Breaking: ಸ್ಯಾಂಡ್‌ವಿಚ್ ದ್ವೀಪಗಳಲ್ಲಿ ಮತ್ತೊಮ್ಮೆ ಭೂಕಂಪ
ಜಾರ್ಜಿಯಾ,
ಅ.25: ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದ ಸ್ಯಾಂಡ್‌ವಿಚ್ ದ್ವೀಪಗಳಲ್ಲಿ ಮಂಗಳವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ಅಪ್ಡೇಟ್ ಪ್ರಕಾರ, ಭೂಕಂಪವು ದಕ್ಷಿಣ ಜಾರ್ಜಿಯಾದ ಕಿಂಗ್ ಎಡ್ವರ್ಡ್ ಪಾಯಿಂಟ್ ಬಳಿ ದಾಖಲಾಗಿದೆ. ಭೂಕಂಪನದಿಂದಾಗಿ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. id="toptextpromo"> id='are-slot-1' class='oiad oi-axt oiadv'>id='top-searched-articles'>
ಸೆಪ್ಟೆಂಬರ್
29ರಂದು ಬೆಳಗ್ಗೆ 8:33ರ ಸುಮಾರಿಗೆ 7.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪದ ಆಳವು ಭೂಮಿಯಿಂದ 10 ಕಿ.ಮೀ ಆಳದಲ್ಲಿತ್ತು. ಅಕ್ಟೋಬರ್ 25ರಂದು ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪ ದಾಖಲಾಗಿದೆ. ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದ ಸ್ಯಾಂಡ್‌ವಿಚ್ ದ್ವೀಪಗಳಲ್ಲಿ 139 ಕಿಲೋಮೀಟರ್ ಆಳದಲ್ಲಿ ಬೆಳಗ್ಗೆ 5:43 ಕ್ಕೆ (IST) ಭೂಕಂಪ ಸಂಭವಿಸಿದೆ. "ಭೂಕಂಪನದ ತೀವ್ರತೆ: 6.2 ರಿಕ್ಟರ್ ಮಾಪಕದ ಅಳತೆ, ಅಕ್ಷಾಂಶ: -58.68 & ರೇಖಾಂಶ: -26.15, ಆಳ: 139 ಕಿಮೀ, ಸ್ಥಳ: 800ಕಿಮೀ ಕಿಂಗ್ ಎಡ್ವರ್ಡ್ ಪಾಯಿಂಟ್ ಆಗ್ನೇಯ ಭಾಗ ಮತ್ತು ದಕ್ಷಿಣ ಜಾರ್ಜಿಯಾ ಹಾಗೂ ಸ್ಯಾಂಡ್‌ವಿಚ್ ದ್ವೀಪ ಸಮೂಹ" ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮಾಡಿದೆ.











Click it and Unblock the Notifications