ಚಹಾ ಮಾರುವ ಕುಮಟಾ ಯುವತಿ ಪಣಜಿಯಲ್ಲಿ ಆತ್ಮಹತ್ಯೆ
ಮಾಪೂಸಾ (ಪಣಜಿ), ಜೂನ್ 24: ಚಹಾ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಯುವತಿಯೊಬ್ಬಳು ಸೋಮವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ. ಶಬಾನಾ ಖಾಸಿಂ ಮೃತ ದುರ್ದೈವಿ. ಈಕೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವಳು. ಮಾಪೂಸಾ ಪಟ್ಟಣವು ಗೋವಾದ ಪಣಜಿಯಿಂದ 13 ಕಿಮೀ ದೂರದಲ್ಲಿದೆ.
ಮಾಪೂಸಾದಲ್ಲಿದ್ದ ಶಬಾನಾ ಖಾಸಿಂ ಮತ್ತೊಬ್ಬ ಯುವತಿಯ ಜತೆ ಸೇರಿ ಚಹಾ ಅಂಗಡಿಯಲ್ಲಿ ಕೆಲಸದಲ್ಲಿದ್ದಳು. ಪ್ರತಿ ದಿನ ಚಹಾ ಅಂಗಡಿಯ ಮಾಲೀಕ ಬರುವ ವೇಳೆಗೆ ಇಬ್ಬರೂ ಜತೆಗೂಡಿ ಅಂಗಡಿ ತೆರೆದು ಸ್ವಚ್ಛಗೊಳಿಸುತ್ತಿದ್ದರು. (ಆತ್ಮಹತ್ಯೆ: ಪುತ್ರಿ, ಅಪ್ಪನೂ ಸಾವು: ಅಮ್ಮ, ಮಗ ಗಂಭೀರ)
ಎಂದಿನಂತೆ ಸೋಮವಾರ ಬೆಳಗ್ಗೆ 10 ಗಂಟೆಗೆ ಚಹಾ ಅಂಗಡಿ ಮಾಲೀಕ ಬರುವ ವೇಳೆಗೆ ಅಂಗಡಿಯಲ್ಲಿ ಶಬಾನಾ ಖಾಸಿಂ ಶವ ನೇತಾಡುತ್ತಿತ್ತು. ಆದರೆ ಮತ್ತೊಬ್ಬ ಯುವತಿ ಸ್ಥಳದಲ್ಲಿ ಇರಲಿಲ್ಲ. ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.













Click it and Unblock the Notifications