ಬಾಂಗ್ಲಾದೇಶದ ಕಾರ್ಖಾನೆಯಲ್ಲಿ ಅಗ್ನಿ ದುರಂತ: 52 ಮಂದಿ ಸಜೀವ ದಹನ
ಢಾಕಾ, ಜು.09: ಬಾಂಗ್ಲಾದೇಶದ ಕಾರ್ಖಾನೆಯೊಂದರಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿಬಿದ್ದ ಕನಿಷ್ಠ 52 ಜನರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಕಾರ್ಮಿಕರು ಬೆಂಕಿ ತಗುಲಿ ಸಜೀವ ದಹನವಾಗುವುದನ್ನು ತಪ್ಪಿಸಲು ಕಟ್ಟಡದ ಮಹಡಿಯಿಂದ ಹಾರಿದ್ದಾರೆ ಎಂದು ತುರ್ತು ಸೇವೆಗಳು ಶುಕ್ರವಾರ ತಿಳಿಸಿವೆ.
ಬೆಂಕಿ ತಗುಲಿ ಸುಮಾರು 30 ಜನರು ಗಾಯಗೊಂಡಿದ್ದಾರೆ. ನೂರಾರು ಮಂದಿ ಕಾರ್ಖಾನೆಯ ಹೊರಗಡೆ ನಿಂತು ತಮ್ಮ ಸಂಬಂಧಿಕರಿಗೆ ರೋಧಿಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಕೈಗಾರಿಕಾ ಸಂಕೀರ್ಣಗಳು ಮತ್ತು ಅಪಾರ್ಟ್ಮೆಂಟ್ ಕಟ್ಟಡಗಳಲ್ಲಿನ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡಿಸುವ ಸರಣಿ ವಿಪತ್ತುಗಳಲ್ಲಿ ಈ ಪ್ರಕರಣವೂ ಒಂದಾಗಿದೆ.
2013 ರಲ್ಲಿ ನಡೆದ ರಾಣಾ ಪ್ಲಾಜಾ ದುರಂತದಲ್ಲಿ ಒಂಬತ್ತು ಅಂತಸ್ತಿನ ಸಂಕೀರ್ಣ ಕುಸಿದು 1,100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಆ ಬಳಿಕ ದೇಶವು ಸುಧಾರಣೆಯ ವಾಗ್ದಾನ ಮಾಡಿದೆ. ಆದರೆ ಸುರಕ್ಷತಾ ಮಾನದಂಡಗಳು ಇನ್ನೂ ಸಡಿಲವಾಗಿವೆ ಎಂದು ವಿಮರ್ಶಕರು ಹೇಳುತ್ತಾರೆ.

ಫೆಬ್ರವರಿ 2019 ರಲ್ಲಿ ಢಾಕಾದ ಅಪಾರ್ಟ್‌ಮೆಂಟ್‌ನಲ್ಲಿ ಅಕ್ರಮವಾಗಿ ರಾಸಾಯನಿಕಗಳನ್ನು ಸಂಗ್ರಹಿಸಿಟ್ಟಿದ ಪರಿಣಾಮ ಉಂಟಾದ ದುರಂತದಲ್ಲಿ ಕನಿಷ್ಠ 70 ಜನರು ಸಾವನ್ನಪ್ಪಿದ್ದರು.
ಗುರುವಾರ ಮಧ್ಯಾಹ್ನ ಢಾಕಾದ ಹೊರಗಿನ ಕೈಗಾರಿಕಾ ಪಟ್ಟಣವಾದ ರೂಪ್‌ಗಂಜ್‌ನಲ್ಲಿರುವ ಹಾಶೆಮ್ ಫುಡ್ ಅಂಡ್ ಡ್ರಿಂಕ್ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 24 ಗಂಟೆಗಳ ನಂತರವೂ ಈ ಬೆಂಕಿ ನಂದಿಸುವ ಕಾರ್ಯ ಸಫಲವಾಗಿಲ್ಲ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ, ಕಟ್ಟಡದಲ್ಲಿ 1,000 ಕ್ಕೂ ಹೆಚ್ಚು ಕಾರ್ಮಿಕರು ಇರುತ್ತಾರೆ. ಆದರೆ ಬೆಂಕಿ ಕಾಣಿಸಿಕೊಂಡ ದಿನ ಹಲವು ಮಂದಿ ಕಟ್ಟಡದಿಂದ ತೆರಳಿದ್ದರು ಎಂದು ಹೇಳಲಾಗಿದೆ. ಬೆಂಕಿ ಕಾಣಿಸಿಕೊಂಡ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಮೂರನೇ ಮಹಡಿಗೆ ತಲುಪಿ 49 ಶವಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಅಗ್ನಿಶಾಮಕ ಸೇವಾ ಸಲಕರಣೆಗಳು ದೇಬಾಶಿಶ್ ಬರ್ಧನ್, "ಮೆಟ್ಟಿಲುಗಳ ನಿರ್ಗಮನ ಬಾಗಿಲು ಬ್ಲಾಕ್ ಆಗಿದ್ದರಿಂದ ಕಾರ್ಮಿಕರಿಗೆ ಮೇಲ್ಛಾವಣಿಗೆ ಹೋಗಲು ಸಾಧ್ಯವಾಗಲಿಲ್ಲ. ಕೆಳ ಮಹಡಿಗಳು ಈಗಾಗಲೇ ಬೆಂಕಿಯಿಂದ ಮುಳುಗಿದ್ದರಿಂದ ಅವರಿಗೆ ಕೆಳಗಿಳಿಯಲು ಸಾಧ್ಯವಾಗಲಿಲ್ಲ," ಎಂದು ತಿಳಿಸಿದ್ದಾರೆ.
ಇನ್ನು ಈ ಬೆನ್ನಲ್ಲೇ ಹತ್ತಿರದ ರಸ್ತೆಗಳಲ್ಲಿ ಪ್ರಯಾಣ ನಿರ್ಬಂಧಿಸಲಾಗಿದೆ. ಆದರೆ ನೂರಾರು ಜನರು ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರು ಚದುರಿಸುವ ಕಾರ್ಯ ಮಾಡಿದ್ದಾರೆ. ಕೆಲವರು ಅಧಿಕಾರಿಗಳೊಂದಿಗೆ ಘರ್ಷಣೆ ನಡೆಸಿದರು.
"ಆರು ಅಂತಸ್ತಿನ ಕಟ್ಟಡದಲ್ಲಿ ಜ್ವಾಲೆ ಆವರಿಸಿದ್ದರಿಂದ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು ಕೆಲವರು ಮೇಲಿನ ಮಹಡಿಯಿಂದ ಹಾರಿದ್ದಾರೆ," ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಶೇಖ್ ಕಬೀರುಲ್ ಇಸ್ಲಾಂ ತಿಳಿಸಿದರು.
"ಬೆಂಕಿ ನಿಯಂತ್ರಣಕ್ಕೆ ಬಂದ ನಂತರ, ನಾವು ಒಳಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದ್ದೇವೆ. ನಂತರ ಯಾವುದೇ ಸಾವುನೋವುಗಳನ್ನು ದೃಢಪಟ್ಟಿಲ್ಲ. ಹೆಚ್ಚು ಸುಡುವ ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್‌ಗಳನ್ನು ಒಳಗೆ ಸಂಗ್ರಹಿಸಿರುವುದರಿಂದ ಬೆಂಕಿ ಹೊತ್ತಿಕೊಂಡಿದೆ," ಎಂದು ಢಾಕಾ ಅಗ್ನಿಶಾಮಕ ಮುಖ್ಯಸ್ಥ ದಿನು ಮೋನಿ ಶರ್ಮಾ ಹೇಳಿದ್ದಾರೆ.
ಇನ್ನು ಈ ದುರಂತದಲ್ಲಿ ತನ್ನ ಜೀವ ಉಳಿಸಿಕೊಂಡ ಕಾರ್ಖಾನೆಯ ಕೆಲಸಗಾರ ಮೊಹಮ್ಮದ್ ಸೈಫುಲ್, "ಬೆಂಕಿ ಕಾಣಿಸಿಕೊಂಡಾಗ ಡಜನ್‌ಗಟ್ಟಲೆ ಜನರು ಒಳಗೆ ಇದ್ದರು. ಮೂರನೇ ಮಹಡಿಯಲ್ಲಿ, ಎರಡೂ ಮೆಟ್ಟಿಲುಗಳ ಗೇಟ್‌ಗಳನ್ನು ಮುಚ್ಚಲಾಗಿದೆ. ಇತರ ಸಹೋದ್ಯೋಗಿಗಳು ಒಳಗೆ 48 ಜನರಿದ್ದರು ಎಂದು ಹೇಳುತ್ತಿದ್ದಾರೆ. ಅವರಿಗೆ ಏನಾಯಿತು ಎಂದು ನನಗೆ ತಿಳಿದಿಲ್ಲ," ಎಂದಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications