Prabhas: ನಟ ಪ್ರಭಾಸ್ ಜೊತೆ ವೈಎಸ್ ಶರ್ಮಿಳಾ ಸಂಬಂಧ; ಕೊನೆಗೂ ಸತ್ಯ ಬಿಚ್ಚಿಟ್ಟ ಕಾಂಗ್ರೆಸ್ ರಾಜ್ಯಾಧ್ಯಕ್ಷೆ
ನಟ ಪ್ರಭಾಸ್ ಮತ್ತು ಆಂಧ್ರ ಪ್ರದೇಶ ಕಾಂಗ್ರೆಸ್ ರಾಜ್ಯಧ್ಯಕ್ಷೆ ವೈ.ಎಸ್. ಶರ್ಮಿಳಾ ನಡುವೆ ಸಂಬಂಧವಿದೆ ಎಂಬ ಸುದ್ದಿ ಸದ್ಯ ಸಾಕಷ್ಟು ಸದ್ದು ಮಾಡುತ್ತಿದೆ. ಗ್ಲೋಬಲ್ ಸ್ಟಾರ್ ಹಾಗೂ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಿರು ನಟ ಪ್ರಭಾಸ್ ಮತ್ತು ಶರ್ಮಿಳಾ ಮಧ್ಯೆ ಸಂಬಂಧದ್ದು. ಇಬ್ಬರ ಮಧ್ಯೆ ಏನೋ ಇದೆ ಅಂತ ಹಲವು ದಿನಗಳಿಂದ ಕೇಳಿ ಬರ್ತಿತ್ತು.
ಈ ಇಬ್ಬರ ನಡುವಿನ ಸಂಬಂಧದ ಕುರಿತು ರಾಜಕೀಯದಲ್ಲಿಯೂ ಈ ಸುದ್ದಿ ಜೋರಾಗಿತ್ತು. ಈ ಕುರಿತು ವೈ ಎಸ್ ಶರ್ಮಿಳಾ ಆಗಲಿ, ನಟ ಪ್ರಭಾಸ್ ಆಗಲಿ ಏನೂ ಹೇಳಿಲ್ಲ. ಪ್ರತಿಕ್ರಿಯೆ ಕೊಟ್ಟಿಲ್ಲ. ಈಗ ಎಪಿ ಕಾಂಗ್ರೆಸ್ ನಾಯಕಿ, ಜಗನ್ ತಂಗಿ ಶರ್ಮಿಳಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪ್ರಭಾಸ್ ಜೊತೆ ಸಂಬಂಧದ ಬಗ್ಗೆ ಸಂಚಲನ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ ಸಹೋದರ ವೈಎಸ್ ಜಗನ್ಮೋಹನ್ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೆಲವು ಯೂಟ್ಯೂಬ್ ಚಾನೆಲ್‌ಗಳು ಪ್ರಭಾಸ್‌ಗೂ ನನಗೂ ಸಂಬಂಧವಿದೆ ಎಂದು ತಪ್ಪು ಮಾಹಿತಿ ಹರಡಿವೆ ಎಂದು ಆಂಧ್ರ ಪ್ರದೇಶ ಕಾಂಗ್ರೆಸ್ ರಾಜ್ಯಧ್ಯಕ್ಷೆ ವೈ.ಎಸ್. ಶರ್ಮಿಳಾ ಕಿಡಿಕಾರಿದರು. ನನ್ನ ಮಕ್ಕಳ ಮೇಲೆ ಪ್ರಮಾಣ ಮಾಡುತ್ತೇನೆ.. ಪ್ರಭಾಸ್ ಯಾರು ಅಂತ ನನಗೆ ಗೊತ್ತಿಲ್ಲ. ವೈಯಕ್ತಿಕವಾಗಿ ಭೇಟಿಯಾಗಿಲ್ಲ. ನನಗೂ ಅವರಿಗೂ ಸಂಬಂಧವಿಲ್ಲ ಎಂದು ಶರ್ಮಿಳಾ ಸ್ಪಷ್ಟಪಡಿಸಿದರು.
ನನ್ನ ಅಣ್ಣ ಜಗನ್ಮೋಹನ್ ರೆಡ್ಡಿ ಅವರ ಸೈತಾನ ಸೇನೆ ನಾನು ಪ್ರಭಾಸ್‌ಗೆ ಸಂಬಂಧ ಹೊಂದಿದ್ದೇನೆ ಎಂದು ಅಪಪ್ರಚಾರ ಮಾಡಿವೆ. ಯಾವುದೇ ಸಹೋದರ ತನ್ನ ಸ್ವಂತ ಸಹೋದರಿಯ ಮೇಲೆ ಇಂತಹ ಹೇಯವಾದ ಕಾಮೆಂಟ್ಗಳನ್ನು ಮಾಡುತ್ತಾನಾ.? ಎಂದು ವೈ ಎಸ್ ಶರ್ಮಿಳಾ ಪ್ರಶ್ನೆ ಮಾಡಿದ್ದಾರೆ. ಇನ್ನೂ ಶರ್ಮಿಳಾ ಅವರು ಪ್ರಭಾಸ್ ಯಾರು ಅಂತ ಗೊತ್ತಿಲ್ಲ ಅಂತ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಇಲ್ಲಿಯವರೆಗೆ ಪ್ರಭಾಸ್‌ರನ್ನ ನೋಡಿಲ್ಲ, ಭೇಟಿ ಮಾಡಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
ನಟ ಪ್ರಭಾಸ್ ಜೊತೆ ಸಂಬಂಧದ ಗಾಳಿಸುದ್ದಿ ಹಬ್ಬಿಸಿದ್ದು ಜಗನ್ ಮೋಹನ್ ರೆಡ್ಡಿ ಅಂತ ಸಂಚಲನ ಆರೋಪ ಮಾಡಿದ್ದಾರೆ. ಬಾಲಕೃಷ್ಣ ಮನೆಯಿಂದ ತಮ್ಮ ಮೇಲೆ ತಪ್ಪು ಪ್ರಚಾರ ಮಾಡಲಾಗಿದೆ. ನಿಜವಾಗ್ಲೂ ತಂಗಿ ಮೇಲೆ ಪ್ರೀತಿ ಇದ್ರೆ, ಬಾಲಕೃಷ್ಣ ಮನೆಯಿಂದ ತಪ್ಪು ಪ್ರಚಾರ ಆಗಿದೆ ಅಂತ ನಂಬಿದ್ರೆ, ಐದು ವರ್ಷ ಸಿಎಂ ಆಗಿದ್ದು ಏನೂ ಮಾಡಿಲ್ಲ ಅಂತ ಶರ್ಮಿಲಾ ಅವರು ಸಹೋದರ ಜಗನ್ ಮೋಹನ್ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇನ್ನು, ಸಹೋದರನ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಶರ್ಮಿಳಾ ಅವರು, ಜಗನ್ ಮೋಹನ್ ರೆಡ್ಡಿಗೆ ತಂಗಿ ಮೇಲೆ ಪ್ರೀತಿ ಇದ್ದಿದ್ದರೆ ಆ ಐದು ವರ್ಷ ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡಿದ್ರು. ತಂಗಿಯ ಮೇಲೆ ಇಂತಹ ಪ್ರಚಾರ ನಡೆಸಿದರೆ ಅದನ್ನು ತಮ್ಮ ಮೈಲೇಜಿಗೆ ಬಳಸಿಕೊಂಡರು. ಸಹೋದರಿಯ ಮರ್ಯಾದೆಯನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟರು ಎಂದು ಕಾಂಗ್ರೆಸ್ ಅಧ್ಯಕ್ಷೆ ಶರ್ಮಿಳಾ ಅವರು ಕಿಡಿಕಾರಿದರು.
ನಟ ಪ್ರಭಾಸ್ ಅಂದಿನ ಕಡಪ ಮೇಯರ್ ಆಗಿದ್ದ ವಿ.ವಿ.ವಿನಾಯಕ್ 'ಯೋಗಿ' ಸಿನಿಮಾ ನಿರ್ಮಿಸಿದ್ದರು. ಈ ಚಿತ್ರದ ಚಿತ್ರೀಕರಣದ ವೇಳೆ ಪ್ರಭಾಸ್ ಮತ್ತು ಶರ್ಮಿಳಾ ಭೇಟಿಯಾಗಿದ್ದಾರೆ ಎಂಬ ವದಂತಿಗಳು ಸೃಷ್ಟಿಯಾಗಿದ್ದವು. ಅಂದಿನಿಂದ ಪ್ರಭಾಸ್ ಮತ್ತು ಶರ್ಮಿಳಾ ನಡುವೆ ಹಲವು ಗಾಳಿ ಸುದ್ದಿಗಳು ಹುಟ್ಟಿಕೊಂಡಿವೆ.












Click it and Unblock the Notifications