ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15000 ವಿಜ್ಞಾನಿಗಳಿಂದ ಮನುಕುಲಕ್ಕೆ ಎಚ್ಚರಿಕೆ

By Manjunatha
|
Google Oneindia Kannada News

ನವೆಂಬರ್ 14 : 'ವಾತಾವರಣ ಸಂಬಂಧಿಸಿದ ಸಮಸ್ಯೆಗಳು ಮತ್ತಷ್ಟು ಹೆಚ್ಚುತ್ತಾ ಹೋಗುತ್ತಿವೆ, ಈಗಾಗಲೇ ಅವು ಅಂತಿಮ ಘಟ್ಟದ ಹತ್ತಿರ ಬಂದಿದ್ದು ಮನುಕುಲ ಅತ್ಯಂತ ಕಠಿಣ ದಿನಗಳನ್ನು ಎದುರಿಸಲಿದೆ, ಈಗಲೇ ಎಚ್ಚೆತ್ತುಕೊಳ್ಳಿ' 184 ದೇಶದ 15000 ಮಂದಿ ವಿಜ್ಞಾನಿಗಳು ಸಹಿ ಮಾಡಿರುವ 'ಮನುಕುಲಕ್ಕೆ ಎಚ್ಚರಿಕೆ; ಪತ್ರ 2'ದ ಒಕ್ಕಣೆ ಇದು.

ಪ್ರಳಯಕ್ಕೆ ಹೊಸ ದಿನಾಂಕ ನಿಗದಿ, ನವೆಂಬರ್ 19!ಪ್ರಳಯಕ್ಕೆ ಹೊಸ ದಿನಾಂಕ ನಿಗದಿ, ನವೆಂಬರ್ 19!

ವಿಜ್ಞಾನಿಗಳು ಸಾಮೂಹಿಕವಾಗಿ 'ಮನುಕುಲಕ್ಕೆ ಎಚ್ಚರಿಕೆ' ಪತ್ರ ಬರೆದ 25 ವರ್ಷದ ನಂತರ ಎರಡನೇ ಪತ್ರ ಬರೆಯುತ್ತಿದ್ದಾರೆ. ಈ ಹಿಂದೆ 1700 ವಿಜ್ಞಾನಿಗಳು ಸಹಿ ಮಾಡಿದ್ದ ಮೊದಲ ಪತ್ರ 1992 ರಲ್ಲಿ ಬಿಡುಗಡೆ ಆಗಿತ್ತು. ಪ್ರಸ್ತುತ ಬಿಡುಗಡೆ ಆಗಿರುವ ಪತ್ರವು ಖ್ಯಾತ ವಿಜ್ಞಾನ ಪತ್ರಿಕೆ 'ಬಯೊ ಸೈನ್ಸ್' ನಲ್ಲಿ ಪ್ರಕಟವಾಗಿದೆ.

15000 scientist warns mankind

1992 ರಿಂದ ಈಚೆಗೆ ಜಗತ್ತಿನ ಜನಸಂಖ್ಯೆಯಲ್ಲಿ 100 ಕೋಟಿ ಹೆಚ್ಚಳವಾಗಿದೆ. ಇದರ ನಿಯಂತ್ರಣ ಸಾಧ್ಯವಾಗದೆ ಇದ್ದರೆ ಸಂಪನ್ಮೂಲಗಳ ಕೊರತೆ ಮುಂದಿನ ದಿನಗಳಲ್ಲಿ ಎದುರಾಗಲಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು.

ವಿಜ್ಞಾನಿಗಳ ಪತ್ರದಲ್ಲಿ ಜಾಗತಿಕ ತಾಪಮಾನದ ಹೆಚ್ಚಳದ ಬಗ್ಗೆಯೂ ಆತಂಕ ಸೂಚಿಸಲಾಗಿದೆ ಹಾಗೂ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಅತಿಯಾದ ವಾಹನಗಳ ಬಳಕೆ, ಹೆಚ್ಚುತ್ತಿರುವ ನಗರೀಕರಣ, ಅರಣ್ಯ ನಿರ್ಣಾಮ, ಕುಡಿಯುವ ನೀರಿನ ಅಭಾವ, ಜನನ ಮತ್ತು ಮರಣ ಪ್ರಮಾಣದಲ್ಲಿ ಇಲ್ಲದ ಸಮತೋಲನ ಇವುಗಳ ಬಗ್ಗೆಯೂ ದೀರ್ಘ ಉಲ್ಲೇಖ ಇದೆ.

"ಮನುಕುಲ ಅತ್ಯಂತ ಕಠಿಣ ದಿನಗಳನ್ನು ಎದುರಿಸಲಿದೆ, ಈ ಬಗ್ಗೆ ಕೊಡುತ್ತಿರುವ ಇದು ಎರಡನೇ ಎಚ್ಚರಿಕೆ ಇದು, ಎಚ್ಚೆತ್ತುಕೊಳ್ಳದಿದ್ದರೆ ವಿನಾಶ ಕಟ್ಟಿಟ್ಟಬುತ್ತಿ' ಎಂದು ಪತ್ರದಲ್ಲಿ ಹೇಳಲಾಗಿದೆ.

English summary
More than 15000 scientist issued a "warning to humanity' about dangers to the environment, a new update released on monday says most of the planet's problems are getting worse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X