ಉತ್ತರ ಕ್ಯಾಲಿಫೋರ್ನಿಯಾದಲ್ಲಿ 6.9 ಪ್ರಮಾಣದ ಪ್ರಬಲ ಭೂಕಂಪ

Posted By:
Subscribe to Oneindia Kannada

ಕ್ಯಾಲಿಫೋರ್ನಿಯಾ, ಡಿಸೆಂಬರ್ 08 :ಉತ್ತರ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಗುರುವಾರ ಬೆಳಗ್ಗೆ 6.50ಕ್ಕೆ 6.9 ಪ್ರಮಾಣದ ಪ್ರಬಲ ಭೂಕಂಪ ಸಂಭವಿಸಿದೆ. ಆದರೆ, ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ.

6.9 magnitude earthquake strikes North California coast

ಕ್ಯಾಲಿಫೋರ್ನಿಯಾ ಬಳಿಯ ಫರ್ನ್‌ಡೇಲ್ ನಿಂದ 165 ಕಿ.ಮೀ ದೂರದಲ್ಲಿ ಕಂಪನದ ಬಿಂದು ಕೇಂದ್ರೀಕೃತವಾಗಿದ್ದು, 10 ಕಿ.ಮೀ. ಭೂಮಿಯ ಆಳದಲ್ಲಿ ಕಂಪನ ಸಂಭವಿಸಿದೆ. [ಇಂಡೋನೇಷಿಯಾದಲ್ಲಿ ಭೂಕಂಪ 72ಕ್ಕೂ ಹೆಚ್ಚು ಸಾವು]

ಭೂಕಂಪನದ ಅನುಭವ ಸ್ಯಾನ್ ಫ್ರಾನ್ಸಿಸ್ಕೋದಲ್ಲಿಯೂ ಆಗಿದೆ. ಈ ಭೂಕಂಪದಿಂದಾಗಿ ಯಾವುದೇ ಸಾವುನೋವು, ಕಟ್ಟಡಗಳಿಗೆ ಹಾನಿಯಾದ ವರದಿ ಬಂದಿಲ್ಲ.


ಸರಿಯಾಗಿ 28 ವರ್ಷಗಳ ಹಿಂದೆ 1988ರ ಡಿಸೆಂಬರ್ 7ರಂದು ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ 25 ಸಾವಿರ ಜನರು ಸಾವಿಗೀಡಾಗಿ, ಸಹಸ್ರಾರು ಜನರು ಗಾಯಗೊಂಡಿದ್ದರು ಮತ್ತು ಮನೆಮಠ ಕಳೆದುಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
6.9 magnitude earthquake strikes North California coast, USA
Please Wait while comments are loading...