ಅಮೆರಿಕಾ: ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆಯುತ್ತಿದ್ದಾಗ ಅವಘಡ- 3 ಭಾರತೀಯರ ಸಾವು
ವಾಷಿಂಗ್ಟನ್, ಡಿಸೆಂಬರ್ 28: ಅಮೆರಿಕದ ಅರಿಝೋನಾ ರಾಜ್ಯದಲ್ಲಿ ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಮಂಜುಗಡ್ಡೆಯಲ್ಲಿ ಹುದುಗಿಹೋಗಿ ಓರ್ವ ಮಹಿಳೆ ಸೇರಿದಂತೆ ಮೂವರು ಭಾರತೀಯ-ಅಮೆರಿಕನ್ನರು ಪ್ರಾಣ ಕಳೆದುಕೊಂಡಿದ್ದಾರೆ.
ಅರಿಜೋನಾದ ಕೊಕೊನಿನೊ ಕೌಂಟಿಯಲ್ಲಿರುವ ವುಡ್ಸ್ ಕ್ಯಾನ್ಯನ್ ಲೇಕ್‌ನಲ್ಲಿ ಡಿಸೆಂಬರ್ 26 ರಂದು ಮಧ್ಯಾಹ್ನ 3:35 ಕ್ಕೆ ಈ ಘಟನೆ ಸಂಭವಿಸಿದೆ.
'ಮಂಜುಗಡ್ಡೆಯಲ್ಲಿ ಹುದುಗಿಹೋದ ಪುರುಷರು ಮೃತರಾಗಿದ್ದಾರೆ. ಇವರನ್ನು ನಾರಾಯಣ ಮುದ್ದಣ (49) ಮತ್ತು ಗೋಕುಲ್ ಮೆಡಿಸೆಟಿ (47) ಎಂದು ಗುರುತಿಸಲಾಗಿದೆ. ಸಂತ್ರಸ್ತ ಮಹಿಳೆಯನ್ನು ಹರಿತಾ ಮುದ್ದಣ ಎಂದು ಗುರುತಿಸಲಾಗಿದೆ. ಇವರ ವಯಸ್ಸಿನ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ. ಮೂವರು ಸಂತ್ರಸ್ತರು ಅರಿಜೋನಾದ ಚಾಂಡ್ಲರ್‌ನಲ್ಲಿ ನೆಲೆಸಿದ್ದರು. ಇವರು ಮೂಲತಃ ಭಾರತದವರು' ಎಂದು ಕೊಕೊನಿನೊ ಕೌಂಟಿ ಶೆರಿಫ್ ಕಚೇರಿ (CCSO) ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

ಈ ದುರಂತ ಚಾಂಡ್ಲರ್ ನಗರದಲ್ಲಿ ಸಂಭವಿಸಿದೆ. ಇದು ಫೀನಿಕ್ಸ್‌ನ ಉಪನಗರವಾಗಿದೆ.
ಶೀಘ್ರದಲ್ಲೇ ಹರಿತಾರನ್ನು ಮಂಜುಗಡ್ಡೆಯಿಂದ ಹೊರತೆಗೆಯಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೀವ ಉಳಿಸುವ ಎಲ್ಲ ಯತ್ನಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ ಮತ್ತು ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದ್ದಾರೆ.
ನಂತರ ಸಿಬ್ಬಂದಿಯು ನಾರಾಯಣ ಮತ್ತು ಮೆಡಿಸೇಟಿಯನ್ನು ಹುಡುಕಲು ಪ್ರಾರಂಭಿಸಿದರು. ಅವರು ಸಹ ಸರೋವರದಲ್ಲಿ ಮುಳುಗಿ ಹೋಗಿದ್ದಾರೆ. ಮಂಗಳವಾರ ಮಧ್ಯಾಹ್ನ ಈ ಇಬ್ಬರು ವ್ಯಕ್ತಿಗಳು ಶವವಾಗಿ ಪತ್ತೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.
ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.

CCSO ಯ ಅಧಿಕಾರಿಗಳು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಇಬ್ಬರು ಪುರುಷರು ಮತ್ತು ಮಹಿಳೆ ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆದು ಹೋಗುತ್ತಿದ್ದಾಗ ಮಂಜುಗಡ್ಡೆಯಲ್ಲಿ ಮುಳುಗಿದ್ದಾರೆ.
ವುಡ್ಸ್ ಕ್ಯಾನ್ಯನ್ ಸರೋವರವು ಅಪಾಚೆ-ಸಿಟ್‌ಗ್ರೀವ್ಸ್ ರಾಷ್ಟ್ರೀಯ ಅರಣ್ಯಗಳಲ್ಲಿ ಪೂರ್ವದಲ್ಲಿದೆ. ಇದು ಪಾದಯಾತ್ರಿಕರು, ಗಾಳಹಾಕಿ ಮೀನು ಹಿಡಿಯುವವರು ಮತ್ತು ಇತರ ಹೊರಾಂಗಣ ಸಾಹಸಿಗಳಲ್ಲಿ ಜನಪ್ರಿಯವಾಗಿರುವ ಪ್ರದೇಶವಾಗಿದೆ.
ಹಿಮದಿಂದಾಗಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಅಮೆರಿಕನ್ನರು ಮತ್ತು ಕೆನಡಿಯನ್ನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.












Click it and Unblock the Notifications