ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಭಾರೀ ಭೂಕಂಪ

Subscribe to Oneindia Kannada

ಸುಮಾತ್ರ, ಆಗಸ್ಟ್ 13: ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಭೂಕಂಪ ಇಂಡೋನೇಷ್ಯಾದ ಪಶ್ಚಿಮಕ್ಕಿರುವ ಸುಮಾತ್ರ ದ್ವೀಪದಲ್ಲಿ ಸಂಭವಿಸಿದೆ ಎಂದು ಅಮೆರಿಕಾ ಭೂಗರ್ಭ ಇಲಾಖೆ ಹೇಳಿದೆ.

ಚೀನಾದಲ್ಲಿ 7ರಷ್ಟು ತೀವ್ರತೆಯ ಪ್ರಬಲ ಭೂಕಂಪ

ಬಂಗ್ ಕುಲು ನಗರದಿಂದ 81 ಕಿಲೋಮೀಟರ್ ದೂರದಲ್ಲಿ, ಸುಮಾರು 67 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಭೂಗರ್ಭ ಇಲಾಖೆ ಹೇಳಿದೆ. ಸದ್ಯಕ್ಕೆ ಭೂಕಂಪದಿಂದ ಯಾವುದೇ ಹಾನಿ ಸಂಭವಿಸಿದ್ದು ವರದಿಯಾಗಿಲ್ಲ.

6.5 magnitude Earthquake strikes west of Indonesia's Sumatra Island

ಭೂಕಂಪ ತೀವ್ರವಾಗಿದ್ದರೂ ಸುನಾಮಿ ಏಳುವ ಸಾಧ್ಯತೆ ಇಲ್ಲ ಎಂದು ಇಂಡೋನೇಷ್ಯಾ ಹವಾಮಾನ ಇಲಾಖೆ ಹೇಳಿದೆ.

ಇನ್ನು "ಭೂಕಂಪದ ಪರಿಣಾಮ ತೀವ್ರವಾಗಿತ್ತು. ಹಲವು ನಿಮಿಷಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ," ಎಂದು ಸ್ಥಳೀಯರು ಹೇಳಿರುವುದಾಗಿ ಚಾನಲ್ ನ್ಯೂಸ್ ಏಷ್ಯಾ ವರದಿ ಮಾಡಿದೆ.

Fire accident in Ferry, Indonesia. 23 people are dead.

2016ರಲ್ಲಿ ಇಂಡೋನೇಷ್ಯಾದ ಅಚೆಹ್ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಹಿಂದೆ ಹಲವು ಭೂಕಂಪಗಳಿಗೆ ಈ ಸುಮಾತ್ರ ಪ್ರದೇಶ ಸಾಕ್ಷಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An earthquake of magnitude 6.5 struck west of Indonesia's island of Sumatra on Sunday (Aug 13), the United States Geological Survey (USGS) said.
Please Wait while comments are loading...