ನ್ಯೂಜಿಲೆಂಡ್ ನಲ್ಲಿ ಭೀಕರ ಭೂಕಂಪ, ಸುನಾಮಿ ಭೀತಿ
ಆಕ್ಲೆಂಡ್, ಸೆಪ್ಟೆಂಬರ್ 01 : ನ್ಯೂಜಿಲೆಂಡಿನ ಈಶಾನ್ಯ ಭಾಗದ ಅರರೊವಾ ಪ್ರದೇಶದಲ್ಲಿ ಪ್ರಬಲ ಭೂಕಂಪನ ಅನುಭವವಾಗಿದೆ. ರಿಕ್ಚರ್ ಮಾಪಕದಲ್ಲಿ 7.1ರಷ್ಟು ಪ್ರಮಾಣ ದಾಖಲಾಗಿದೆ.
ಭೂಕಂಪದ ಅನುಭವ ನಾರ್ಥ್ ಲ್ಯಾಂಡ್ ನಿಂದ ವೆಲ್ಲಿಂಗ್ಟನ್ ತನಕ ಆಗಿದೆ. ಸುನಾಮಿ ಭೀತಿ ಎದುರಾಗಿದ್ದು, ಈ ಬಗ್ಗೆ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. [ಜಪಾನಿನಲ್ಲಿ ಜಲ ಪ್ರಳಯ 11 ಮಂದಿ ಸಾವು, 21 ಮಂದಿ ನಾಪತ್ತೆ]

ಈಸ್ಟ್ ಕೇಪ್ ನಿವಾಸಿಗಳಿಗೆ ಎಚ್ಚರಿಕೆ ಸಂದೇಶ ನೀಡಲಾಗಿದ್ದು, ಭೂಕಂಪದ ತರುವಾಯ ಬರುವ ಕಂಪನ ಅನುಭವದ ಬಗ್ಗೆ ರೇಡಿಯೋ ಸಂದೇಶ ನೀಡಲಾಗುತ್ತದೆ, ಸದಾ ಎಚ್ಚರದಿಂದಿರಿ ಎಂದು ಸ್ಥಳೀಯ ಅಡಳಿತ ಹೇಳಿದೆ. ಕಂಪನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯವಿದೆ.
Te Araroa eq is updated to a M7.1 EQ, 100km NE of Te Araroa. The tsunami experts panel has been activated. Check @NZcivildefence for advice
— GeoNet (@geonet) September 1, 2016
ಇನ್ನೊಂದೆಡೆ ಜಲ ಪ್ರಳಯದಿಂದಾಗಿ ಅನೇಕ ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ಆದರೆ, ಅಲ್ಲಿ ಇನ್ನೂ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ.












Click it and Unblock the Notifications