ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟರ್ಕಿಯಲ್ಲಿ ಮಿಲಿಟರಿ ಕ್ಷಿಪ್ರ ಆಕ್ರಮಣ ನಡೆಸಲು 5 ಕಾರಣ

By ವಿಕಾಸ್ ನಂಜಪ್ಪ
|
Google Oneindia Kannada News

ಶುಕ್ರವಾರ, ಜುಲೈ 15ರ ರಾತ್ರಿ ಮಿಲಿಟರಿಯಿಂದ ನಡೆದ ಕ್ಷಿಪ್ರ ಆಕ್ರಮಣ ಮೊದಲನೇಯದೇನಲ್ಲ. 1960ರಿಂದೀಚೆಗೆ ಟರ್ಕಿ ಇಂಥ ಮೂರು ಕ್ಷಿಪ್ರ ಆಕ್ರಮಣಗಳನ್ನು ಎದುರಿಸಿದೆ. ಮಿಲಿಟರಿಯಿಂದಾದ ಈ ದಾಳಿಯಲ್ಲಿ ಸಾಕಷ್ಟು ಪ್ರಾಣಹಾನಿಯುಂಟಾಗಿದ್ದರೂ ಮಿಲಿಟರಿಯಿಂದಾದ ದಂಗೆಯನ್ನು ಹೊಸಕಿಹಾಕಲಾಗಿದೆ. ಅಲ್ಲದೆ, ಟರ್ಕಿ ಸಾಕಷ್ಟು ಸಮಸ್ಯೆಗಳ ಗುಡ್ಡೆಯನ್ನು ಹಾಕಿಕೊಂಡಿದೆ.

ಮಿಲಿಟರಿಯ ದಾಳಿಗೆ ಸೇನೆಯೊಂದನ್ನೇ ಗುರಿ ಮಾಡುವಂತಿಲ್ಲ. ಕ್ಷಿಪ್ರ ಆಕ್ರಮಣವನ್ನು ಶಾಂತ ಮಾಡಿದರೂ ಅಧ್ಯಕ್ಷ ಎರ್ಡೋಗನ್ ಪದವಿಯಿಂದ ಇಳಿಯಬೇಕು ಎಂದು ಮಿಲಿಟರಿ ಸೇರಿದಂತೆ ಹಲವಾರು ನಾಗರಿಕರು ಕೂಡ ಇಚ್ಛಿಸುತ್ತಿದ್ದಾರೆ. ಎಲ್ಲ ಕಾರಣಗಳು ಕುದಿಯುವ ಹಂತಕ್ಕೆ ಬಂದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಮಿಲಿಟರಿ ಇಂಥ ಕಾರ್ಯಕ್ಕೆ ಕೈಹಾಕಲು 5 ಕಾರಣಗಳಿವೆ. [ಟರ್ಕಿ ಪ್ರಜಾಪ್ರಭುತ್ವದ ಮೇಲೆ ಮಿಲಿಟರಿ ದಾಳಿ, ಸಂಸತ್ ವಶ]

5 reasons why a military coup was staged in Turkey

ಮಿಲಿಟರಿ ಮತ್ತು ಅಧ್ಯಕ್ಷರ ನಡುವಿನ ಸಾಮರಸ್ಯದ ಕೊರತೆ : ಮಿಲಿಟರಿ ಜೊತೆಗೆ ಟರ್ಕಿ ಅಧ್ಯಕ್ಷ ರಿಸೆಪ್ ಟಯ್ಯಪಿ ಎರ್ಡೋಗನ್ ಹಾವು ಮುಂಗುಸಿ ಸಂಬಂಧ ಹೊಂದಿದ್ದಾರೆ. ಇಸ್ಲಾಮಿಕ್ ಧರ್ಮಗುರು ಫೆತುಲ್ಲಾ ಗುಲೆನ್ ಜೊತೆ ಸೇನೆಯಲ್ಲಿ ಹಲವಾರು ಅಧಿಕಾರಿಗಳು ಸ್ನೇಹ ಹೊಂದಿದ್ದಾರೆ ಎಂಬುದು ಎರ್ಡೋಗನ್‌ಗೆ ನುಂಗಲಾಗದ ಬಿಸಿತುಪ್ಪ. ಈ ಕಾರಣಕ್ಕಾಗಿಯೇ ಹಲವಾರು ಅಧಿಕಾರಿಗಳನ್ನು ಜೈಲಿಗಟ್ಟಿದ್ದರು. ಕ್ಷಿಪ್ರ ಆಕ್ರಮಣ ನಡೆಯಲು ಇದು ಪ್ರಮುಖ ಕಾರಣ.

ಸಂವಿಧಾನ ಬದಲಿಸಲು ಬೆಂಬಲವಿಲ್ಲ : ಟರ್ಕಿಯ ಸಂವಿಧಾನವನ್ನು ಬದಲಿಸಬೇಕೆಂಬುದು ಎರ್ಡೋಗನ್ ನಿರ್ಧಾರ. 2002ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಹಲವಾರು ಬಾರಿ ಇದಕ್ಕೆ ಪ್ರಯತ್ನ ನಡೆಸಿದ್ದರು. ಇದನ್ನು ಸಹಿಸದ ಅನೇಕ ಬೆಂಬಲಿಗರು ಕೂಡ ಅವರನ್ನು ತೊರೆದಿದ್ದಾರೆ. [ಟರ್ಕಿ: ದಾವಣಗೆರೆಯ ಕುಸ್ತಿಪಟು ಅರ್ಜುನ್ ಸುರಕ್ಷಿತ]

ಕೇಂದ್ರೀಕೃತ ಅಧಿಕಾರ : ಅಧಿಕಾರ ತನ್ನ ಸುತ್ತಲೇ ಕೇಂದ್ರೀಕೃತವಾಗಿರಬೇಕು ಎಂದು ಎರ್ಡೋಗನ್ ಬಯಸುತ್ತಾರೆ ಎಂಬುದು ಹಲವರ ಗುರುತರ ಆರೋಪ. ಒಂದಾನೊಂದು ಕಾಲದಲ್ಲಿ ಸ್ನೇಹಿತನಾಗಿದ್ದ ಗುಲೆನ್ ಜೊತೆ ಉತ್ತಮ ಸಂಬಂಧ ಹೊಂದಿದ್ದ ಸಂಪಾದಕರನ್ನು ಕೂಡ ಎರ್ಡೋಗನ್ ಕಿತ್ತು ಹಾಕಿದ್ದರು.

ಪಾಶ್ಚಿಮಾತ್ಯ ದೇಶದ ನಾಯಕರೊಂದಿಗಿನ ಸಂಬಂಧ : ಅವರಿವರಿರಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಜೊತೆಗೂ ಎರ್ಡೋಗನ್ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿಲ್ಲ. ಟರ್ಕಿ ಮತ್ತು ಅಮೆರಿಕದ ಸೇನೆಯೊಡನೆ ಉತ್ತಮ ಸಂಬಂಧವಿದೆ. ಆದರೆ, ವೈಯಕ್ತಿಕ ನೆಲೆಯ ಮೇಲೆ ಮಾತ್ರ. ಎರ್ಡೋಗನ್ ವಿರುದ್ಧ ದಂಗೆಯೇಳಲು ಇದೂ ಒಂದು ಕಾರಣ.

ಇಸ್ಲಾಮಿಕ್ ಮೌಲ್ಯಗಳು : ಇಸ್ಲಾಮಿಕ್ ಮೌಲ್ಯಗಳನ್ನು ಬಲವಂತವಾಗಿ ಹೇರುವಂಥ ಕಾನೂನು ಜಾರಿಗೆ ತರಲಾಗಿದೆ ಎಂಬುದು ಟರ್ಕಿ ಜನರ ಆರೋಪ. ಇಲ್ಲಿ ವಾಸಿಸುತ್ತಿರುವ ಬಹುತೇಕ ಮಂದಿಗೆ ಇಂಥ ಬಲವಂತದ ಧಾರ್ಮಿಕ ಆಚರಣೆಗಳು ಬೇಕಿಲ್ಲ.

English summary
Since year 1960 Turkey has witnessed three military coups. Recep Tayyip Erdogan, the Turkish President has had a blow hot blow cold relationship with the army. Here are the 5 reasons why a military coup was staged in Turkey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X