ವಿಶ್ವಾದ್ಯಂತ 2020ರಲ್ಲಿ 65 ಪತ್ರಕರ್ತರ ಹತ್ಯೆ, ಯಾವ ದೇಶದಲ್ಲಿ ಹೆಚ್ಚು?
ಬ್ರುಸೆಲ್ಸ್, ಮಾರ್ಚ್ 12: 2020ರಲ್ಲಿ ಜಗತ್ತಿನಾದ್ಯಂತ 65 ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ತಿಳಿಸಿದೆ.
ಸುಮಾರು 16 ರಾಷ್ಟ್ರಗಳಲ್ಲಿ ಮಾಧ್ಯಮ ವ್ಯಕ್ತಿಯನ್ನು ನೇರವಾಗಿ ಗುರಿಯಾಗಿಸಿ ದಾಳಿ ನಡೆಸಿರುವುದು, ಬಾಂಬ್ ಹಾಗೂ ಗುಂಡಿನ ದಾಳಿಗಳ ಮೂಲಕ ಹತ್ಯೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.
ಹಾಗೆಯೇ ಪತ್ರಕರ್ತರ ಹತ್ಯೆಗೆ ಸಂಬಂಧಿಸಿದ ವಾರ್ಷಿಕ ವರದಿಯನ್ನೂ ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಪ್ರಕಟಿಸಿದೆ. 2019 ರಲ್ಲಿ ಹತ್ಯೆ ಪ್ರಕರಣಗಳಿಗಿಂತ 17 ಹೆಚ್ಚು ಹಾಗೂ ಸರಿಸುಮಾರು 1990ರಲ್ಲಿ ನಡೆದಿದ್ದ ಹತ್ಯೆಗಳಷ್ಟೇ ಸಂಖ್ಯೆ 2020ರಲ್ಲಿಯೂ ದಾಖಲಾಗಿದೆ ಎಂದಿದೆ.

ಸೊಮಾಲಿಯಾ, ಇರಾಕ್, ಪರಾಗ್ವೆ, ಬಾಂಗ್ಲಾದೇಶ, ರಷ್ಯಾ, ಸ್ವೀಡನ್ ಹಾಗೂ ಕ್ಯಾಮೆರೂನ್ನಲ್ಲೂ ಪತ್ರಕರ್ತರ ಹತ್ಯೆಯಾಗಿದೆ. 1990ರಿಂದ ಹತ್ಯೆಗೀಡಾದ ಪತ್ರಕರ್ತರ ವಿವರಗಳನ್ನು ಐಎಫ್ಜೆ ಸಂಗ್ರಹಿಸುತ್ತಿದ್ದು, ಈವರೆಗೂ 2680 ಪತ್ರಕರ್ತರ ಹತ್ಯೆಯಾಗಿದೆ.
ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಸೊಮಾಲಿಯಾದಲ್ಲಿ ತೀವ್ರವಾದಿಗಳ ಹಿಂಸಾಚಾರ, ಮೆಕ್ಸಿಕೋದ ಅಪರಾಧ ಜಗತ್ತು, ಅಸಹಿಷ್ಣುತೆಯ ಕಾರಣಗಳಿಂದಾಗಿ ಭಾರತ ಹಾಗೂ ಫಿಲಿಪೈನ್ಸ್ನಲ್ಲಿಯೂ ಮಾಧ್ಯಮ ಸಿಬ್ಬಂದಿಯ ರಕ್ತ ಹರಿದಿದೆ ಎಂದು ಹೇಳಲಾಗಿದೆ.
ಟರ್ಕಿಯಲ್ಲಿ ಅತಿ ಹೆಚ್ಚು ಪತ್ರಕರ್ತರನ್ನು ಜೈಲಿಗೆ ಕಳುಹಿಸಲಾಗಿದೆ, ಜಗತ್ತಿನಾದ್ಯಂತ 229 ಪತ್ರಕರ್ತರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಟರ್ಕಿಯಲ್ಲಿ ಅತಿ ಹೆಚ್ಚು ಪತ್ರಕರ್ತರನ್ನು ಜೈಲಿಗೆ ಕಳುಹಿಸಲಾಗಿದೆ.
ಕಳೆದ ಐದು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಮೆಕ್ಸಿಕೊದಲ್ಲಿ ಅತಿ ಹೆಚ್ಚು ಪತ್ರಕರ್ತರ ಹತ್ಯೆ ನಡೆದಿದೆ. 2020ರಲ್ಲಿ 14 ಪತ್ರಕರ್ತರ ಹತ್ಯೆ ಮಾಡಲಾಗಿದೆ. ಅಫ್ಘಾನಿಸ್ತಾನದಲ್ಲಿ 10, ಪಾಕಿಸ್ತಾನದಲ್ಲಿ 9, ಭಾರತದಲ್ಲಿ 8, ಫಿಲಿಪೈನ್ಸ್ ಹಾಗೂ ಸಿರಿಯಾದಲ್ಲಿ ತಲಾ 4, ನೈಜೀರಿಯಾ ಹಾಗೂ ಯೆಮನ್ನಲ್ಲಿ ತಲಾ ಮೂವರು ಪತ್ರಕರ್ತರ ಹತ್ಯೆಯಾಗಿದೆ.
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications