ಕೋರ್ಟ್ ತಜ್ಞರ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ನನ್ನನ್ನಲ್ಲ - ರವಿಶಂಕರ್

Subscribe to Oneindia Kannada

ನವದೆಹಲಿ, ಏಪ್ರಿಲ್ 20: "ನಿಮಗೆ ಜವಾಬ್ದಾರಿ ಸ್ವಲ್ಪವೂ ಇಲ್ಲ. ನಿಮಗೆ ಇಷ್ಟ ಬಂದಿದ್ದನ್ನೆಲ್ಲಾ ಹೇಳುವ ಸ್ವೇಚ್ಛಾಚಾರ ಇದೆ ಎಂದುಕೊಂಡಿದ್ದೀರಾ?" ಹೀಗಂತ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ನ್ನು ತರಾಟೆಗೆ ತೆಗೆದುಕೊಂಡಿದೆ.

ನಿನ್ನೆಯಷ್ಟೆ ಪ್ರತಿಕ್ರಿಯೆ ನೀಡಿದ್ದ ರವಿ ಶಂಕರ್, ಯಮುನಾ ನದಿ ದಂಡೆಯ ಮೇಲೆ ಕಳೆದ ವರ್ಷ ಮೂರು ದಿನಗಳ ಕಾಲ ಆರ್ಟ್ ಆಫ್ ಲಿವಿಂಗ್ ವತಿಯಿಂದ ನಡೆದ ಸಾಂಸ್ಕೃತಿಕ ಉತ್ಸವದಿಂದ ಪರಿಸರಕ್ಕೆ ಏನೇ ಹಾನಿಯಾಗಿದ್ದರೂ ಅದಕ್ಕೆ ಕೋರ್ಟ್ ಮತ್ತು ಸರಕಾರವೇ ಹೊಣೆ. ಕಾರಣ ಇದಕ್ಕೆ ಅನುವು ಮಾಡಿಕೊಟ್ಟವರು ಅವರೇ ಎಂದು ಹೇಳಿದ್ದರು.[ಯಮುನಾ ನದಿ ವಿವಾದ: ಆರ್ಟ್ ಆಫ್ ಲಿವಿಂಗ್ ಮೇಲೆ ಕೋಟ್ಯಂತರ ದಂಡ]

"ಯಾವುದೇ ರೀತಿಯ ದಂಡ ಹಾಕುವುದಿದ್ದರೂ ಕಾರ್ಯಕ್ರಮ ನಡೆಯಲು ಅನುಮತಿ ನೀಡಿದ್ದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಹಾಗೂ ಸ್ವತಃ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್.ಜಿ.ಟಿ) ತನ್ನ ಮೇಲೆಯೇ ದಂಡ ಹಾಕಿಕೊಳ್ಳಬೇಕು. ಯಮುನಾ ನದಿ ಅಷ್ಟು ಶುದ್ಧ, ಸೂಕ್ಷ್ಮ ಎಂದಾಗಿದ್ದರೆ ವಿಶ್ವ ಸಾಂಸ್ಕೃತಿಕ ಉತ್ಸವ ನಡೆಯಲು ಬಿಡಬಾರದಿತ್ತು," ಎಂದು ತಮ್ಮ ಫೇಸ್ಬುಕ್ ಫೋಸ್ಟ್ ನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ಹೇಳಿಕೊಂಡಿದ್ದರು.

ವರದಿ ಸೋರಿಕೆ

ವರದಿ ಸೋರಿಕೆ

ಇನ್ನು ಆರ್ಟ್ ಆಫ್ ಲಿವಿಂಗ್ ವಕ್ತಾರ ಕೇದಾರ್ ದೇಸಾಯಿ ಕೂಡಾ, "ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿದೆ.ನಮ್ಮ ಕೈಗೆ ವರದಿ ಸಿಗುವ ಮೊದಲೇ ಈ ರೀತಿ ಸೋರಿಕೆಯಾಗಿದೆ. ಹೀಗಾಗುತ್ತೆ ಅತ ಮೊದಲೇ ಗೊತ್ತಿತ್ತು. ನಮ್ಮ ಮೇಲೆ ಒತ್ತಡ ಹೇರುವ ತಂತ್ರ ಇದು. ಆರಂಭದಿಂದಲೂ ಇದು ಸಾಬೀತಾಗುತ್ತಾ ಬಂದಿದೆ," ಎಂದು ಹೇಳಿದ್ದರು. ಈ ಮೂಲಕ ತಜ್ಞರ ಸಮಿತಿ ತಾರತಮ್ಯದ ವರದಿ ನೀಡಿದೆ ಎಂದು ಆರೋಪಿಸಿದ್ದರು.

ಕೋರ್ಟ್ ಆಘಾತ

ಕೋರ್ಟ್ ಆಘಾತ

ರವಿಶಂಕರ್ ಹೇಳಿಕೆ ಆಘಾತ ತಂದಿದೆ ಎಂದು ಹೇಳಿರುವ ಕೋರ್ಟ್ ಆರ್ಟ್ ಆಫ್ ಲಿವಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅರ್ಜಿದಾರ ಮನೋಜ್ ಮಿಶ್ರಾಗೆ ಈ ಕುರಿತು ಎಲ್ಲಾ ಹೇಳಿಕೆಗಳನ್ನು ದಾಖಲಿಸಿದೆ ವಿವರವಾದ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಈ ಮೂಲಕ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳು ತೀರ್ಮಾನಕ್ಕೆ ಕೋರ್ಟ್ ಬಂದಿದೆ.[ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ 'ವಿಶ್ವ ಸಂಸ್ಕೃತಿ ಉತ್ಸವ']

ನಿಮಗೆ ಸ್ವಲ್ಪವೂ ಜವಾಬ್ದಾರಿಯಿಲ್ಲ

ನಿಮಗೆ ಸ್ವಲ್ಪವೂ ಜವಾಬ್ದಾರಿಯಿಲ್ಲ

ಇನ್ನು ವಿಚಾರಣೆ ವೇಳೆ ಕೋರ್ಟ್ ನಿಮಗೆ ಸ್ವಲ್ಪವೂ ಜವಾಬ್ದಾರಿ ಇಲ್ಲ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ.

"ನಿಮಗೆ ಜವಾಬ್ದಾರಿ ಸ್ವಲ್ಪವೂ ಇಲ್ಲ. ನಿಮಗೆ ಇಷ್ಟ ಬಂದಿದ್ದನ್ನೆಲ್ಲಾ ಹೇಳುವ ಸ್ವೇಚ್ಛಾಚಾರ ಇದೆ ಎಂದುಕೊಂಡಿದ್ದೀರಾ?" ಎಂದು ತರಾಟೆಗೆ ತೆಗೆದುಕೊಂಡಿದೆ. ನಂತರ ಮುಂದಿನ ವಿಚಾರಣೆಯನ್ನು ಮೇ 7 ರಂದು ಕಾಯ್ದಿರಿಸಿದೆ.

ವಕ್ತಾರರ ಸಮಜಾಯಿಷಿ

ವಕ್ತಾರರ ಸಮಜಾಯಿಷಿ

ಶ್ರೀ ಶ್ರೀಯ ಈ ಹೇಳಿಕೆಗೆ ಕೋರ್ಟ್ ಕೆಂಡಾಮಂಡಲವಾಗುತ್ತಿದ್ದಂತೆ ರವಿಶಂಕರ್ ವಕ್ತಾರರು ಸಮಾಜಾಯಿಷಿ ನೀಡಲು ಆರಂಭಿಸಿದ್ದಾರೆ. "ನಾವು ಆ ರೀತಿಯಲ್ಲಿ ಹೇಳಿರಲಿಲ್ಲ" ಎಂದು ಹೇಳಿದ್ದಾರೆ. ಸದ್ಯ ಕೋರ್ಟ್ ತನ್ನ ಅಭಿಪ್ರಾಯವನ್ನಷ್ಟೇ ದಾಖಲಿಸಿದ್ದು ಇನ್ನೂ ಅಂತಿಮ ಆದೇಶ ನೀಡಬೇಕಾಗಿದೆ.

ಯಾವುದೇ ಹಾನಿ ಮಾಡಿಲ್ಲ

ಇನ್ನು ಈ ಕುರಿತು ಹೇಳಿಕೆ ನೀಡಿರುವ ರವಿಶಂಕರ್, "ಸತ್ಯ ಏನೆಂದರೆ ನಾವು ಯಮುನಾ ನದಿಗೆ ಯಾವುದೇ ಹಾನಿ ಉಂಟು ಮಾಡಿಲ್ಲ. ಸುಳ್ಳುಗಳು ಬಹಿರಂಗವಾದಾಗ ಆಘಾತವಾಗುತ್ತದೆ. ಯಾರು ಆರ್ಟ್ ಆಫ್ ಲಿವಿಂಗ್ ಬೇಜವಾಬ್ದಾರಿ ಎಂದು ಹೇಳುತ್ತಾರೋ ಅವರಿಗೆ ನಮ್ಮ ಬಗ್ಗೆ ತಿಳಿದಿಲ್ಲ. ಹಾಗೂ ಈ ಮೂಲಕ ಅವರೇ ಅಪಹಾಸ್ಯಕ್ಕೆ ಗುರಿಯಾಗುತ್ತಾರೆ," ಎಂದು ಹೇಳಿದ್ದಾರೆ.

ಮಾತ್ರವಲ್ಲ ನೀವು ಸರಿಯಾಗಿ ಕೇಳಿಸಿಕೊಂಡಿಲ್ಲ. ನ್ಯಾಯಾಧೀಕರಣ ಬೇಜವಾಬ್ದಾರಿ ಮತ್ತು ಅಸಮಂಜಸ ವರದಿ ನೀಡಿದ್ದಕ್ಕೆ ತನ್ನ ಸಮಿತಿಯನ್ನೇ ತರಾಟೆಗೆ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ತಜ್ಞರ ತಂಡದ ವರದಿ

ತಜ್ಞರ ತಂಡದ ವರದಿ

ಈ ಹಿಂದೆ ಹಸಿರು ನ್ಯಾಯಾಧೀಕರಣದ ಪರವಾಗಿ ಸ್ಥಳ ಪರಿಶೀಲನೆ ಮಾಡಿದ್ದ ತಜ್ಞರ ತಂಡ, ವಿಶ್ವ ಸಾಂಸ್ಕೃತಿಕ ಉತ್ಸವದ ಹೆಸರಿನಲ್ಲಿ 7 ಎಕರೆಯ ಸ್ಟೇಜ್ ಕಟ್ಟಿ, 1000 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸಿ ನದಿ ಪಾತ್ರವನ್ನು ಸಂಪೂರ್ಣ ನಿರ್ನಾಮ ಮಾಡಲಾಗಿದೆ ಎಂದು ವರದಿ ನೀಡಿತ್ತು.

ಈ ನದಿ ಪಾತ್ರ ಮತ್ತೆ ಪುನರ್ ನಿರ್ಮಾಣಗೊಳ್ಳಲು ಕನಿಷ್ಟ 10 ವರ್ಷ ಬೇಕು ಮತ್ತು ಸುಮಾರು 42 ಕೋಟಿ ಖರ್ಚಾಗಬಹುದು ಎಂದು ಹೇಳಿತ್ತು. ಆದರೆ ಇದನ್ನು ರವಿಶಂಕರ್ ಹಾಗೂ ಅವರ ಸಂಸ್ಥೆ ಆರ್ಟ್ ಆಫ್ ಲಿವಿಂಗ್ ತಳ್ಳಿ ಹಾಕಿದೆ. ನದಿ ಪಾತ್ರದ ಪರಿಸರಕ್ಕೆ ತಾವು ಯಾವುದೇ ರೀತಿಯಲ್ಲಿ ಹಾನಿ ಉಂಟು ಮಾಡಿಲ್ಲ ಎಂದೂ ವಾದಿಸಿತ್ತು.

2016ರಲ್ಲಿ ನಡೆದಿದ್ದ ಸಮ್ಮೇಳನ

2016ರಲ್ಲಿ ನಡೆದಿದ್ದ ಸಮ್ಮೇಳನ

2016ರಲ್ಲಿ ನರ್ಮದಾ ನದಿ ದಂಡೆಯಲ್ಲಿ ಮೂರು ದಿನಗಳ ಕಾಲ ವಿಶ್ವ ಸಾಂಸ್ಕೃತಿಕ ಉತ್ಸವವನ್ನು ಆರ್ಟ್ ಆಫ್ ಲಿವಿಂಗ್ ಆಯೋಜಿಸಿತ್ತು. ಈ ಸಂದರ್ಭದಲ್ಲೇ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ಹಸಿರು ನ್ಯಾಯಪೀಠ ಷರತ್ತು ಬದ್ದ ಒಪ್ಪಿಗೆ ನೀಡಿತ್ತು. ಮತ್ತು ಮಧ್ಯಂತರ ಪರಿಹಾರವಾಗಿ 5 ಕೋಟಿ ಹಣ ಕಟ್ಟಲು ಹೇಳಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯೂ ಭಾಗವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
"You have no sense of responsibility. Do you think you have the liberty to say whatever you want?" said the National Green Tribunal to Art of Living. In reply to that Sri Sri Ravi Shankar told that, “those who say the AOL is irresponsible simply don't know us or have gained a sense of humour.”
Please Wait while comments are loading...