ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಯವಿಟ್ಟು ಶೌಚಾಲಯ ಕಟ್ಟಿಸಿಕೊಳ್ಳಿ, ನಿಮ್ಮ ಕಾಲಿಗೆ ಬೀಳುತ್ತೀನಿ!

ಇಂದು ಭಾರತದಲ್ಲಿ ಚೆರಿಗಿ ತೆಗೆದುಕೊಂಡು ಹೋಗುವ, ಬಯಲಿಗೆ ಹೋಗುವ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ. ಟಾಯ್ಲೆಟ್ ಅಂದ್ರೆ ಸಾಕು ಬೆಚ್ಚಿಬೀಳುವ ಜನರೂ ಇದ್ದಾರೆ. ಇರಲಿ ಬಿಡಿ, ಶೌಚಾಲಯಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಆಸಕ್ತಿಕರ ಸಂಗತಿಗಳು ಇಲ್ಲಿವೆ.

By Prasad
|
Google Oneindia Kannada News

ಬೆಂಗಳೂರು, ನವೆಂಬರ್ 19 : "ದಯವಿಟ್ಟು ಶೌಚಾಲಯ ಕಟ್ಟಿಸಿಕೊಳ್ಳಿ, ನಿಮ್ಮ ಕಾಲಿಗೆ ಬೀಳುತ್ತೀನಿ" ಅಂತ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗ್ರಾಮ ಪಂಚಾಯತಿ ಅಧ್ಯಕ್ಷನೊಬ್ಬ ಹಳ್ಳಿಗರ ಕಾಲಿಗೆ ಬೀಳುತ್ತಾನೆಂದರೆ, ಕರ್ನಾಟಕದ ಕೆಲ ಹಳ್ಳಿಗಳಲ್ಲಿ ಶೌಚದ ಸ್ಥಿತಿಗತಿ ಹೇಗಿದೆಯೆಂದು ಊಹಿಸಿಕೊಳ್ಳಿ.

ಇಲ್ಲಿ ಶೌಚಾಲಯ ಕಟ್ಟಿಸಬೇಕೆಂದು ವಿದ್ಯಾರ್ಥಿನಿಯೊಬ್ಬಳು ಉಪವಾಸ ಸತ್ಯಾಗ್ರಹ ಕೂಡಬೇಕಾಗುತ್ತದೆ, ಸಂಡಾಸು ಕಟ್ಟಿಸದಿದ್ದರೆ ತಾಳಿ ಕಟ್ಟಲು ಬಿಡುವುದೇ ಇಲ್ಲ ಎಂದು ವಧುವೊಬ್ಬಳು ಪ್ರತಿಭಟನೆ ಮಾಡಬೇಕಾಗುತ್ತದೆ, ಶೌಚಾಲಯ ಕಟ್ಟಿಸಲು ಹಿಂದೇಟು ಹಾಕುವ ರಾಜಕಾರಣಿಗೆ ಜನರು ದಿಗ್ಬಂಧನವೂ ಹಾಕಬೇಕಾಗುತ್ತದೆ.

ಕೆಲ ವರ್ಷಗಳ ಹಿಂದೆ ಧೀರ ಮಹಿಳೆಯೊಬ್ಬಳು ಶೌಚಾಲಯ ಕಟ್ಟಿಸಬೇಕೆಂದು ತನ್ನ ತಾಳಿಯನ್ನೇ ಮಾರಿದ್ದಳು. ನಮ್ಮ ಭಾರತದಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡುತ್ತಿಲ್ಲವೆಂದಲ್ಲ, ಆದರೂ ಇನ್ನೂ ಎಷ್ಟು ಹಿಂದಿದ್ದೇವೆಂದು ಹಳ್ಳಿಹಳ್ಳಿಗಳು ಸಾರಿ ಹೇಳುತ್ತಿವೆ. ಬಯಲು ಶೌಚದಿಂದ ನಾವಿನ್ನೂ ಮುಕ್ತವಾಗಿಲ್ಲ.

ಗಂಗಾವತಿ ಪ್ರಾಣೇಶ್ ಮಾತುಗಳನ್ನು ಕೇಳಿದ್ದರೆ ತಂಬಗಿ ತಮ್ಮಣ್ಣನ ಕಥೆ ಕೇಳಿರಬಹುದು. ಇಂದು ಭಾರತದಲ್ಲಿ ಚೆರಿಗಿ ತೆಗೆದುಕೊಂಡು ಹೋಗುವ, ಬಯಲಿಗೆ ಹೋಗುವ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ. ಟಾಯ್ಲೆಟ್ ಅಂದ್ರೆ ಸಾಕು ಬೆಚ್ಚಿಬೀಳುವ ಜನರೂ ಇದ್ದಾರೆ. ಇರಲಿ ಬಿಡಿ, ಶೌಚಾಲಯಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಆಸಕ್ತಿಕರ ಸಂಗತಿಗಳು ಇಲ್ಲಿವೆ. [ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಕಾಲಿಗೆ ಬಿದ್ದ ಗ್ರಾ.ಪಂ ಅಧ್ಯಕ್ಷ]

ಹ್ಯಾಪಿ ವಿಶ್ವ ಶೌಚಾಲಯ ದಿನಾಚರಣೆ!

ಹ್ಯಾಪಿ ವಿಶ್ವ ಶೌಚಾಲಯ ದಿನಾಚರಣೆ!

ಇಷ್ಟೊಂದು ಪೀಠಿಕೆ ಇಂದು ಏಕೆ ಹಾಕಬೇಕಾಯಿತೆಂದರೆ, ನವೆಂಬರ್ 19 'ವಿಶ್ವ ಶೌಚಾಲಯ ದಿನ'! ಎಂಥೆಂಥವರದೋ ಜಯಂತಿಗಳನ್ನು, ಎಂಥೆಂಥದೋ ದಿನಾಚರಣೆಗಳನ್ನು ಆಚರಿಸುತ್ತೇವೆ. ಆದರೆ, ಇಂದು ವಿಶ್ವ ಶೌಚಾಲಯ ದಿನ ಆಚರಿಸುತ್ತಿರುವುದು ಸಂತೋಷದ ಸಂಗತಿಯೋ, ದುಃಖದ ಸಂಗತಿಯೋ ಗೊತ್ತಿಲ್ಲ. ಆದರೂ ಆಚರಿಸಬೇಕಾದ ಅಗತ್ಯ ಇಂದು ಎಲ್ಲ ಆಚರಣೆಗಳಿಗಿಂತ ಹೆಚ್ಚಾಗಿದೆ. [ಮೋದಿ ಹೊಗಳಿದ ಕೊಪ್ಪಳದ ಮಲ್ಲಮ್ಮ ಯಾರು?]

ಶೌಚಾಲಯ ವಂಚಿತರು 2.4 ಬಿಲಿಯನ್

ಶೌಚಾಲಯ ವಂಚಿತರು 2.4 ಬಿಲಿಯನ್

ಇದು ಭಾರತದಲ್ಲಿ ಇರುವ ಕಾಯಿಲೆ ಮಾತ್ರವಲ್ಲ. ಜಾಗತಿಕವಾಗಿ 2.4 ಬಿಲಿಯನ್ (1 ಬಿಲಿಯನ್ = 100 ಕೋಟಿ) ಜನರು ಶೌಚಾಲಯದಿಂದ ವಂಚಿತರಾಗಿದ್ದಾರೆ. 2030ರ ಹೊತ್ತಿಗೆ ಜಗತ್ತಿನ ಎಲ್ಲ ಜನರಿಗೆ ಶೌಚಾಲಯ ಸಿಗುವಂತಾಗಬೇಕು ಎಂಬ ಅಭಿಯಾನವನ್ನು 2015ರಲ್ಲಿ ಆರಂಭಿಸಲಾಗಿದೆ. [ರೈಲ್ವೆ ಶೌಚಾಲಯ ವಿನ್ಯಾಸಕ್ಕೆ ಪ್ರಶಸ್ತಿ ಪಡೆದ ಮಣಿಪಾಲ ವಿದ್ಯಾರ್ಥಿ
]

ವಿಶ್ವ ಆರೋಗ್ಯ ಸಂಸ್ಥೆ ಅಂಕಿಅಂಶ

ವಿಶ್ವ ಆರೋಗ್ಯ ಸಂಸ್ಥೆ ಅಂಕಿಅಂಶ

ಇಡೀ ಜಗತ್ತಿನಲ್ಲಿ ಹತ್ತರಲ್ಲಿ ಒಬ್ಬ ಬಹಿರಂಗವಾಗಿ ಬಹಿರ್ದೆಸೆಗೆ ಹೋಗುತ್ತಾನೆ/ಳೆ. ಪ್ರತಿವರ್ಷ ಅಸುರಕ್ಷಿತ ನೀರು ಮತ್ತು ಸ್ವಚ್ಛತೆಯಿಲ್ಲದ ಶೌಚಾಲಯ ಬಳಕೆಯಿಂದ 3 ಲಕ್ಷ 15 ಸಾವಿರ ಜನರು ಬೇಧಿಯಿಂದ ಸಾವಿಗೀಡಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂಕಿಅಂಶಗಳನ್ನು ನೀಡಿದೆ.

ಕೆಲಸದ ಸ್ಥಳದಲ್ಲಿ ಶೌಚಾಲಯ

ಕೆಲಸದ ಸ್ಥಳದಲ್ಲಿ ಶೌಚಾಲಯ

ಕೆಲಸದ ಸ್ಥಳಗಳಲ್ಲಿ ಆಗುತ್ತಿರುವ ಸಾವುಗಳಲ್ಲಿ ಶೇ.17ರಷ್ಟು ಕಳಪೆ ಮತ್ತು ಸ್ವಚ್ಛತೆಯಿಲ್ಲದ ಶೌಚಾಲಯದಿಂದ ಸಂಭವಿಸುತ್ತದೆ ಎಂದು ವರದಿ ಮಾಡಲಾಗಿದೆ. ಅಲ್ಲದೆ, ಇದರಿಂದಾಗುತ್ತಿರುವ ಅನಾರೋಗ್ಯದಿಂದಾಗಿ ಹಲವಾರು ರಾಷ್ಟ್ರಗಳಲ್ಲಿ ಜಿಡಿಪಿಯ ಶೇ.5ರಷ್ಟು ನಷ್ಟವಾಗುತ್ತಿದೆ.

ಮಹಿಳೆಯರ ಗೌರವ ಕಾಪಾಡಲು

ಮಹಿಳೆಯರ ಗೌರವ ಕಾಪಾಡಲು

ಶೌಚಾಲಯವಿಂದು ಆರೋಗ್ಯ ಸುಧಾರಣೆಗಾಗಿ ಮಾತ್ರ ಅಗತ್ಯವಿಲ್ಲ, ಜನರ ರಕ್ಷಣೆಗಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯರ ಮತ್ತು ಬಾಲಕಿಯರ ಗೌರವ ಕಾಪಾಡಲೂ ಶೌಚಾಲಯ ನಿರ್ಮಿಸಬೇಕಾಗಿದೆ. ಶೌಚಾಲಯ ಆಯಾ ದೇಶದ ಆರ್ಥಿಕ ಸುಭದ್ರತೆಯ ಸಂಕೇತವೂ ಆಗಿದೆ.

ಶೌಚಾಲಯಕ್ಕೂ ಉದ್ಯೋಗಕ್ಕೂ ಸಂಬಂಧ

ಶೌಚಾಲಯಕ್ಕೂ ಉದ್ಯೋಗಕ್ಕೂ ಸಂಬಂಧ

ಶೌಚಾಲಯಕ್ಕೂ ಉದ್ಯೋಗಕ್ಕೂ ನೇರಾನೇರ ಸಂಬಂಧವಿದೆ ಎಂದು ಎಲ್ಲರೂ ನಂಬಲೇಬೇಕು. ಈ ದೃಷ್ಟಿಯಿಂದ ಈ ವರ್ಷದ ಆಚರಣೆಯನ್ನು 'ಶೌಚಾಲಯ ಮತ್ತು ಉದ್ಯೋಗ' ಎಂಬ ಥೀಮ್ ಇಟ್ಟುಕೊಂಡು ಆಚರಿಸಲಾಗುತ್ತಿದೆ. ಶೌಚಾಲಯ ಕಟ್ಟಿಸಿ, ಉದ್ಯೋಗ ಸೃಷ್ಟಿಸಿ, ಆರ್ಥಿಕತೆ ಉತ್ತಮಪಡಿಸಿ!

ಎಲ್ಲಿದೆ ಶೌಚಾಲಯ ಎಲ್ಲಿದೆ?

ಎಲ್ಲಿದೆ ಶೌಚಾಲಯ ಎಲ್ಲಿದೆ?

ಭಾರತದಲ್ಲಿ, ಶೌಚಾಲಯ ಎಲ್ಲಿದೆಯೆಂದು ಅಥವಾ ಬಹಿರ್ದೆಸೆಗೆ ಎಲ್ಲಿ ಹೋಗುವುದೆಂದು ಹುಡುಕುವುದರಿಂದ 10 ಬಿಲಿಯನ್ ಡಾಲರ್ ನಷ್ಟು ಆರ್ಥಿಕ ಹೊಡೆತ ಬೀಳುತ್ತಿದೆ. ಉದ್ಯೋಗ ಸ್ಥಳದಲ್ಲಿ ಉತ್ತಮ ಶೌಚಾಲಯವಿರುವುದರಿಂದ ಕಂಪನಿಯ ಉತ್ಪನ್ನವನ್ನೂ ಹೆಚ್ಚಿಸುತ್ತದೆ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

English summary
World Toilet Day, on 19 November, is about taking action to reach the 2.4 billion people living without a toilet. The theme of World Toilet Day 2016 is ‘toilets and jobs’, focusing on how sanitation, or the lack of it, can impact people’s livelihoods.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X