ಹೆಣ್ಣುಮಕ್ಕಳೇ ಇಲ್ಲಿ ಕೇಳಿ..! ನೇಲ್ ಪಾಲಿಶ್ ರಿಮೂವರ್ ಬಾಟಲ್ ಸ್ಫೋಟ, ಬಾಲಕಿ ಸ್ಥಿತಿ ಗಂಭೀರ

ಸೌಂದರ್ಯ ವರ್ಧಕಗಳನ್ನು ಬಳಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಕೆಲವು ಸೌಂದರ್ಯ ವರ್ಧಕಗಳನ್ನು ಬಳಸಿ ನಿಮ್ಮ ಚರ್ಮಕ್ಕೆ ಹಾನಿಯಾದರೆ, ಇನ್ನೂ ಕೆಲವೊಮ್ಮೆ ಬಳಸುವ ರೀತಿ ತಪ್ಪಿದರೆ ಜೀವಕ್ಕೆ ಆಪತ್ತು ತರಬಹುದು. ಇಂತಹದ್ದೇ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ನೇಲ್ ಪಾಲಿಶ್ ರಿಮೂವರ್ ಬಾಲಕಿಯ ಜೀವಕ್ಕೆ ಆಪತ್ತು ತಂದಿದೆ.

ಅಮೆರಿಕದ ಓಹಿಯೋದಲ್ಲಿ ಈ ಘಟನೆ ನಡೆದಿದ್ದ ಕೆನಡಿ ಎಂಬ 14 ವರ್ಷದ ಬಾಲಕಿ ಗಂಭೀರ ಗಾಯಗೊಂಡಿದ್ದಾಳೆ. ಕೆನಡಿ ಸೌಂದರ್ಯ ವರ್ಧಕಗಳ ಬಗ್ಗೆ ಆಸ್ತಿ ಇರುವ ಬಾಲಕಿಯಾಗಿದ್ದು, ತಾನು ಮೊದಲು ಹಚ್ಚಿದ ನೇಲ್ ಪಾಲಿಶ್ ತೆಗೆದು, ಹೊಸದಾದ ಬಣ್ಣ ಹಚ್ಚಬೇಕು ಎಂದುಕೊಂಡಿದ್ದಾಳೆ. ಹೀಗಾಗಿ ಮನೆಯಲ್ಲಿದ್ದ ನೇಲ್ ಪಾಲಿಶ್ ರಿಮೂವರ್ ತೆಗೆದುಕೊಂಡು ತನ್ನ ಬೆಡ್‌ ಮೇಲೆ ಕಳಿತು ನೇಲ್ ಪಾಲಿಶ್ ರಿಮೂವರ್ ಬಳಸಿದ್ದಾಳೆ.

14 years Girl Suffers Third Degree Burns After Using Nail Polish Remover

ಈ ಸಂದರ್ಭದಲ್ಲಿ ಕೆನಡಿ ಮಾಡಿದ ಒಂದು ಚಿಕ್ಕ ತಪ್ಪು ಆಕೆಯ ಜೀವಕ್ಕೆ ಸಂಚಕಾರ ತಂದಿತ್ತು. ಕೆನಡಿ ನೇಲ್ ಪಾಲಿಶ್ ರಿಮೂವರ್ ಬಳಸುವ ವೇಳೆ ತನ್ನ ಬೆಡ್‌ ಬಳಿ ಮೇಣದ ಬತ್ತಿಯೊಂದನ್ನು ಹಚ್ಚಿಟ್ಟುಕೊಂಡಿದ್ದಾಳೆ. ನೇಲ್ ಪಾಲಿಶ್ ರಿಮೂವರ್ ಮೇಣದ ಬತ್ತಿ ಸಮೀಪವೇ ಇದ್ದು, ಅದೇನಾಯ್ತೋ ಗೊತ್ತಲ್ಲ. ಕೇವಲ ಬಳಿ ಮೇಣದ ಬತ್ತಿ ಬಿಸಿಗೆ ನೇಲ್ ಪಾಲಿಶ್ ರಿಮೂವರ್ ಬಾಟಲಿ ಏಕಾಏಕಿ ಸ್ಫೋಟಗೊಂಡಿದೆ. ಇದಾದ ಬಳಿಕ ನಡೆದ ಘಟನೆ ನಿಜಕ್ಕೂ ದುರಂತ.

ನೇಲ್ ಪಾಲಿಶ್ ರಿಮೂವರ್ ಬಾಟಲಿ ಸ್ಫೋಟಗೊಳ್ಳುತ್ತಿದ್ದಂತೆ ಅದರ ಒಳಗಿದ್ದ ಲಿಕ್ವೀಡ್‌ ಬೆಡ್‌ ಮೇಲೆ ಬಿದ್ದಿದ್ದು, ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಸಂಪೂರ್ಣ ಬೆಡ್‌ ಹೊತ್ತಿ ಉರಿದಿದ್ದು, ಬೆಡ್‌ ಮೇಲೆ ಕುಳಿತಿದ್ದ ಕೆನಡಿ ಬೆಂಕಿಯಲ್ಲಿ ಬೆಂದು ಹೋಗಿದ್ದಾಳೆ. ಮನೆಯಲ್ಲಿ ಅಗ್ನಿಅವಘಡ ಸಂಭವಿಸುತ್ತಿದ್ದಂತೆ ಆಕೆಯ ಪೋಷಕರು ಆಕೆಯನ್ನು ರಕ್ಷಿಸಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

14 years Girl Suffers Third Degree Burns After Using Nail Polish Remover

ಬೆಂಕಿಯಲ್ಲಿ ಸಿಲುಕಿ ಗಾಯಗೊಂಡಿದ್ದ ಕೆನಡಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಕಂಡು ವೈದ್ಯರೇ ಹೌಹಾರಿದ್ದಾರೆ. ಕೂಡಲೇ ವೈದ್ಯರು ಆಕೆಯ ಚಿಕಿತ್ಸೆ ಆರಂಭಿಸಿದ್ದು, ಎರಡು ತಿಂಗಳುಗಳ ಕಾಲ ನಿರಂತರ ಚಿಕಿತ್ಸೆ ನೀಡಿದ್ದಾರೆ. ಸುಮಾರು ಆರರಿಂದ ಹತ್ತು ವಿವಿಧ ಚಿಕಿತ್ಸೆಯನ್ನು ಕೆನಡಿಗೆ ವೈದ್ಯರು ನೀಡಿದ್ದು, ಎರಡು ತಿಂಗಳ ಬಳಿಕ ಬಾಲಕಿ ಸುಧಾರಿಸಿಕೊಂಡಿದ್ದಾಳೆ. ಆದರೆ ಆಕೆಯ ಒಂದು ಭಾಗ ಸಂಪೂರ್ಣ ಸುಟ್ಟುಹೋಗಿದ್ದು, ಕೈಗೆ ಗಂಭೀರ ಗಾಯವಾಗಿದೆ. ಸದ್ಯ ಕೆನಡಿಗೆ ಚಿಕಿತ್ಸೆ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+