ಶವಯಾತ್ರೆ ಮೇಲೆ ಬಾಂಬ್ ದಾಳಿ, ಅಫ್ಘಾನಿಸ್ತಾನದಲ್ಲಿ 15 ಬಲಿ
ಕಾಬೂಲ್, ಡಿಸೆಂಬರ್ 31: ಅಫ್ಘಾನಿಸ್ತಾನದ ಪಾಲಿಗೆ 2017 ಕರಾಳ ರಕ್ತಪಾತದೊಂದಿಗೆ ಕೊನೆಯಾಗಿದೆ. ಪೂರ್ವ ಅಫ್ಘಾನಿಸ್ತಾನದ ಶವಯಾತ್ರೆಯಲ್ಲಿ ಆತ್ಮಾಹುತಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ.
ಇದೇ ಬಾಂಬ್ ಸ್ಫೋಟದಲ್ಲಿ 14 ಜನರು ಗಾಯಗೊಂಡಿದ್ದಾರೆ. ಹೊಸ ವರ್ಷದ ಹಿಂದಿನ ದಿನ ನಡೆದ ಈ ಘಟನೆ ಅಫ್ಘಾನಿಸ್ತಾನ ಜನರನ್ನು ಬೆಚ್ಚಿಬೀಳಿಸಿದೆ.

ಹಸ್ಕಾ ಮೀನಾ ಜಿಲ್ಲೆಯ ಮಾಜಿ ರಾಜ್ಯಪಾಲರು ಇತ್ತೀಚೆಗೆ ನಿಧನರಾಗಿದ್ದರು. ಅವರ ಶವಯಾತ್ರೆ ವೇಳೆ ದಾಳಿಕೋರ ದಾರಿ ಮಧ್ಯದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ.
ನಂಗಹಾರ್ ಪ್ರಾಂತ್ಯದಲ್ಲಿ ಈ ದಾಳಿ ನಡೆದಿದ್ದು ಯಾವುದೇ ಸಂಘಟನೆಗಳು ದಾಳಿಯ ಹೊಣೆಹೊತ್ತುಕೊಂಡಿಲ್ಲ. ನಂಗಹಾರ್ ಐಸಿಸ್ ನ ಭದ್ರಕೋಟೆಯಾಗಿದ್ದು ಇದೇ ಸಂಘಟನೆ ಉಗ್ರರು ದಾಳಿ ನಡೆಸಿರಬಹುದು ಎಂದುಕೊಳ್ಳಲಾಗಿದೆ.












Click it and Unblock the Notifications