ನೇಪಾಳದಲ್ಲಿ 5.4 ಪ್ರಮಾಣದ ಪ್ರಬಲ ಭೂಕಂಪ

Posted By:
Subscribe to Oneindia Kannada

ಕಾಠಮಾಂಡು, ನವೆಂಬರ್ 28 : ಸೋಮವಾರ ಬೆಳಗಿನ ಜಾವ 5 ಗಂಟೆ 20 ನಿಮಿಷ 21 ಸೆಕೆಂಡಿಗೆ ನೇಪಾಳದಲ್ಲಿ 5.4 ಪ್ರಮಾಣದ ಪ್ರಬಲ ಭೂಕಂಪ ಸಂಭವಿಸಿದೆ.

ಭೂಕಂಪನದ ಕೇಂದ್ರ ನಮ್ಚೆ ಬಜಾರ್ ನಿಂದ 19 ಕಿ.ಮೀ. ದೂರದಲ್ಲಿದ್ದು, ಭೂಮಿಯ 10 ಕಿ.ಮೀ. ಆಳದಲ್ಲಿದೆ. ಯಾವುದೇ ಆಸ್ತಿಪಾಸ್ತಿ ಹಾನಿ, ಸಾವುನೋವು ಸಂಭವಿಸಿದ ವರದಿ ಬಂದಿಲ್ಲ.

5.4 magnitude strong earthquake hits Nepal

2015ರ ಏಪ್ರಿಲ್ ನಲ್ಲಿ ನೇಪಾಳದಲ್ಲಿ 7.8ರ ಪ್ರಮಾಣದ ಭಾರೀ ಭೂಕಂಪ ಸಂಭವಿಸಿ, ಹಲವಾರು ಪ್ರದೇಶಗಳನ್ನು ಸರ್ವನಾಶ ಮಾಡಿತ್ತು. 9 ಸಾವಿರಕ್ಕೂ ಹೆಚ್ಚು ಜನರು ಅಸುನೀಗಿ, 22 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಲಕ್ಷಾಂತರ ಜನರು ಮನೆಮಠ ಕಳೆದುಕೊಂಡಿದ್ದರು. [ಪವಾಡ : ಕಠ್ಮಂಡುವಿನಲ್ಲಿ ನಾಲ್ಕು ತಿಂಗಳ ಮಗುವಿನ ರಕ್ಷಣೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
5.4 magnitude strong earthquake has hit Nepal on Monday morning, epicenter at 19 kms from Namche Bazar. More information expected.
Please Wait while comments are loading...