ಗಲ್ಲು ಶಿಕ್ಷೆಯ ದಿನ ಯಾಕೂಬ್‌ ಮೆಮನ್‌ ದಿನಚರಿ

ಬೆಂಗಳೂರು, ಜುಲೈ 24 : ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ ಗಲ್ಲಿಗೇರಿಸಲು ನಾಗ್ಪುರ ಜೈಲಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಜುಲೈ 30ರಂದು ಯಾಕೂಬ್‌ಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಅಂದು ಮುಂಜಾನೆ 3 ಗಂಟೆಗೆ ಆತ ಏಳಬೇಕಾಗಿದ್ದು, ನಂತರ ಪ್ರಕ್ರಿಯೆಗಳು ಆರಂಭವಾಗಲಿವೆ.

ಯಾಕೂಬ್ ಮೆಮನ್ ಸಲ್ಲಿಸಿದ್ದ ಕ್ಯೂರೇಟರ್ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಮಾಹಾರಾಷ್ಟ್ರ ರಾಜ್ಯಪಾಲರ ಮುಂದೆ ತನ್ನ ಕ್ಷಮಾದಾನ ಅರ್ಜಿ ಬಾಕಿ ಇದೆ. ಆದ್ದರಿಂದ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಬೇಕು ಎಂದು ಯಾಕೂಬ್ ಸುಪ್ರೀಂಕೋರ್ಟ್‌ಗೆ ಬುಧವಾರ ಮತ್ತೊಂದು ಅರ್ಜಿ ಸಲ್ಲಿಸಿದ್ದಾನೆ.[ಯಾಕೂಬ್ ನೇಣು ಹಗ್ಗ ಯಾರು ಎಳೆಯಲಿದ್ದಾರೆ?]

yakub memon

ಇದರ ನಡುವೆಯೇ ಮಹಾರಾಷ್ಟ್ರದ ನಾಗ್ಪುರದಲ್ಲಿನ ಜೈಲಿನಲ್ಲಿ ಯಾಕೂಬ್ ಗಲ್ಲಿಗೇರಿಸಲು ಸಿದ್ಧತೆಗಳು ನಡೆಯುತ್ತಿವೆ. ಜುಲೈ 30ರ ಗುರುವಾರ ಮುಂಜಾನೆ ಯಾಕೂಬ್ ಮೆನನ್ ಗಲ್ಲಿಗೇರಿಸುವ ಪ್ರಕ್ರಿಯೆಗಳು ಆರಂಭವಾಗಲಿದ್ದು, 4.30ರ ವೇಳೆಗೆ ಯಾಕೂಬ್ ನೇಣಿಗೇರಲಿದ್ದಾನೆ. [ಗಲ್ಲು ಶಿಕ್ಷೆಗೆ ತಡೆ ಕೋರಿ ಸುಪ್ರೀಂ ಮೊರೆ ಹೋದ ಯಾಕೂಬ್]

ಬೆಳಗ್ಗೆ ಸ್ನಾನ, ಇಷ್ಟಪಟ್ಟ ಉಪಹಾರ : ಗಲ್ಲಿಗೇರಲಿರುವ ಖೈದಿಗೆ ಜೈಲಿನ ಅಧಿಕಾರಿಗಳು ಅಂದು ಅವರ ಇಷ್ಟದ ಉಪಹಾರವನ್ನು ನೀಡಲಿದ್ದಾರೆ. ಮುಂಜಾನೆಗೆ ಏಳುವ ಯಾಕೂಬ್‌ಗೆ ಸ್ನಾನ ಮತ್ತು ಪ್ರಾರ್ಥನೆ ಮಾಡಲು ಅವಕಾಶ ನೀಡಲಾಗುತ್ತದೆ. ನಂತರ ಉಪಹಾರ ನೀಡಲಾಗುತ್ತದೆ.

ಯಕೂಬ್ ಮೆಮನ್ ಸದ್ಯ 75 ಕೆಜಿ ಇದ್ದಾನೆ. ಜುಲೈ 26ರಂದು ಮತ್ತೊಮ್ಮೆ ಆತನ ಆರೋಗ್ಯ ತಪಾಸಣೆ ನಡೆಸಿ ದೇಹದ ತೂಕ ಪರೀಕ್ಷಿಸಲಾಗುತ್ತದೆ. ಏಳು ಅಡಿ ಎತ್ತರದಲ್ಲಿ ಯಾಕೂಬ್‌ನನ್ನು ಗಲ್ಲಿಗೇರಿಸಲಾಗುತ್ತದೆ. ಜೈಲಿನ ಅಧೀಕ್ಷಕರು, ವೈದ್ಯರ ಸಮ್ಮುಖದಲ್ಲಿ ನೇಣು ಹಾಕಿದ ಬಳಿಕ ಕೆಲವು ಗಂಟೆಗಳ ಕಾಲ ಆತನ ದೇಹ ಅಲ್ಲಿಯೇ ನೇತಾಡುತ್ತಿರುತ್ತದೆ.

ನಂತರ ವೈದ್ಯರು ಪರೀಕ್ಷೆ ನಡೆಸಿ ಆತ ಮೃತಪಟ್ಟಿದ್ದಾನೆ ಎಂದು ಖಚಿತ ಪಡಿಸಿದ ಬಳಿಕ ದೇಹವನ್ನು ಕೆಳಗೆ ಇಳಿಸಲಾಗುತ್ತದೆ. ನಂತರ ಮೃತದೇಹದ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಕುಟುಂಬದವರು ಮೃತದೇಹವನ್ನು ಕೇಳದಿದ್ದರೆ, ಜೈಲಿನಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.

ಇನ್ನೂ ತೀರ್ಮಾನ ಕೈಗೊಂಡಿಲ್ಲ : ಯಾಕೂಬ್ ಮೃತದೇಹದ ಅಂತ್ಯ ಸಂಸ್ಕಾರದ ಕುರಿತು ಇನ್ನೂ ಅಂತಿಮ ತೀರ್ಮಾನವನ್ನು ಜೈಲಿನ ಅಧಿಕಾರಿಗಳು ಕೈಗೊಂಡಿಲ್ಲ. ಮೃತದೇಹ ಬೇಕಾದರೆ ಕುಟುಂಬದವರು ಲಿಖಿತವಾಗಿ ಜೈಲು ಅಧೀಕ್ಷಕರಿಗೆ ಮನವಿ ಸಲ್ಲಿಸಬೇಕಾಗುತ್ತದೆ. ಸಾರ್ವಜನಿಕವಾಗಿ ಮೃತದೇಹವನ್ನು ಪ್ರದರ್ಶಿಸುವಂತಿಲ್ಲ ಎಂಬ ಷರತ್ತಿನೊಂದಿಗೆ ಕುಟುಂಬದವರಿಗೆ ದೇಹವನ್ನು ಹಸ್ತಾಂತರ ಮಾಡಲಾಗುತ್ತದೆ. ಅಂತ್ಯಕ್ರಿಯೆ ನಡೆಯುವ ತನಕ ಜೈಲಿನ ಕೆಲವು ಸಿಬ್ಬಂದಿಗಳು ಮೃತದೇಹದ ಜೊತೆ ಇರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+