• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಾತಂತ್ರ್ಯೋತ್ಸವ ದಿನದಂದೇ ಉಗ್ರರ ದಾಳಿ: ಎಲ್ಲಿ ಗೊತ್ತಾ..?

|
Google Oneindia Kannada News

ಉಗ್ರರ ಉಪಟಳದಿಂದ ಬೆಚ್ಚಿಬಿದ್ದಿರುವ ಅಫ್ಘಾನಿಸ್ತಾನದಲ್ಲಿ ದಿಢೀರ್ ರಾಕೆಟ್ ದಾಳಿ ನಡೆದಿದೆ. ದೀಪಾವಳಿ ದಿನದ ರಾಕೆಟ್ ನಂತೆ ತೂರಿಬಂದ ಹತ್ತಾರು ರಾಕೆಟ್‌ಗಳು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಿವಾಸಿಗಳನ್ನು ಬೆಚ್ಚಿಬೀಳಿಸಿವೆ.

ಅಫ್ಘಾನಿಸ್ತಾನದಲ್ಲಿ 101ನೇ ಸ್ವಾತಂತ್ರೋತ್ಸವ ಸಂಭ್ರಮ ಕಳೆಗಟ್ಟಿತ್ತು. ಅದರಲ್ಲೂ ರಾಜಧಾನಿ ಕಾಬೂಲ್‌ನಲ್ಲಿ ಈ ಬಾರಿಯ ಸ್ವಾತಂತ್ರೋತ್ಸವ ಆಚರಣೆಗೆ ಭರದ ಸಿದ್ಧತೆ ಸಾಗಿತ್ತು. ಆದರೆ ದಿಢೀರ್ ಎಂದು ಸುಮಾರು 14 ರಾಕೆಟ್‌ಗಳು ಒಂದರ ನಂತರ ಒಂದು ಕಾಬೂಲ್‌ನತ್ತ ತೂರಿ ಬಂದಿವೆ.

ಜಲಾಲಾಬಾದ್ ಜೈಲಿನಲ್ಲಿ ರಕ್ತದೋಕುಳಿ ಹರಿಸಿದ ಉಗ್ರಜಲಾಲಾಬಾದ್ ಜೈಲಿನಲ್ಲಿ ರಕ್ತದೋಕುಳಿ ಹರಿಸಿದ ಉಗ್ರ

ಇಷ್ಟು ರಾಕೆಟ್‌ಗಳನ್ನು ಕಂಡು ಅಫ್ಘಾನಿಸ್ತಾನದ ಭದ್ರತಾ ಪಡೆಗಳು ಹಾಗೂ ಕಾಬೂಲ್ ನಿವಾಸಿಗಳು ದಿಕ್ಕೆಟ್ಟು ಓಡಿದ್ದಾರೆ. ಬಹುಪಾಲು ರಾಕೆಟ್‌ಗಳು ಜನವಸತಿ ಪ್ರದೇಶದ ಮೇಲೆಯೇ ಬಿದ್ದಿವೆ ಎನ್ನಲಾಗಿದೆ.

ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಹಾಗೇ ಅಫ್ಘಾನ್‌ ಅಧ್ಯಕ್ಷರ ಮನೆ ಸೇರಿದಂತೆ ವಿದೇಶಿ ರಾಯಭಾರ ಕಚೇರಿಗಳು ಕೂಡ ಹಾನಿಗೀಡಾಗಿವೆ. ಕಾಬೂಲ್‌ನ ಪೂರ್ವ ಹಾಗೂ ಉತ್ತರ ಭಾಗದಿಂದ 3 ವಾಹನಗಳ ಮೂಲಕ ರಾಕೆಟ್‌ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ಪೋಷಿತ 6500 ಉಗ್ರರು!ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ಪೋಷಿತ 6500 ಉಗ್ರರು!

ಆದರೆ ಈವರೆಗೂ ಯಾವುದೇ ಉಗ್ರಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ. ಇಷ್ಟೆಲ್ಲಾ ಗೊಂದಲಗಳ ಮಧ್ಯೆ ತಾಲಿಬಾನ್ ಮೇಲೆಯೇ ಎಲ್ಲರಿಗೂ ಅನುಮಾನವಿದೆ. ಆದರೆ ತಾಲಿಬಾನ್‌ ಉಗ್ರರು ಈವರೆಗೂ ದಾಳಿಯ ಹೊಣೆ ಹೊತ್ತಿಲ್ಲ.

100ಕ್ಕೂ ಹೆಚ್ಚು ಉಗ್ರರು ರಿಲೀಸ್..!

100ಕ್ಕೂ ಹೆಚ್ಚು ಉಗ್ರರು ರಿಲೀಸ್..!

ತಾಲಿಬಾನ್ ಜೊತೆಗೆ ಅಫ್ಘಾನ್‌ ಸರ್ಕಾರದ ಸಂಘರ್ಷ ಇಂದು, ನಿನ್ನೆಯದಲ್ಲ. ಹಲವು ದಶಕಗಳಿಂದಲೂ ಉಗ್ರರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದೇ ಅಫ್ಘಾನಿಸ್ತಾನ ನಲುಗಿಹೋಗಿದೆ. ಅದರಲ್ಲೂ ಅಫ್ಘಾನ್‌ನಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ತಾಲಿಬಾನ್ ಎದುರು ಮಂಡಿಯೂರುವ ಸ್ಥಿತಿ ಇದೆ. ಈಗಿನ ಅಧ್ಯಕ್ಷ ಅಶ್ರಫ್ ಘನಿ ಕೂಡ ಅವಕಾಶ ಸಿಕ್ಕಾಗಲೆಲ್ಲಾ ತಾಲಿಬಾನ್ ನಾಯಕರ ಜೊತೆ ಸ್ನೇಹ ಪೂರ್ವಕ ಚರ್ಚೆಗೆ ಮುಂದಾಗುತ್ತಿದ್ದಾರೆ. ಆದರೆ ಅದ್ಯಾವುದೂ ಈಡೇರುತ್ತಿಲ್ಲ.

100ಕ್ಕೂ ಹೆಚ್ಚು ತಾಲಿಬಾನಿಗಳು ಬಿಡುಗಡೆ

100ಕ್ಕೂ ಹೆಚ್ಚು ತಾಲಿಬಾನಿಗಳು ಬಿಡುಗಡೆ

ಕೆಲದಿನಗಳ ಹಿಂದೆಯಷ್ಟೇ 100ಕ್ಕೂ ಹೆಚ್ಚು ತಾಲಿಬಾನಿ ಉಗ್ರರನ್ನು ಇದೇ ಅಶ್ರಫ್ ಘನಿ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿ ಕಳುಹಿಸಿತ್ತು. ಆದರೆ ಹೀಗೆ ಉಗ್ರರನ್ನು ರಿಲೀಸ್ ಮಾಡಿದ ನಂತರ ತಾಲಿಬಾನ್ ಮತ್ತೆ ತನ್ನ ಬುದ್ಧಿ ತೋರಿಸಿತ್ತು. ಅಶ್ರಫ್ ಘನಿ ಅಧ್ಯಕ್ಷ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದ ತಾಲಿಬಾನಿ ನಾಯಕರು, ಮತ್ತೊಮ್ಮೆ ಅಫ್ಘಾನ್‌ನಲ್ಲಿ ರಕ್ತದೋಕುಳಿ ಹರಿಸಿದ್ದರು. ಬಳಿಕ ಐವರು ತಾಲಿಬಾನ್ ಉಗ್ರರನ್ನು ಅಫ್ಘಾನ್‌ ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಈ ಘಟನೆ ನಡೆದು ಒಂದು ದಿನದೊಳಗೆ ಕಾಬೂಲ್ ಮೇಲೆ ರಾಕೆಟ್ ದಾಳಿ ನಡೆದಿದೆ.

ಉಗ್ರರ ಜೊತೆ ಟ್ರಂಪ್ ಸಂಧಾನವೂ ವಿಫಲ..!

ಉಗ್ರರ ಜೊತೆ ಟ್ರಂಪ್ ಸಂಧಾನವೂ ವಿಫಲ..!

ತಾಲಿಬಾನಿ ನಾಯಕರ ಜೊತೆ ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚರ್ಚೆ ನಡೆಸಲು ಮುಂದಾಗಿದ್ದರು. ಅಲ್ಲದೆ ತಾಲಿಬಾನಿ ಉಗ್ರರು ಒಳ್ಳೆಯವರು ಎಂದು ಕೂಡ ಟ್ರಂಪ್ ಹೇಳಿದ್ದರು. ಆದರೆ ಹೀಗೆ ಅಫ್ಘಾನ್‌ ಸರ್ಕಾರದ ಮಧ್ಯಸ್ಥಿಕೆ ಇಲ್ಲದೆ ನೇರವಾಗಿ ಉಗ್ರರ ಜೊತೆ ಮಾತುಕತೆಗೆ ಇಳಿದಿದ್ದಕ್ಕೆ ಅಮೆರಿಕದ ವಿರುದ್ಧ ಅಶ್ರಫ್ ಘನಿ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ಇದೆಲ್ಲಾ ನಡೆದು ಕೆಲವೇ ದಿನಗಳು ಕಳೆಯುವ ಒಳಗಾಗಿ ಅಮೆರಿಕದ ಸೈನಿಕರನ್ನೇ ತಾಲಿಬಾನ್ ಉಗ್ರರು ಕೊಂದು ಹಾಕಿದ್ದರು. ಈ ದಾಳಿ ನಂತರ ಅಮೆರಿಕ ಹಾಗೂ ತಾಲಿಬಾನ್ ನಡುವಿನ ಮಾತುಕತೆಯೇ ಮುರಿದುಬಿದ್ದಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲೇ ಅಫ್ಘಾನ್‌ನಲ್ಲಿ ಮತ್ತೆ ತಾಲಿಬಾನಿಗಳು ಬಾಲ ಬಿಚ್ಚಿದ್ದಾರೆ.

ಅಫ್ಘಾನ್‌ ಜನರಿಗೆ ನೆಮ್ಮದಿಯೇ ಇಲ್ಲ

ಅಫ್ಘಾನ್‌ ಜನರಿಗೆ ನೆಮ್ಮದಿಯೇ ಇಲ್ಲ

ಬ್ರಿಟಿಷರಿಂದ ಅಫ್ಘಾನ್‌ 1919ರಲ್ಲೇ ಸ್ವಾತಂತ್ರ್ಯ ಪಡೆದಿದೆ. ಇದು ಭಾರತಕ್ಕಿಂತಲೂ ಮೊದಲು. ಆದರೂ ಅಫ್ಘಾನ್‌ನಲ್ಲಿ ಶಾಂತಿ ನೆಲೆಸಿಲ್ಲ. ಸದ್ಯದ ಮಟ್ಟಿಗೆ ಅಫ್ಘಾನ್‌ ಪರಿಸ್ಥಿತಿ ಹೇಗಿದೆ ಎಂದರೆ, ಧೈರ್ಯವಾಗಿ ಎಲ್ಲೂ ಹೊರಗೆ ಹೋಗಲು ಸಾಧ್ಯವೇ ಇಲ್ಲ. ಯಾವ ಕ್ಷಣದಲ್ಲಿ ಉಗ್ರಪಡೆ ಗುಂಡಿನ ಮಳೆಗರೆಯುತ್ತೋ, ಬಾಂಬ್ ಹಾಕುತ್ತೋ ಎಂಬ ಭಯದಲ್ಲೇ ಪ್ರಯಾಣ ಬೆಳೆಸಬೇಕಿದೆ. ಅಫ್ಘಾನ್‌ನಲ್ಲಿ ದಿನಕ್ಕೆ ಒಂದಾದರೂ ಹಿಂಸೆ ನಡೆಸದಿದ್ದರೆ ತಾಲಿಬಾನ್ ಉಗ್ರರಿಗೆ ನಿದ್ದೆ ಬರೋದಿಲ್ಲ ಎಂಬಂತಿದೆ. ಈಗಾಗಲೇ ಲಕ್ಷಾಂತರ ಜನರು ತಾಲಿಬಾನಿಗಳ ದಾಳಿಗೆ ಬಲಿಯಾಗಿದ್ದಾರೆ. ಉಗ್ರರ ಉಪಟಳಕ್ಕೆ ಬ್ರೇಕ್ ಹಾಕಲು ಅಶ್ರಫ್ ಘನಿ ಸರ್ಕಾರ ಪರದಾಡುತ್ತಿದೆ. ಇತ್ತ ಅಫ್ಘಾನಿಸ್ತಾನದ 101ನೇ ಸ್ವಾತಂತ್ರೋತ್ಸವಕ್ಕೂ ಉಗ್ರರ ದಾಳಿ ಕರಿನೆರಳು ಚಾಚಿರೋದು ಮಾತ್ರ ವಿಪರ್ಯಾಸ.

English summary
More than 14 rockets hit a diplomatic district of Afghanistan. More of these rockets were hits residential area, Minimum 10 people were wounded in this incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X