ಮತ್ತೆ ಅಪಾಯದ ಗೆರೆ ದಾಟಿದ ಯಮುನಾ ನೀರಿನ ಮಟ್ಟ, ದೆಹಲಿಯಲ್ಲಿ ಹೈ ಅಲರ್ಟ್

ನವದೆಹಲಿ, ಜುಲೈ. 23: ನವದೆಹಲಿಯಲ್ಲಿ ಯಮುನಾ ನದಿಯ ನೀರಿನ ಮಟ್ಟವು ಮತ್ತೆ 205.75 ಮೀಟರ್‌ಗಳ ಅಪಾಯದ ಗಡಿ ದಾಟಿದ್ದು, ಪ್ರವಾಹ ಪೀಡಿತ ತಗ್ಗು ಪ್ರದೇಶಗಳಲ್ಲಿ ಪುನರ್ವಸತಿ ಪ್ರಯತ್ನಗಳನ್ನು ಮತ್ತಷ್ಟು ವಿಳಂಬಕ್ಕೆ ತಳ್ಳಿದೆ. ಶುಕ್ರವಾರ ಸಂಜೆ 6 ಗಂಟೆಗೆ ನೀರಿನ ಮಟ್ಟ 205.34 ಮೀಟರ್‌ಗೆ ತಲುಪಿದೆ ಮತ್ತು ರಾತ್ರಿ 11 ರ ವೇಳೆಗೆ 205.45 ಮೀಟರ್‌ಗೆ ಏರಬಹುದು ಎಂದು ಕೇಂದ್ರ ಜಲ ಆಯೋಗದ (ಸಿಡಬ್ಲ್ಯೂಸಿ) ಅಂಕಿಅಂಶಗಳು ತೋರಿಸಿದ್ದವು.

ನದಿಯ ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ, ಮುಖ್ಯವಾಗಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆಯ ನಡುವೆ ಕಳೆದ ಎರಡು-ಮೂರು ದಿನಗಳಿಂದ ನೀರಿನ ಮಟ್ಟದಲ್ಲಿ ಅಲ್ಪ ಪ್ರಮಾಣದ ಏರಿಳಿತಗಳಿವೆ. ಜುಲೈ 13 ರಂದು 208.66 ಮೀಟರ್‌ಗಳ ಎತ್ತರವನ್ನು ತಲುಪಿದ ನಂತರ ಯಮುನಾ ನದಿ ನೀರಿನ ಮಟ್ಟ ಕ್ರಮೇಣ ಕಡಿಮೆಯಾಗುತ್ತಿದೆ.

Yamuna in Delhi crossed the danger mark

ಎಂಟು ದಿನಗಳ ಕಾಲ ಮಿತಿ ಮೀರಿ ಹರಿಯುತ್ತಿದ್ದ ನೀರಿನ ಮಟ್ಟ ಮಂಗಳವಾರ ರಾತ್ರಿ 8 ಗಂಟೆ ವೇಳೆಗೆ ಅಪಾಯದ ಮಟ್ಟಕ್ಕಿಂತ ಕಡಿಮೆಯಾಗಿದೆ. ಬುಧವಾರ ಮುಂಜಾನೆ 5 ಗಂಟೆಗೆ 205.22 ಮೀಟರ್‌ಗೆ ಇಳಿದಿದ್ದು, ಮತ್ತೆ ಏರಲು ಆರಂಭಿಸಿ ಅಪಾಯದ ರೇಖೆಯನ್ನು ಮೀರಿದೆ.

ಇನ್ನು ಎರಡು ಮೂರು ದಿನ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ದೆಹಲಿಯ ಮೇಲ್ಭಾಗದ ಪ್ರದೇಶಗಳಲ್ಲಿ ಭಾರೀ ಮಳೆಯ ಸಂದರ್ಭದಲ್ಲಿ, ನೀರಿನ ಮಟ್ಟದಲ್ಲಿನ ಹೆಚ್ಚಳವು ರಾಜಧಾನಿಯ ತಗ್ಗು ಪ್ರದೇಶಗಳಲ್ಲಿ ಮುಳುಗಿರುವ ಸಂತ್ರಸ್ತ ಕುಟುಂಬಗಳ ಪುನರ್ವಸತಿ ವೇಗವನ್ನು ನಿಧಾನಗೊಳಿಸಿದೆ. ಹೀಗಾಗಿ ಮಳೆ ಪೀಡಿತ ಪ್ರದೇಶಗಳ ಸಂತ್ರಸ್ತರು ದೀರ್ಘಕಾಲದವರೆಗೆ ಪರಿಹಾರ ಶಿಬಿರಗಳಲ್ಲಿ ಇರಬೇಕಾಗಬಹುದು.

ಇದಲ್ಲದೆ ನಗರದಲ್ಲಿ ನೀರು ಸರಬರಾಜಿನ ಮೇಲೂ ಪರಿಣಾಮ ಬೀರಬಹುದು. ವಜೀರಾಬಾದ್‌ನಲ್ಲಿನ ಪಂಪ್ ಹೌಸ್‌ ಮುಳುಗುವಿಕೆಯಿಂದಾಗಿ ನಾಲ್ಕೈದು ದಿನಗಳ ಕಾಲ ನೀರು ಸರಬರಾಜಿನ ಮೇಲೆ ಪರಿಣಾಮ ಬೀರಿದ್ದನ್ನು ಮರೆಯುವಂತಿಲ್ಲ. ವಜೀರಾಬಾದ್ ಪಂಪ್ ಹೌಸ್, ಚಂದ್ರವಾಲ್ ಮತ್ತು ಓಖ್ಲಾ ನೀರಿನ ಸಂಸ್ಕರಣಾ ಘಟಕಗಳಿಗೆ ನೀರನ್ನು ಪೂರೈಸುತ್ತದೆ. ನಗರದ ನೀರು ಪೂರೈಕೆಯ ಸುಮಾರು 25 ಪ್ರತಿಶತವನ್ನು ಹೊಂದಿದೆ.

Yamuna in Delhi crossed the danger mark

ದೆಹಲಿ ಜಲ ಮಂಡಳಿ (ಡಿಜೆಬಿ) ಅಧಿಕಾರಿಗಳ ಪ್ರಕಾರ, ಪಲ್ಲಾದಲ್ಲಿ ನದಿಯ ಪ್ರವಾಹ ಪ್ರದೇಶದಲ್ಲಿ ಕೆಲವು ಕೊಳವೆ ಬಾವಿಗಳು ಮುಳುಗಿರುವುದರಿಂದ ದಿನಕ್ಕೆ 10-12 ಮಿಲಿಯನ್ ಗ್ಯಾಲನ್‌ಗಳಷ್ಟು ನೀರಿನ ಕೊರತೆಯಿದೆ. ಪಲ್ಲಾ ಪ್ರವಾಹ ಪ್ರದೇಶದಲ್ಲಿ ಅಳವಡಿಸಲಾಗಿರುವ ಕೊಳವೆ ಬಾವಿಗಳಿಂದ ದೆಹಲಿ ಜಲ ಮಂಡಳಿ ಸುಮಾರು 30 ಮಿಲಿಯನ್ ಗ್ಯಾಲನ್‌ ನೀರನ್ನು ಹೊರತೆಗೆಯುತ್ತದೆ.

ದೆಹಲಿಯ ಕೆಲವು ಭಾಗಗಳು ಒಂದು ವಾರಕ್ಕೂ ಹೆಚ್ಚು ಕಾಲ ಜಲಾವೃತ ಮತ್ತು ಪ್ರವಾಹದಿಂದ ಬಳಲುತ್ತಿವೆ. ನಗರದಲ್ಲಿ ಜುಲೈ 8 ಮತ್ತು 9 ರಂದು ಸುರಿದ ಭಾರೀ ಮಳೆಗೆ ರಾಜಧಾನಿ ಜಲಾವೃತವಾಗಿತ್ತು. ಕೇವಲ ಎರಡು ದಿನಗಳಲ್ಲಿ ಸುರಿದ ಮಳೆಗೆ ದೆಹಲು ತನ್ನ ಮಾಸಿಕ ಮಳೆಯ ಕೋಟಾದ 125 ಪ್ರತಿಶತವನ್ನು ಪಡೆದಿತ್ತು. ತರುವಾಯ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಹರಿಯಾಣ ಸೇರಿದಂತೆ ಯಮುನಾ ನದಿಯ ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿನ ಭಾರೀ ಮಳೆಯು ಯಮುನಾ ನದಿಯ ನೀರಿನ ಮಟ್ಟ ಹೆಚ್ಚಳಕ್ಕೆ ಕಾರಣವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+