ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳದಲ್ಲಿ ವಿಶ್ವದ ಅತಿದೊಡ್ಡ ಪ್ರಾಣಿಬಲಿ ಉತ್ಸವ

By Mahesh
|
Google Oneindia Kannada News

ಕಠ್ಮಂಡು, ನ.30: ವಿಶ್ವದ ಅತಿ ದೊಡ್ಡ ಪ್ರಾಣಿಬಲಿ ಉತ್ಸವ ಎನ್ನಲಾಗುವ ಗಧಿಮಾಯಿ ಜಾತ್ರೆ ನೇಪಾಳದಲ್ಲಿ ಸಂಪನ್ನವಾಗಿದೆ. ಪ್ರಾಣಿಪ್ರಿಯರ ವಿರೋಧದ ನಡುವೆಯೂ ದಕ್ಷಿಣ ನೇಪಾಳದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಎಮ್ಮೆಗಳನ್ನು ಬಲಿ ಹಾಕಲಾಗಿದೆ.

ದಕ್ಷಿಣ ನೇಪಾಳದ ಬರಿಯಾರ್ಪುರ್ ಗ್ರಾಮದಲ್ಲಿರುವ ಗಧಿಮಾಯಿ ದೇವಾಲಯದಲ್ಲಿ ನಡೆಯುವ ಎರಡು ದಿನಗಳ ಸಾಮೂಹಿಕ ಪ್ರಾಣಿ ಬಲಿ ಮೇಳ ಶುಕ್ರವಾರ ಆರಂಭಗೊಂಡಿದ್ದ್ದು, ಮೊದಲದಿನವೇ ಸುಮಾರು 400ಕ್ಕೂ ಅಧಿಕ ಕಟುಕರು 5 ಸಾವಿರಕ್ಕೂ ಅಧಿಕ ಎಮ್ಮೆಗಳನ್ನು ವಧಿಸಿದ್ದಾರೆ. ಪ್ರಾಣಿ ಹಕ್ಕು ಕಾರ್ಯಕರ್ತರ ತೀವ್ರ ವಿರೋಧದ ನಡುವೆಯೇ ಈ ಸಾಮೂಹಿಕ ಪ್ರಾಣಿ ಬಲಿ ನಡೆದಿದೆ.

ಐದು ವರ್ಷಗಳಿಗೊಮ್ಮೆ ನಡೆಯವ ಈ ಜಾತ್ರೆಯಲ್ಲಿ ಎಮ್ಮೆ, ಅದರಲ್ಲೂ ಮುಖ್ಯವಾಗಿ ಅವುಗಳ ಕರುಗಳನ್ನು ಸಾಮೂಹಿಕವಾಗಿ ಗಧಿಮಾಯಿ ದೇವತೆಗೆ ಬಲಿಕೊಡಲಾಗುತ್ತದೆ.

ಬಿಹಾರದ ಗಡಿಗೆ ಹೊಂದಿಕೊಂಡಿರುವ ಬಾರಾ ಜಿಲ್ಲೆಯಲ್ಲಿ ನಡೆಯುವ ಈ ಜಾತ್ರೆಗೆ ಭಾರತೀಯರು ಸೇರಿದಂತೆ ಸಾವಿರಾರು ಭಕ್ತರು ತೆರಳಿ ಬಲಿ ಸಮರ್ಪಿಸುತ್ತಾರೆ. ಇಲ್ಲಿ ಬಲಿ ನೀಡಲಾಗುವ ಎಮ್ಮೆ, ಮೇಕೆಗಳ ಪೈಕಿ ಶೇಕಡಾ 70ರಷ್ಟು ಭಾರತದಿಂದಲೇ ಸಾಗಾಟವಾಗುತ್ತದೆ.

5,000 buffaloes slaughtered in Nepal's animal sacrifice ritual

ಶನಿವಾರ ಜಾತ್ರೆ ಮುಕ್ತಾಯಗೊಳ್ಳುವ ಮುನ್ನ ಸಾವಿರಾರು ಸಂಖ್ಯೆಯಲ್ಲಿ ಆಡು, ಹಂದಿ ಹಾಗೂ ಕೋಳಿಗಳನ್ನು ಬಲಿ ನೀಡಲಾಗುತ್ತದೆ. ಇದೊಂದು ತಲೆತಲಾಂತರದಿಂದ ಬಂಧಿರುವ ಧಾರ್ಮಿಕ ಸಂಪ್ರದಾಯವಾಗಿದೆ ಎಂದು ಈ ಕಾರ್ಯಕ್ರಮದ ಸಂಘಟಕರು ಸಮರ್ಥಿಸಿಕೊಂಡಿದ್ದಾರೆ.

ಜಾತ್ರೆಯ ಜನಜಂಗುಳಿಯ ವೇಳೆ ಬಿಹಾರದ ಓರ್ವ ವೃದ್ಧೆ ಹಾಗೂ ಒಂದು ವರ್ಷ ಪ್ರಾಯದ ಮಗು ಸಾವಿಗೀಡಾಗಿರುವ ಸುದ್ದಿಯೂ ಬಂದಿದೆ. 2009ರಲ್ಲಿ ನಡೆದ ಜಾತ್ರೆಯ ವೇಳೆ 25 ಸಾವಿರ ಎಮ್ಮೆಗಳನ್ನು ಬಲಿನೀಡಲಾಗಿದ್ದು, ಸಾಮೂಹಿಕ ಬಲಿಗೆ ಒಳಗಾಗಿರುವ ಇತರ ಪ್ರಾಣಿಪಕ್ಷಿಗಳ ಸಂಖ್ಯೆ ತಿಳಿದು ಬಂದಿಲ್ಲ.

ಈ ನಡುವೆ ಪ್ರಾಣಿಗಳನ್ನು ಬಲಿ ನೀಡುವುದರ ವಿರುದ್ಧ ಪ್ರಾಣಿ ದಯಾ ಸಂಘಗಳು ಸಾಕಷ್ಟು ಜಾಗೃತಿ ಮೂಡಿಸಿವೆ.ಬ್ರಿಟಿಷ್ ನಟಿ ಜೋಹಾನ್ನ ಲುಮ್ಲೆ, ಫ್ರೆಂಚ್ ನಟಿ ಬ್ರಿಗಿಟ್ಟೆ ಬಾರ್ಡಾಟ್ ಅವರು ನೇಪಾಳದ ಸರ್ಕಾರಕ್ಕೆ ಈ ಕ್ರೂರ ಕಾರ್ಯಕ್ರಮ ನಿಲ್ಲಿಸುವಂತೆ ಮನವಿ ಸಲ್ಲಿಸಿದ್ದಾರೆ.

ಭಾರತದಿಂದ ನೇಪಾಳಕ್ಕೆ ಪ್ರಾಣಿಗಳ ಸಾಗಣೆಗೆ ಕಳೆದ ತಿಂಗಳು ಸುಪ್ರೀಂಕೋರ್ಟ್ ನಿಷೇಧ ಹೇರಿತ್ತು. ಇದರಿಂದಾಗಿ ಈ ಬಾರಿ ಬಲಿಯಾಗಲಿರುವ ಪ್ರಾಣಿಗಳ ಸಂಖ್ಯೆಯಲ್ಲಿ ಇಳಿಕೆಯಾಗಲಿದೆ. ಆದರೆ, ಕಳೆದ ಮೂರು ತಿಂಗಳುಗಳಿಂದ ಮಾರುಕಟ್ಟೆಗಳಲ್ಲಿ ಜನರು ಬಲಿಗಾಗಿ 1.25 ಲಕ್ಷ ಮೇಕೆಗಳನ್ನು ಖರೀದಿಸಿರುವ ಮಾಹಿತಿ ಹೊರಬಿದ್ದಿದೆ.(ಪಿಟಿಐ)

English summary
Over 5,000 buffaloes have been slaughtered in a mass animal sacrifice festival in Nepal, believed to be the world's largest such ritual, despite efforts by animal rights activists to end the "barbaric" practice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X