ 220 ಕಿಮೀ ಆದಳದಲ್ಲಿ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 7.5 ತೀವ್ರತೆ ದಾಖಲಾಗಿದೆ. ಆದರೆ ಸುನಾಮಿ ಎಚ್ಚರಿಕೆಯನ್ನು ಇದುವರೆಗೆ ನೀಡಿಲ್ಲ ಎಂದು ವರದಿಗಳು ತಿಳಿಸಿವೆ.

ಇಂಡೋನೇಷ್ಯಾದಲ್ಲಿ ಭೂಕಂಪಗಳೇನು ಹೊಸತಲ್ಲ. ಸೆಪ್ಟೆಂಬರ್ 27, 2018 ರಲ್ಲಿ ಪಾಲುವಿನಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಲ್ಲಿ ಬರೋಬ್ಬರಿ 2,200 ಜನ ಮೃತರಾಗಿದ್ದರು. 2018 ರ ಡಿ.22 ರಂದು ಸಂಭವಿಸಿದ ಸುನಾಮಿ ಮತ್ತು ಭೂಕಂಪದಲ್ಲಿ 22 ಜನ ಮೃತರಾಗಿದ್ದರು.

7.5 magnitude earthquake hits Indonesia

ಡಿಸೆಂಬರ್ 7, 2016 ರಲ್ಲಿ ಅಸೆಹ್ ಎಂಬಲ್ಲಿ ಸಂಭವಿಸಿದ ಭೂಕಂಪದಲ್ಲಿ 104 ಜನ ಮೃತರಾಗಿದ್ದರು. ಜುಲೈ 29, 2018 ರಲ್ಲಿ ಸಂಭವಿಸಿದ ಭೂಕಂಪದಲ್ಲಿ 556 ಜನ ಮೃತರಾಗಿದ್ದರು.

ಸೆಪ್ಟೆಂಬರ್ 30, 2009 ರಂದು ಸುಮಾತ್ರಾ ದ್ವೀಪದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 1,115 ಜನ ಮೃತರಾಗಿದ್ದರು. ಅಕ್ಟೋಬರ್ 25, 2010 ರಂದು ಸಂಭವಿಸಿದ ಭೂಕಮಪ ಮತ್ತು ಸುನಾಮಿಯಲ್ಲಿ 435 ಜನ ಮೃತರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+