ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರ್ದಿಕ್ ಪಟೇಲ್ ರನ್ನು ಅಮೆರಿಕಾಗೆ ಆಹ್ವಾನಿಸಿದ ಮಾರ್ಕ್ ಝುಕರ್ ಬರ್ಗ್

By Sachhidananda Acharya
|
Google Oneindia Kannada News

ಅಹಮದಾಬಾದ್, ಡಿಸೆಂಬರ್ 8: ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆ ಎಬ್ಬಿಸುತ್ತಿರುವ ಪಾಟೀದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಬಹುದೊಡ್ಡ ಆಹ್ವಾನವನ್ನು ಪಡೆದಿದ್ದಾರೆ. ಅಮೆರಿಕಾಗೆ ಭೇಟಿ ನೀಡುವಂತೆ ಹಾರ್ದಿಕ್ ಪಟೇಲ್ ಗೆ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಆಹ್ವಾನ ನೀಡಿದ್ದಾರೆ.

ಪಟೇಲ್ ಗೆ ಇರುವ ಹಿಂಬಾಲಕರು, ಹಾರ್ದಿಕ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರೋಧಿ ಹೇಳಿಕೆಗಳ ಮೂಲಕ ದೊಡ್ಡ ಸಂಖ್ಯೆಯ ಆನ್ಲೈನ್ ವೀಕ್ಷಕರನ್ನು ಎಳೆದು ತರುತ್ತಿರುವ ಪರಿ ಮಾರ್ಕ್ ಝುಕರ್ ಬರ್ಗ್ ರನ್ನು ಇಂಪ್ರೆಸ್ ಮಾಡಿದೆ.

Zuckerberg invites Hardik Patel to US

ಇತ್ತೀಚೆಗೆ ಸೂರತ್ ನಲ್ಲಿ ಹಾರ್ದಿಕ್ ಪಟೇಲ್ ಮಾಡಿದ ಲೈವ್ ಭಾಷಣವನ್ನು 37,000 ಜನರು ಏಕಕಾಲಕ್ಕೆ ವೀಕ್ಷಿಸಿದ್ದರು. ಜತೆಗೆ ನವೆಂಬರ್ 27ರಂದು ನಡೆದಿದ್ದ ನೇರ ಸಂವಾದಕ್ಕೆ 6,00,000 ಲೈಕ್ ಬಂದಿದೆ. ಅವರ ಈ ವಿಡಿಯೋವನ್ನು 5,000 ಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ.

ಅಂದಹಾಗೆ ಹಾರ್ದಿಕ್ ಪಟೇಲ್ ಫೇಸ್ಬುಕ್ ಪೇಜ್ ಗೆ 8 ಲಕ್ಷದ 51 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಅವರ ಕಳೆದ 10 ಸಮಾವೇಶಗಳ ಭಾಷಣಕ್ಕೆ 40 ಲಕ್ಷಕ್ಕೂ ಹೆಚ್ಚು ಲೈಕ್ ಬಂದಿದೆ ಎಂದು ಗುಜರಾತಿನ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಈ ಎಲ್ಲಾ ಹಿನ್ನಲೆಯಲ್ಲಿ ಹಾರ್ದಿಕ್ ಪಟೇಲ್ ಮಾರ್ಕ್ ಝುಕರ್ ಬರ್ಗ್ ಗಮನ ಗೆದ್ದಿದ್ದಾರೆ. ಈ ಕಾರಣಕ್ಕೆ ಭೇಟಿಯಾಗಲು ಅಮೆರಿಕಾದ ಸಿಲಿಕಾನ್ ವ್ಯಾಲಿಗೆ ಅವರನ್ನು ಫೇಸ್ಬುಕ್ ಸಂಸ್ಥಾಪಕರು ಆಹ್ವಾನಿಸಿದ್ದಾರೆ.

English summary
Facebook founder Mark Zuckerberg invites Patidar leader Hardik Patel to United states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X