ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Year end 2022: ಮಹಿಳೆಯರ ಪರ ಸುಪ್ರೀಂ ಕೋರ್ಟ್ ನೀಡಿದ 5 ಮಹತ್ವದ ತೀರ್ಪುಗಳು

|
Google Oneindia Kannada News

ನವದೆಹಲಿ, ಡಿ. 23: 2022 ಮುಗಿದ್ದು, 2023ಕ್ಕೆ ಸ್ವಾಗತ ಕೋರಲು ಇನ್ನೇಲು ಕೆಲವೇ ದಿನಗಳು ಬಾಕಿಯಿದೆ. ಈ ವರ್ಷ ನಡೆದ ಹಲವು ಘಟನೆಗಳನ್ನು ಒಮ್ಮೆ ಹಿಂತಿರುಗಿ ನೋಡುವಾಗ ಸುಪ್ರೀಂ ಕೋರ್ಟ್ ನೀಡಿದ ಕೆಲವು ತೀರ್ಪುಗಳು ಮಹತ್ವದ್ದಾಗಿವೆ. ಅದರಲ್ಲೂ ಮಹಿಳೆಯರ ಪರ ನೀಡಿರುವ ಕೆಲವು ತೀರ್ಪುಗಳ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಈ ವರ್ಷ ಸುಪ್ರೀಂ ಕೋರ್ಟ್ ತೆಗೆದುಕೊಂಡ ಮಹತ್ವದ ತೀರ್ಪುಗಳ ಪಟ್ಟಿ ಇಲ್ಲಿದೆ.

*ವೈವಾಹಿಕ ಅತ್ಯಾಚಾರವೂ ಅತ್ಯಾಚಾರವೇ*

ಭಾರತದಲ್ಲಿ ವೈವಾಹಿಕ ಅತ್ಯಾಚಾರಕ್ಕೆ ಮೊದಲ ಕಾನೂನು ಮಾನ್ಯತೆ ನೀಡಿದ ಸುಪ್ರೀಂ ಕೋರ್ಟ್, ಗಂಡನಿಂದ ಲೈಂಗಿಕ ದೌರ್ಜನ್ಯವು ಅತ್ಯಾಚಾರದ ರೂಪವನ್ನು ಪಡೆಯಬಹುದು ಎಂದು ಹೇಳಿದೆ. "ಎಲ್ಲ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರಾಗಿದ್ದಾರೆ" ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮಹತ್ವದ ಆದೇಶವನ್ನು ನೀಡಿದ್ದರು.

Year end 2022: ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ 10 ವೈರಲ್ ವಿಡಿಯೋಗಳುYear end 2022: ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ 10 ವೈರಲ್ ವಿಡಿಯೋಗಳು

"ಎಂಟಿಪಿ ಕಾಯಿದೆಯಡಿ, ಅತ್ಯಾಚಾರಗಳಲ್ಲಿ ವೈವಾಹಿಕ ಅತ್ಯಾಚಾರವನ್ನೂ ಒಳಗೊಂಡಿರುತ್ತವೆ. ಗಂಡನಿಂದಾದ ಲೈಂಗಿಕ ದೌರ್ಜನ್ಯವು ಅತ್ಯಾಚಾರದ ರೂಪವನ್ನು ಪಡೆಯಬಹುದು" ಎಂದು ನ್ಯಾಯಾಲಯ ಹೇಳಿದೆ.

Year end 2022: 5 important judgments given by Supreme Court in favor of women

ಈ ಮಹತ್ವದ ತೀರ್ಪು ವೈವಾಹಿಕ ಅತ್ಯಾಚಾರವನ್ನು ಸಂಪೂರ್ಣವಾಗಿ ಗರ್ಭಪಾತದ ವ್ಯಾಪ್ತಿಯಲ್ಲಿ ಗುರುತಿಸುತ್ತದೆ. ಆದರೂ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸದ ನಮ್ಮ ದೇಶದಲ್ಲಿ ಇದು ಒಂದು ಅದ್ಭುತ ತೀರ್ಪು.

*ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತವು ಪ್ರತಿ ಮಹಿಳೆಯ ಹಕ್ಕು*

ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳ ಕುರಿತಾದ ಮಹತ್ವದ ತೀರ್ಪಿನಲ್ಲಿ, ಸರ್ವೋಚ್ಚ ನ್ಯಾಯಾಲಯವು ಗರ್ಭಾವಸ್ಥೆಯ 24 ವಾರಗಳವರೆಗೆ ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರಾಗಿರುತ್ತಾರೆ. ವೈದ್ಯಕೀಯ ಗರ್ಭಪಾತದ (ಎಂಟಿಪಿ) ಕಾಯಿದೆಯಡಿಯಲ್ಲಿ ಮತ್ತು ಅವರ ವೈವಾಹಿಕ ಜೀವನದ ಆಧಾರದ ಮೇಲೆ ಗರ್ಭಪಾತಕ್ಕೆ ಅವಕಾಶವಿದೆ.

"ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಮಹಿಳೆಯ ಸಂತಾನೋತ್ಪತ್ತಿ ಆಯ್ಕೆಯ ಹಕ್ಕು ಅವಳ ವೈಯಕ್ತಿಕ ಸ್ವಾತಂತ್ರ್ಯವಾಗಿದೆ. ಜೊತೆಗೆ ಇದು ಆಕೆಯ ದೇಹದ ಮೇಲೆ ಆಕೆಗೆ ಹಕ್ಕಿದೆ" ಎಂದು ನ್ಯಾಯಾಲಯ ಹೇಳಿದೆ. ಮಹಿಳೆಯ ವೈವಾಹಿಕ ಸ್ಥಿತಿಯ ಆಧಾರದ ಮೇಲೆ ತಾರತಮ್ಯವು ಸಮಾನತೆಯ ಹಕ್ಕಿನ ವಿರುದ್ಧವಾಗಿದೆ ಎಂದು ಪೀಠ ಹೇಳಿದೆ.

Year end 2022: 5 important judgments given by Supreme Court in favor of women

2003 ರ ವೈದ್ಯಕೀಯ ನಿಯಮಗಳ ನಿಯಮ 3B ರ ಪ್ರಕಾರ, ಕೆಲವು ಅಸಾಧಾರಣ ಸಂದರ್ಭಗಳಲ್ಲಿ 20 ರಿಂದ 24 ವಾರಗಳ ನಡುವೆ ಗರ್ಭಪಾತ ಮಾಡಿಸಿಕೊಳ್ಳಲು ಕೆಲವು ವರ್ಗದ ಮಹಿಳೆಯರಿಗೆ ಅನುಮತಿಸಲಾಗಿದೆ.

*ಮಗುವಿನ ಉಪನಾಮವನ್ನು ನಿರ್ಧರಿಸುವ ಹಕ್ಕು ತಾಯಿಗೆ ಇದೆ*

ಮತ್ತೊಂದು ಮಹತ್ವದ ತೀರ್ಪಿನಲ್ಲಿ, ತನ್ನ ತಂದೆಯ ಮರಣದ ನಂತರ ಮಗುವಿನ ಉಪನಾಮವನ್ನು ನಿರ್ಧರಿಸುವ ಹಕ್ಕು ತಾಯಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಕೃಷ್ಣ ಮುರಾರಿ ಅವರ ಪೀಠವು, ತಾಯಿ ಮಾತ್ರ ಮಗುವಿನ ನೈಸರ್ಗಿಕ ಪೋಷಕರಾಗಿರುವುದರಿಂದ ತನ್ನ ಎರಡನೇ ಗಂಡನ ಹೆಸರನ್ನು ನೀಡಬಹುದು ಎಂದು ಹೇಳಿದರು.

*ಕನ್ಯತ್ವ ಪರೀಕ್ಷೆಯು ಪಿತೃಪ್ರಭುತ್ವದ ಮನಸ್ಥಿತಿಯನ್ನು ತೋರಿಸುತ್ತದೆ*

ಅಕ್ಟೋಬರ್ 31, 2022 ರಂದು, ಎರಡು ಬೆರಳುಗಳ ಪರೀಕ್ಷೆಯ ಮೇಲಿನ ನಿಷೇಧವನ್ನು ಸುಪ್ರೀಂ ಪುನರುಚ್ಚರಿಸಿತು. ಕೇವಲ ಲೈಂಗಿಕವಾಗಿ ಸಕ್ರಿಯವಾಗಿರುವ ಕಾರಣ ತನ್ನ ಮೇಲೆ ಅತ್ಯಾಚಾರವೆಸಗಿದೆ ಎಂದು ಮಹಿಳೆ ಹೇಳಿದಾಗ ಅದನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳುವುದು ಪಿತೃಪ್ರಭುತ್ವ ಮತ್ತು ಲೈಂಗಿಕತೆಯಾಗಿದೆ ಎಂದು ಹೇಳಿದೆ.

ಅತ್ಯಾಚಾರ ಸಂತ್ರಸ್ತರಿಗೆ ಎರಡು ಬೆರಳಿನ (ಕನ್ಯತ್ವ) ಪರೀಕ್ಷೆ ನಡೆಸುತ್ತಿರುವವರ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮ ಜರುಗಿಸಬೇಕು ಎಂದು ನ್ಯಾಯಾಲಯ ಹೇಳಿದೆ. 2013 ರಿಂದ ಪ್ರಾರಂಭವಾಗುವ ಹಲವಾರು ತೀರ್ಪುಗಳ ಮೂಲಕ ಕನ್ಯತ್ವ ಪರೀಕ್ಷೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ ಎಂದು ನ್ಯಾಯಾಲಯ ಹೇಳಿದೆ.

*ಮನೆ ನಿರ್ಮಾಣಕ್ಕೆ ಹಣ ಕೇಳುವುದು ವರದಕ್ಷಿಣೆ ಎಂದು ಪರಿಗಣನೆ*

ವರದಕ್ಷಿಣೆ ಸಾವು ಪ್ರಕರಣವೊಂದರಲ್ಲಿ ಪತಿ ಮತ್ತು ಆತನ ತಂದೆಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್, ಮನೆ ನಿರ್ಮಾಣಕ್ಕಾಗಿ ಹಣವನ್ನು ಕೇಳುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಬಿ ಅಡಿಯಲ್ಲಿ 'ವರದಕ್ಷಿಣೆ ಬೇಡಿಕೆ' ಎಂದು ಹೇಳಿದೆ.

ವರದಕ್ಷಿಣೆ ಬೇಡಿಕೆಯಂತಹ ಸಾಮಾಜಿಕ ಅನಿಷ್ಟವನ್ನು ಬೇರುಸಹಿತ ಕಿತ್ತೊಗೆಯುವ ಶಾಸಕಾಂಗದ ಉದ್ದೇಶವನ್ನು ಸೋಲಿಸುವ ಕಾನೂನಿನ ನಿಬಂಧನೆಯ ವ್ಯಾಖ್ಯಾನವನ್ನು ದೂರವಿಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

English summary
Year end 2022: Five important judgments given by the Supreme Court in favor of women. check here. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X