ವೈದ್ಯನ ಹಾರ್ಡ್‌ಡಿಸ್ಕ್‌ನಲ್ಲಿ ಮಹಿಳೆಯರ 13,000 ಬೆತ್ತಲೆ ವಿಡಿಯೋ

ನ್ಯೂಯಾರ್ಕ್‌, ಆಗಸ್ಟ್‌ 23: ನಮ್ಮಲ್ಲಿ 'ವೈದ್ಯೋ ನಾರಾಯಣೋ ಹರಿʼ ಎಂಬ ಮಾತಿನ ಮೂಲಕ ವೈದ್ಯರನ್ನು ಗೌರವದಿಂದ ಕಾಣುವ ಸಂಸ್ಕೃತಿ ಇದೆ. ಆದರೆ. ಭಾರತೀಯ ಮೂಲದ ವೈದ್ಯನೊಬ್ಬ ಅಮೇರಿಕಾದಲ್ಲಿ ಮಾಡಿರುವ ಕೃತ್ಯ ಎಲ್ಲರೂ ತಲೆತಗ್ಗಿಸುವಂತಿದೆ. ರೋಗಿಗಳ ಆರೈಕೆ ಮಾಡುವ ಬದಲಿಗೆ ಈತ ಕ್ರಮೇಣ ವಿಕೃತಕಾಮಿಯಾಗಿ ಬದಲಾಗಿದ್ದಾನೆ.

ಮಹಿಳೆಯರು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ಈತ ಚಿತ್ರೀಕರಿಸಿಕೊಂಡು ವಿಕೃತಿ ಮೆರೆದಿದ್ದಾನೆ. ಈತನ ಮನೆಯಲ್ಲಿ ಶೋಧ ನಡೆಸಿದಾಗ ಹಾರ್ಡ್‌ ಡ್ರೈವ್‌ ಪತ್ತೆಯಾಗಿದ್ದು, ಅದರಲ್ಲಿ ಬರೋಬ್ಬರಿ 13,000ಕ್ಕೂ ಹೆಚ್ಚು ಮಹಿಳೆಯರ ಬೆತ್ತಲೆ ಫೋಟೋಗಳು ಹಾಗೂ ವಿಡಿಯೋಗಳು ಸಿಕ್ಕಿವೆ.

13 000 Videos Of Women Found On Indian Origin Doctor s Hard Drive In US

ಡಾ.ಓಮೈರ್‌ ಏಜಾಜ್‌ ಎಂಬ ಭಾರತೀಯ ಮೂಲದ ವೈದ್ಯ ವರ್ಕಿಂಗ್‌ ವೀಸಾ ಪಡೆದು 2011ರಲ್ಲಿ ಅಮೇರಿಕಾಗೆ ತೆರಳಿದ್ದ. ಬಳಿಕ ವಿವಿಧ ಆಸ್ಪತ್ರೆಗಳಲ್ಲಿ ಈತ ವೈದ್ಯ ವೃತ್ತಿ ಮುಂದುವರಿಸಿದ್ದ. ಒದೇ ವೇಳೆ ಆಸ್ಪತ್ರೆ ಕೊಠಡಿಗಳು, ಬಾತ್‌ರೂಮ್‌, ಮಹಿಳೆಯರು ಬಟ್ಟೆ ಬದಲಿಸುವ ಸ್ಥಳಗಳು, ಈಜು ತರಬೇತಿ ಶಾಲೆಗಳು ಹಾಗೂ ತನ್ನ ಮನೆಯಲ್ಲೂ ಈತ ಸೀಕ್ರೇಟ್‌ ಕ್ಯಾಮರಾಗಳನ್ನು ಅಳವಡಿಸಿ ಈ ಕೃತ್ಯ ಎಸಗಿದ್ದಾನೆ.

ಏಜಾಜ್‌ ಅವರ ಪತ್ನಿಯಿಂದಲೇ ಈ ಕೃತ್ಯ ಬೆಳಕಿಗೆ ಬಂದಿದ್ದು, ಈತ ಸಂಗ್ರಹಿಸಿದ್ದ ಬೆತ್ತಲೆ ಫೋಟೋಗಳು ಹಾಗೂ ವಿಡಿಯೋಗಳನ್ನು ಕಂಡು ಅಧಿಕಾರಿಗಳು ಶಾಕ್‌ ಆಗಿದ್ದಾರೆ. ಸದ್ಯ ಈತನನ್ನು ಬಂಧಿಸಲಾಗಿದ್ದು, ಈತನ ಬಳಿ ಇದ್ದ ಒಂದೇ ಡಿವೈಸ್‌ನಲ್ಲಿ ಸಾವಿರಾರು ನಗ್ನ ಫೋಟೋ, ವಿಡಿಯೋಗಳು ಪತ್ತೆಯಾಗಿದೆ.

ನಿದ್ದೆ ಮಾಡುತ್ತಿದ್ದ ಅಥವಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹಲವಾರು ಮಹಿಳೆಯರು ಮತ್ತು ಆಸ್ಪತ್ರೆಯ ರೋಗಿಗಳೊಂದಿಗೆ ಆತ ಲೈಂಗಿಕ ಸಂಭೋಗ ನಡೆಸಿದ್ದಾನೆ. ಹಾರ್ಡ್‌ ಡಿಸ್ಕ್‌ನಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳು, ವಯಸ್ಕರು, ಮಹಿಳೆಯರು ಹಾಗೂ ಸಣ್ಣ ಮಕ್ಕಳ ನಗ್ನ ವಿಡಿಯೋಗಳೂ ಪತ್ತೆಯಾಗಿವೆ ಎಂಬ ಆಘಾತಕಾರಿ ವಿಚಾರವನ್ನು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.

13 000 Videos Of Women Found On Indian Origin Doctor s Hard Drive In US

ಈತನಿಗೆ ಸೇರಿದ ಆರು ಕಂಪ್ಯೂಟರ್‌ಗಳು, ನಾಲ್ಕು ಸೆಲ್‌ಫೋನ್‌ಗಳು ಮತ್ತು 15 ಹಾರ್ಡ್‌ಡ್ರೈವ್‌ಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ಪೈಕಿ ಒಂದು ಹಾರ್ಡ್ ಡ್ರೈವ್‌ನಲ್ಲೇ 13,000 ವೀಡಿಯೊಗಳು ಪತ್ತೆಯಾಗಿವೆ. ಈತನ ಬಳಿ ಇನ್ನಷ್ಟು ಡಿವೈಸ್‌ಗಳಿದ್ದು, ಅದರಲ್ಲಿ ಮತ್ತಷ್ಟು ಫೋಟೋ ಮತ್ತು ವಿಡಿಯೋಗಳಿರುವ ಸಾಧ್ಯತೆಗಳಿವೆ. ಇದನ್ನು ಪತ್ತೆ ಹಚ್ಚಲು ಸಾಕಷ್ಟು ಸಮಯದ ಅಗತ್ಯವಿದ್ದು, ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ಏಜಾಜ್ ಭಾರತೀಯ ಪ್ರಜೆಯಾಗಿದ್ದು ಮಿಚಿಗನ್‌ನಲ್ಲಿ ಇಂಟರ್ನ್‌ಶಿಪ್‌ಗಾಗಿ 2011ರಲ್ಲಿ ಅಮೇರಿಕಾಗೆ ತೆರಳಿದ್ದರು. ಈತನಿಗೆ ವಿವಾಹವಾಗಿ ಎರಡು ಮಕ್ಕಳು ಸಹ ಇದ್ದಾರೆ. ಈತ ಇಂಟರ್ನಲ್‌ ಮೆಡಿಸಿನ್‌ ವಿಭಾಗದಲ್ಲಿ ಪರಿಣಿತಿ ಹೊಂದಿದ್ದ. ಬಳಿಕ ವಿವಿಧ ಆಸ್ಪತ್ರೆಗಳಲ್ಲಿ ಈತ ವೈದ್ಯ ವೃತ್ತಿ ಮುಂದುವರಿಸಿದ್ದ. ಹಾಗಾಗಿ ಅಲ್ಲಿಯೂ ಈತ ಇದೇ ಕೃತ್ಯಗಳನ್ನು ನಡೆಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

'ಜೀವ ಉಳಿಸುವ ವೈದ್ಯನೇ ಕಾಮುಕನಾಗಿ ಬದಲಾಗಿರುವುದು ನಮ್ಮೆಲ್ಲರ ದುರ್ದೈವʼ ಎಂದು ಹಲವರು ಸೋಶಿಯಲ್‌ ಮೀಡಿಯಾಗಳಲ್ಲಿ ಈತನ ಫೋಟೋ ಹಂಚಿಕೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+