ಬಾಂಗ್ಲಾ ರೊಹಿಂಗ್ಯಾ ಶಿಬಿರದ ಅಗ್ನಿ ಅವಘಡದಲ್ಲಿ 15 ಮಂದಿ ಸಾವು

ಕಾಕ್ಸ್ ಬಝಾರ್, ಮಾರ್ಚ್ 23: ದಕ್ಷಿಣ ಬಾಂಗ್ಲಾದೇಶದ ಕಾಕ್ಸ್‌ ಬಜಾರ್‌ನಲ್ಲಿನ ರೊಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಸಂಭವಿಸಿದ ಭಾರೀ ಅಗ್ನಿ ಅನಾಹುತದಲ್ಲಿ ಹದಿನೈದು ಮಂದಿ ಮೃತಪಟ್ಟು ಸುಮಾರು 400 ಮಂದಿ ಸುಳಿವು ಪತ್ತೆಯಾಗಿಲ್ಲ.

ಸೋಮವಾರ ಮಧ್ಯಾಹ್ನ 3.30ರ ಸಮಯದಲ್ಲಿ ರೊಹಿಂಗ್ಯಾ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. 34 ಶಿಬಿರಗಳ ಪೈಕಿ ಕಾಕ್ಸ್‌ ಬಜಾರ್‌ನ ಬಲುಖಲಿ ಒಂದನೇ ಶಿಬಿರದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ನಂತರ ವ್ಯಾಪಿಸಿ ದಟ್ಟ ಹೊಗೆ ಆವರಿಸಿದೆ. ಘಟನೆಯಲ್ಲಿ ಇದುವರೆಗೂ 15 ಮಂದಿ ಮೃತಪಟ್ಟಿರುವುದು ಮಂಗಳವಾರ ದೃಢಪಟ್ಟಿದೆ. 560 ಮಂದಿ ಗಾಯಗೊಂಡಿದ್ದು, ಇನ್ನೂ 400 ಮಂದಿಯ ಸುಳಿವು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಶಿಬಿರದಲ್ಲಿದ್ದ ಸುಮಾರು 10,000 ಮನೆಗಳು ದಟ್ಟ ಬೆಂಕಿಗೆ ಆಹುತಿಯಾಗಿವೆ. ಘಟನೆ ನಡೆಯುತ್ತಿದ್ದಂತೆ ಸುಮಾರು 20 ಸಾವಿರ ಮಂದಿ ಸ್ಥಳಾಂತರಗೊಂಡಿದ್ದಾರೆ.

15 Dies In Fire Accident At Rohingya Camp In Bangladesh

ಬಾಂಗ್ಲಾದೇಶದ ಈ ನಿರಾಶ್ರಿತ ಶಿಬಿರಗಳಲ್ಲಿ ಸುಮಾರು ಹತ್ತು ಲಕ್ಷ ರೊಹಿಂಗ್ಯಾ ನಿರಾಶ್ರಿತರು ವಾಸಿಸುತ್ತಿದ್ದರು. 2017ರಲ್ಲಿ ಮ್ಯಾನ್ಮಾರ್‌ನ ರಖಿನ್ ರಾಜ್ಯದಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಗೆ ಬೆದರಿ ನೆರೆಯ ಬಾಂಗ್ಲಾದೇಶಕ್ಕೆ ಬಂದು ಇವರು ನೆಲೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+