ಸೆಪ್ಟೆಂಬರ್‌ನಿಂದ ಮಕ್ಕಳ ಮೇಲೆ 'ಝೈಡಸ್' ಕೊರೊನಾ ಲಸಿಕೆ ಪ್ರಯೋಗ
ನವದೆಹಲಿ, ಜುಲೈ 09: ದೇಶದಲ್ಲಿ ಸೆಪ್ಟೆಂಬರ್‌ನಿಂದ ಮಕ್ಕಳ ಮೇಲೆ ಝೈಡಸ್ ಕೊರೊನಾ ಲಸಿಕೆ ಪ್ರಯೋಗ ನಡೆಸಲಾಗುತ್ತದೆ ಎಂದು ಡಾ.ಎನ್‌ಕೆ ಅರೋರಾ ತಿಳಿಸಿದ್ದಾರೆ.
ಒಂದು ವಾರದಲ್ಲಿ ಝೈಡಸ್ ಲಸಿಕೆ ಭಾರತದಲ್ಲಿ ಲಭ್ಯವಾಗಲಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ಶುರುವಾಗಲಿದೆ ಎಂದು ಮಾಹಿತಿ ನೀಡಿದರು.
2022ರ ಜನವರಿ ಅಥವಾ ಫೆಬ್ರವರಿಯಲ್ಲಿ 12-18ವರ್ಷದೊಳಗಿನವರಿಗೆ ಲಸಿಕೆ ನೀಡುವ ಕಾರ್ಯ ಶುರುವಾಗಲಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ವೈರಸ್ ರೀತಿಯ ಕೋಡಿಂಗ್ ಸೀಕ್ವೆನ್ಸ್ಗಳಿರುವ ಆಂಟಿಜೆನ್ಗಳನ್ನ ಒಳಗೊಂಡಿರುವ ಶುದ್ಧೀಕರಿಸಿದ ಪ್ಲಾಸ್ಮಿಡ್ ಡಿಎನ್‌ಎ ಅನ್ನು ಇಂಜೆಕ್ಷನ್ ಮೂಲಕ ದೇಹದ ಜೀವಕೋಶಕ್ಕೆ ನೀಡಲಾಗುತ್ತದೆ.
ಒಂದೊಮ್ಮೆ ಅಲ್ಲಿಗೆ ಸೇರಿದರೆ ಆಂಟಿಜೆನ್ ಸಾಕಷ್ಟು ಪ್ರಮಾಣದಲ್ಲಿ ಹೊರಬಂದು ದೇಹದಲ್ಲಿ ನಿರ್ದಿಷ್ಟ ರೀತಿಯಲ್ಲಿ ಪ್ರತಿರೋಧಕ ಸೃಷ್ಟಿಯಾಗುವಂತೆ ಪ್ರೇರೇಪಿಸುತ್ತದೆ. ಇಂಥ ಡಿಎನ್‌ಎ ವ್ಯಾಕ್ಸಿನ್ಗಳು ವೈರಸ್, ಪ್ಯಾರಸೈಟ್ ಹಾಗೂ ಕ್ಯಾನ್ಸರ್ ಕೋಶಗಳ ಮೇಲೆ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ದೃಢಪಟ್ಟ ಸಂಗತಿ

ಝೈಡಸ್ ಲಸಿಕೆ ಲಭ್ಯ
ಭಾರತದಲ್ಲಿ ಶೀಘ್ರದಲ್ಲೇ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೊರೊನಾವೈರಸ್ ಲಸಿಕೆಲಭ್ಯವಾಗುವ ಸಾಧ್ಯತೆಯಿದೆ.
ಬೆಂಗಳೂರು ಮೂಲದ ಔಷಧೀಯ ಕಂಪನಿ ಝೈಡಸ್ ಕ್ಯಾಡಿಲಾ ತನ್ನ ಲಸಿಕೆಯನ್ನು 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತುರ್ತು ಬಳಕೆಗಾಗಿ ಅನುಮತಿ ನೀಡುವಂತೆ ಕೋರಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಅರ್ಜಿ ಸಲ್ಲಿಸಿತ್ತು.

ಝೈಡಸ್ ಸೂಜಿ ಮುಕ್ತ ಲಸಿಕೆ
ಝೈಡಸ್ ಕ್ಯಾಡಿಲಾ ತನ್ನ ZyCoV-D 3-ಡೋಸ್ ಕೋವಿಡ್ ಶಾಟ್‌ಗಾಗಿ ತುರ್ತು ಬಳಕೆಯ ಅನುಮೋದನೆಯನ್ನು ಕೋರಿದ್ದಾರೆ. ಅದು ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಲಸಿಕೆ ಆಗಿದೆ. ಶಾಟ್ ಸೂಜಿ ಮುಕ್ತ ಮತ್ತು ಮಕ್ಕಳಿಗೆ ಸುರಕ್ಷಿತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಝೈಡಸ್ ಲಸಿಕೆ ಶೇ.66ರಷ್ಟು ಪರಿಣಾಮಕಾರಿ
ಕ್ಯಾಡಿಲಾ ಕಂಪನಿ ನೀಡಿರುವ ಮಾಹಿತಿ ಪ್ರಕಾರ, ಈ ಲಸಿಕೆಯು ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು ರೋಗ ಲಕ್ಷಗಳಿರುವ ಪ್ರಕರಣಗಳಲ್ಲಿ ಶೇ. 66.6ರಷ್ಟು ಪರಿಣಾಮಕಾರಿಯಂತೆ. ಅದೇ ರೋಗಲಕ್ಷಣಗಳಿಲ್ಲದ ಪಾಸಿಟಿವ್ ಕೇಸ್ಗಳಲ್ಲಿ ಇದು ಶೇ. 100ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನಲಾಗಿದೆ.
ಕಂಪನಿಯು ವಾರ್ಷಿಕವಾಗಿ 120 ಮಿಲಿಯನ್ ಡೋಸ್ ಶಾಟ್ ತಯಾರಿಸುವ ಗುರಿ ಹೊಂದಿದೆಜೈಕೋವ್-ಡಿಗೆ ಅನುಮೋದನೆ ಸಿಕ್ಕರೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್, ಭಾರತ್ ಬಯೋಟೆಕ್‌ನ ಕೊವಾಕ್ಸಿನ್, ರಷ್ಯಾದ ಸ್ಪುಟ್ನಿಕ್ ವಿ ಮತ್ತು ಯುಎಸ್ ನಿರ್ಮಿತ ಮಾಡೆರ್ನಾ ನಂತರ ಭಾರತದಲ್ಲಿ ಬಳಕೆಗೆ ಲಭ್ಯವಾಗುವ ಐದನೇ ಲಸಿಕೆ ಇದಾಗಲಿದೆ.

ಲಸಿಕೆ ಸುರಕ್ಷಿತ
12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಈ ಲಸಿಕೆ ಸುರಕ್ಷಿತವಾಗಿದೆ ಎಂದು ಅದು ಹೇಳಿದೆ. ಆದರೆ ಅದರ ಪ್ರಾಯೋಗಿಕ ಡೇಟಾವನ್ನು ಅದು ಇನ್ನೂ ಬಹಿರಂಗಗೊಳಿಸಿಲ್ಲ. ಜೈಕೋವ್-ಡಿ 12-18 ವರ್ಷ ವಯಸ್ಸಿನ ಸುಮಾರು 28,000 ಕ್ಕೂ ಹೆಚ್ಚು ಸ್ವಯಂಸೇವಕರೊಂದಿಗೆ ಕೊನೆಯ ಹಂತದ ಪ್ರಯೋಗದಲ್ಲಿ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ಜೈಡಸ್ ಹೇಳಿಕೊಂಡಿದೆ.

ಎಷ್ಟು ತಾಪಮಾನದಲ್ಲಿ ಲಸಿಕೆ ಇರಿಸಬೇಕು
ಲಸಿಕೆಯನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ ಕನಿಷ್ಠ ಮೂರು ತಿಂಗಳವರೆಗೆ 25 ಡಿಗ್ರಿ ತಾಪಮಾನದಲ್ಲಿ ಉತ್ತಮ ಸ್ಥಿರತೆಯನ್ನು ತೋರಿಸಿದೆ ಎಂದು ಕಂಪನಿಯು ಹೇಳುತ್ತದೆ, ಇದು ಶಾಟ್ ಅನ್ನು ಸಾಗಿಸಲು ಮತ್ತು ಸಂಗ್ರಹಿಸಲು ಸುಲಭವಾಗಿಸುತ್ತದೆ ಮತ್ತು ಯಾವುದೇ ಕೋಲ್ಡ್ ಚೈನ್ ಸ್ಥಗಿತ ಸವಾಲುಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.












Click it and Unblock the Notifications