• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬ್ಬಂದಿಗೆ ಕೊರೊನಾ ಸೋಂಕು: ಪಾಕಿಸ್ತಾನದ 11 ನ್ಯಾಯಾಲಯಗಳು ಬಂದ್

|

ಇಸ್ಲಾಮಾಬಾದ್, ಅಕ್ಟೋಬರ್ 30: ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಕಾರಣ ಪಾಕಿಸ್ತಾನದ 11 ನ್ಯಾಯಾಲಯಗಳನ್ನು ಬಂದ್ ಮಾಡಲಾಗಿದೆ.

ಇಸ್ಲಾಮಾಬಾದ್‌ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಅಧೀನದಲ್ಲಿ ಒಟ್ಟು 70 ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. 12 ಮಂದಿ ನ್ಯಾಯಾಧೀಶರು ಮತ್ತು ಸಿಬ್ಬಂದಿಗೆ ಹಾಗೂ ಅನೇಕ ವಕೀಲರಿಗೂ ಸೋಂಕು ತಗುಲಿದೆ. ಹೀಗಾಗಿ 11 ನ್ಯಾಯಾಲಯಗಳನ್ನು ಮುಚ್ಚಲಾಗಿದೆ.

ಗುಜರಾತ್‌: ಪ್ರಧಾನಿ ಮೋದಿ ಭದ್ರತೆಗೆ ನಿಯೋಜನೆಗೊಂಡಿದ್ದ 23 ಪೊಲೀಸರಿಗೆ ಕೊರೊನಾ ಸೋಂಕು

ಇಸ್ಲಾಮಾಬಾದ್‌ನಲ್ಲಿ ಹೊಸದಾಗಿ 154 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಓರ್ವ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವನ್ನಪ್ಪಿದ್ದವರ ಸಂಖ್ಯೆ 215ಕ್ಕೆ ಏರಿದೆ.

ಈ 11 ನ್ಯಾಯಾಲಯಗಳು 14 ದಿನಗಳ ಬಳಿಕ ಕಾರ್ಯಾರಂಭ ಮಾಡಲಿವೆ. ಕೊವಿಡ್ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಮಾರ್ಗಸೂಚಿಗಳನ್ನು ಯಾರೂ ಪಾಲಿಸುತ್ತಿಲ್ಲ.

ಹೀಗಾಗಿ ಎಲ್ಲರೂ ಸೋಂಕಿತರಾಗುತ್ತಿದ್ದಾರೆ.ಹೀಗಾಗಿ ಮುಂದಾದರೂ ಪ್ರತಿಯೊಬ್ಬರು ಕೊವಿಡ್ ನಿಯಮಗಳನ್ನು ಪಾಲಿಸಿ, ಹಾಗೆಯೇ ವಕೀಲರು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸಂಘ ಹೇಳಿದೆ.

ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಅಂಗಡಿಗಳಿಗೆ ಬೀಗ ಹಾಕಲಾಗಿದೆ. ಮಾರುಕಟ್ಟೆ ಹಾಗೂ ರಸ್ತೆಗಳಲ್ಲಿ ಜನರು ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಅವರಿಗೆ ದಂಡ ವಿಧಿಸಲಾಗಿದೆ.

English summary
Eleven courts in Pakistan''s capital Islamabad have been closed after their judges and staff tested positive for COVID-19, a media report said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X