ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾ ಮೇಲೆ ಕಿಡಿಕಾರುತ್ತಿದ್ದ ಜಾರ್ಜ್ ಫರ್ನಾಂಡಿಸ್: ಅಂದೇನಾಯ್ತು ಗೊತ್ತಾ!

|
Google Oneindia Kannada News

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಮಂಗಳವಾರ (ಜ 29) ಬೆಳಗ್ಗೆ ನಿಧನರಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ Alzheimer's ಕಾಯಿಲೆಯಿಂದ ಬಳಲುತ್ತಿದ್ದರು.

ಸೋನಿಯಾ ಗಾಂಧಿ ಕುಟುಂಬಕ್ಕಿಂತಲೂ ಹೆಚ್ಚಾಗಿ ನೆಹರೂ ಕುಟುಂಬವನ್ನು ಹಿಗ್ಗಾಮುಗ್ಗ ಟೀಕಿಸುತ್ತಿದ್ದ ಜಾರ್ಜ್, ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಧೋರಣೆಯ ವಿರುದ್ದ ತೀಕ್ಷ್ಣವಾದ ಪ್ರತಿಭಟನೆ ವ್ಯಕ್ತಪಡಿಸಿದವರಲ್ಲಿ ಒಬ್ಬರಾಗಿದ್ದರು.

ಸರ್ಕಾರದ ವಿರುದ್ಧ ಸಿಡಿದೆದ್ದವರನ್ನೆಲ್ಲಾ ಇಂದಿರಾ ಸರ್ಕಾರ ಜೈಲಿಗಟ್ಟುವ ಕ್ರಮ ಅನುಸರಿಸಿತ್ತು. ಆಗ ಮಾರುವೇಷ ಧರಿಸಿ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತಿದ್ದ ಜಾರ್ಜ್, ಇಂದಿರಾ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿದ್ದರು.

ಇಂದಿರಾ ಗಾಂಧಿಗೆ ಸೆಡ್ಡು ಹೊಡೆದಿದ್ದ ಕಾರ್ಮಿಕ ನಾಯಕ ಜಾರ್ಜ್ಇಂದಿರಾ ಗಾಂಧಿಗೆ ಸೆಡ್ಡು ಹೊಡೆದಿದ್ದ ಕಾರ್ಮಿಕ ನಾಯಕ ಜಾರ್ಜ್

ಕಾಂಗ್ರೆಸ್ ಕಡೆಗಿನ ಅವರ ತೀವ್ರತರ ಆಕ್ರೋಶ ಅವರನ್ನು ಬಲಪಂಥೀಯ ನಿಲುವುಳ್ಳ ಪಕ್ಷಗಳ ಜೊತೆಯಲ್ಲಿ ಕೈ ಜೋಡಿಸುವಂತೆ ಮಾಡಿತ್ತು. ನೆಹರೂ-ಇಂದಿರಾ- ಸೋನಿಯಾ ಗಾಂಧಿ ಕುಟುಂಬದ ಮೇಲಿನ ಅವರ ಸಿಟ್ಟಿಗೆ, ಕಾರ್ಯಕ್ರಮವೊಂದು ಸಾಕ್ಷಿಯಾಗಿತ್ತು. ಮುಂದೆ ಓದಿ..

ಹಲವು ವರ್ಷಗಳ ಹಿಂದೆ ನಡೆದ ಘಟನೆ

ಹಲವು ವರ್ಷಗಳ ಹಿಂದೆ ನಡೆದ ಘಟನೆ

ಹಲವು ವರ್ಷಗಳ ಹಿಂದೆ ನಡೆದ ಘಟನೆಯಿದು. ನವದೆಹಲಿಯಲ್ಲಿರುವ constitutional ಕ್ಲಬ್ ನಲ್ಲಿ ಬರ್ಮಾದಲ್ಲಿ ಲೋಕತಂತ್ರ ಜಾರಿಗೊಳಿಸುವ ವಿಚಾರದ ಮೇಲೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಾರ್ಜ್ ಫರ್ನಾಂಡಿಸ್ ಆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ

ಕಲಾಂ, ಮನಮೋಹನ್ ಸಿಂಗ್, ಸೋನಿಯಾ ಗಾಂಧಿಯ ಫೋಟೋ

ಕಲಾಂ, ಮನಮೋಹನ್ ಸಿಂಗ್, ಸೋನಿಯಾ ಗಾಂಧಿಯ ಫೋಟೋ

ಕ್ಲಬ್ ಹಾಲ್ ನಲ್ಲಿ ಡಾ. ಕಲಾಂ, ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿಯವರ ಫೋಟೋವನ್ನು ತಗಲಾಕಲಾಗಿತ್ತು. ಸಭೆಯಲ್ಲಿ ಯಾರು ಯಾವ ವಿಚಾರವನ್ನು ಮಂಡಿಸುತ್ತಿದ್ದಾರೆ ಎನ್ನುವುದಕ್ಕಿಂತ ಅಲ್ಲಿ ಸೋನಿಯಾ ಅವರ ಫೋಟೋ ಇದ್ದದ್ದು ಜಾರ್ಜ್ ಫರ್ನಾಂಡಿಸ್ ಅವರಿಗೆ ಸಿಕ್ಕಾಪಟ್ಟೆ ಕಿರಿಕಿರಿ ಆಗುತ್ತಿತ್ತು ಎಂದು ಆ ಘಟನೆಯನ್ನು ವರದಿ ಮಾಡುತ್ತಿದ್ದ ರಿಪೋರ್ಟರ್ ಹೇಳಿಕೆಯನ್ನು ಉಲ್ಲೇಖಿಸಿ ಆಜ್ ತಕ್ ವಾಹಿನಿ ವರದಿ ಮಾಡಿತ್ತು.

ಕರ್ನಾಟಕದ ಜನಪ್ರಿಯ ನಾಯಕ ಅನಂತ್ ಕುಮಾರ್ (59) ವಿಧಿವಶಕರ್ನಾಟಕದ ಜನಪ್ರಿಯ ನಾಯಕ ಅನಂತ್ ಕುಮಾರ್ (59) ವಿಧಿವಶ

ಸೋನಿಯಾ ಗುಲಾಮರು ಅವರ ಫೋಟೋವನ್ನು ಇಲ್ಲಿ ಹಾಕಿದ್ದಾರೆ

ಸೋನಿಯಾ ಗುಲಾಮರು ಅವರ ಫೋಟೋವನ್ನು ಇಲ್ಲಿ ಹಾಕಿದ್ದಾರೆ

ಕಾರ್ಯಕ್ರಮದಲ್ಲಿ ತಮ್ಮ ಭಾಷಣವನ್ನು ಮುಗಿಸಿದ ಜಾರ್ಜ್, ನೇರವಾಗಿ ಕ್ಲಬ್ ಹಾಲಿನ ಮ್ಯಾನೇಜರ್ ಬಳಿ ಹೋಗಿ, ಅವರ ಜೊತೆ ವಾಗ್ಯುದ್ದ ನಡೆಸಿ, ಸೋನಿಯಾ ಗಾಂಧಿವರ ಫೋಟೋ ಅನ್ನು ಕೆಳಗಿಳಿಸಿ ಕ್ಲಬ್ ನಿಂದಲೇ ಸೋನಿಯಾ ಫೋಟೋವನ್ನು ಹೊರಗೆ ಕಳುಹಿಸಿದರು. ನಂತರ ಈ ಬಗ್ಗೆ ಮಾತನಾಡಿದ ಜಾರ್ಜ್, ಸೋನಿಯಾ ಗುಲಾಮರು ಅವರ ಫೋಟೋವನ್ನು ಇಲ್ಲಿ ಹಾಕಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದರು.

ದೇಶವನ್ನು ಲೂಟಿ ಮಾಡಿದವರು

ದೇಶವನ್ನು ಲೂಟಿ ಮಾಡಿದವರು

ಯಾವ ಸಭ್ಯ ಮನುಷ್ಯನೂ ಅವರ ಫೋಟೋ ಹಾಕುವ ಕೆಲಸವನ್ನು ಮಾಡುವುದಿಲ್ಲ. ಯಾವ ಆಧಾರದ ಮೇಲೆ ಸೋನಿಯಾ ಫೋಟೋವನ್ನು ಇಲ್ಲಿ ಹಾಕಲಾಗಿದೆ, ದೇಶವನ್ನು ಈ ಕುಟುಂಬ ಖರೀದಿ ಮಾಡಿದೆಯಾ? ಏನು ನೆಹರೂ ಖಾನ್ ದಾನ್, ದೇಶವನ್ನು ಲೂಟಿ ಮಾಡಿದವರು ಇವರೆಲ್ಲಾ, ಇವರ ಫೋಟೋ ಇಲ್ಲಿ ಯಾಕೆ ಎಂದು ಜಾರ್ಜ್ ಗರಂ ಆಗಿದ್ದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಾರ್ಜ್ ಫರ್ನಾಂಡಿಸ್

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಾರ್ಜ್ ಫರ್ನಾಂಡಿಸ್

ಮತ್ತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಾರ್ಜ್ ಫರ್ನಾಂಡಿಸ್, ಯಾವ ಕಾರಣಕ್ಕೆ ಸೋನಿಯಾ ಫೋಟೋ ಇಲ್ಲಿ ಹಾಕಲಾಗಿದೆ. ನೋಡುವುದಕ್ಕೆ ಬೆಳ್ಳಗಿದ್ದಾರೆ ಎನ್ನುವ ಕಾರಣಕ್ಕೆ ಇಲ್ಲಿ ಹಾಕಿದ್ದಾರಾ ಎಂದು ಕ್ಲಬ್ಬಿನ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದರೆ, ಕ್ಲಬ್ಬಿನ ಯಾವ ಅಧಿಕಾರಿಗಳೂ ಮರು ಉತ್ತರವನ್ನು ನೀಡಲಿಲ್ಲ ಎಂದು ರಿಪೋರ್ಟರ್ ತಮ್ಮ ವರದಿಯನ್ನು ನೀಡುತ್ತಿದ್ದರು.

English summary
Year back programme former defence minister , late George Fernandes removed AICC chair person Sonia Gandhi photo from a Constitutional Club house in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X