ಪೆನ್ಸಿಲ್ವೆನಿಯಾದಲ್ಲಿ ಶೂಟೌಟ್: ನಾಲ್ವರು ಬಲಿ

ಪೆನ್ಸಿಲ್ವೇನಿಯಾ, ಜನವರಿ 29: ಅಮೆರಿಕದ ಪೆನ್ಸಿಲ್ವೀನಿಯಾದಲ್ಲಿ ಭಾನುವಾರ(ಜ.28) ನಡೆದ ಶೂಟೌಟ್ ವೊಂದರಲ್ಲಿ 4 ಜನ ಮೃತರಾಗಿದ್ದಾರೆ.

ಕುಟುಂಬ ಕಲಹವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಇಲ್ಲಿನ ಈಡ್ ಎಂಬಲ್ಲಿನ ಕಾರ್ ವಾಶ್ ಸೆಂಟರ್ ನಲ್ಲಿ ಘಟನೆ ನಡೆದಿದ್ದು, 28 ವರ್ಷದ ತಿಮೋಟಿ ಒ ಬ್ರಿಯಾನ್ ಸ್ಮಿತ್ ಎಂಬ ಯುವಕ ಪೋರ್ಟರ್ಫೀಲ್ಡ್(27), ಚೆಲ್ಸಿ ಕ್ಲೈನ್(25), ಕೋರ್ಟ್ನಿ ಸ್ನಿಡರ್(23), ಮತ್ತು ಸೇಟ್ ಕ್ಲೈನ್(21) ಎಂಬ ನಾಲ್ವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ.

ಶೂಟೌಟ್ ಸಮಯದಲ್ಲಿ ದುಷ್ಕರ್ಮಿ 30 ಬಾರಿ ಗುಂಡು ಹಾರಿಸಿದ್ದಾಗಿ ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ನಾಲ್ವರ ಮೇಲೂ ಗುಂಡು ಹಾರಿಸಿದ ನಂತರ ದುಷ್ಕರ್ಮಿ ತನ್ನ ಮೇಳೂ ಗುಂಡು ಹಾರಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಇದರಿಂದಾಗಿ ಆತನಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

4 people dead in a shootout in Pennsylvania, US
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+