• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ವಿದ್ಯಾರ್ಥಿಗಳ ದಿನ 2022: ಇತಿಹಾಸ, ಮಹತ್ವ, ಥೀಮ್ ತಿಳಿಯಿರಿ

|
Google Oneindia Kannada News

ನವದೆಹಲಿ ಅಕ್ಟೋಬರ್ 15: ವಿಶ್ವ ವಿದ್ಯಾರ್ಥಿಗಳ ದಿನವನ್ನು ಪ್ರತಿ ವರ್ಷ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು (ಅಕ್ಟೋಬರ್ 15) ಆಚರಿಸಲಾಗುತ್ತದೆ. ನಮ್ಮ ಸಮಾಜದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಕಲಾಂ ಅವರ ನಿಸ್ವಾರ್ಥ ಕೊಡುಗೆಗೆ ಗೌರವ ಸಲ್ಲಿಸಲು ಇದನ್ನು ಆಚರಿಸಲಾಗುತ್ತದೆ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಬೋಧನೆಯಲ್ಲಿ ಎಷ್ಟು ಸಮರ್ಪಿತರಾಗಿದ್ದರು ಎಂದರೆ ಅವರು ಭಾರತದ 11 ನೇ ರಾಷ್ಟ್ರಪತಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ಮರುದಿನವೇ ತಮ್ಮ ಶಿಕ್ಷಕ ವೃತ್ತಿಗೆ ಮರಳಿದರು. ಡಾ ಕಲಾಂ ಯಾವಾಗಲೂ ತಮ್ಮ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರು.

ಕಲಿಯುವಿಕೆ, ಇದು ನಿರಂತರ, ಮತ್ತು ಅನಂತ. ಜೀವಮಾನವಿಡೀ ನಾವು ಕಲಿಯುತ್ತಲೇ ಇರಬೇಕು ಹಾಗೂ ಮುನ್ನಡೆಯುತ್ತಲೇ ಇರಬೇಕು. ತಮ್ಮ ಸುತ್ತಮುತ್ತಲಿರುವ ವಸ್ತು, ವಿಷಯ ಹಾಗೂ ಆಗುಹೋಗುಗಳ ಬಗ್ಗೆ ಸತತವಾಗಿ ಅರಿಯುತ್ತಾ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿರುವುದೇ ಜೀವನದ ಜೀವಾಳ.

ಭಾರತ ಕಂಡ ರಾಷ್ಟ್ರಾಧ್ಯಕ್ಷರಲ್ಲಿಯೇ ಅತಿ ಹೆಚ್ಚಾಗಿ ಜನಮನ್ನಣೆ ಮತ್ತು ಪ್ರೀತಿಯನ್ನು ಗಳಿಸಿದ್ದವರೆಂದರೆ ಡಾ. ಕಲಾಂ. ಯುವಜನತೆ ಅವರನ್ನು ಶಿಕ್ಷಕರಿಗಿಂತಲೂ ಹೆಚ್ಚಾಗಿ ತಮ್ಮ ಮಾರ್ಗದರ್ಶಕನೆಂದೇ ಗುರುತಿಸುತ್ತಿದ್ದರು. ಕಲಾಂ ಸದಾ ತಮ್ಮ ವಿದ್ಯಾರ್ಥಿಗಳಿಗೆ ದೊಡ್ಡದನ್ನೇ ಕನಸು ಕಾಣಲು ಹಾಗೂ ಇದನ್ನು ಸಾಕಾರಗೊಳಿಸಲು ಯತ್ನಿಸಲೆಂದೇ ಪ್ರೇರಣೆ ನೀಡುತ್ತಿದ್ದರು.

ವಿಶ್ವ ವಿದ್ಯಾರ್ಥಿಗಳ ದಿನದ ಇತಿಹಾಸ

ವಿಶ್ವ ವಿದ್ಯಾರ್ಥಿಗಳ ದಿನದ ಇತಿಹಾಸ

ವಿಶ್ವ ವಿದ್ಯಾರ್ಥಿಗಳ ದಿನವನ್ನು ಭಾರತದಲ್ಲಿ ಮಾತ್ರ ಆಚರಿಸಲಾಗುತ್ತದೆ. ಅದು ಹೇಗೆ ಹುಟ್ಟಿಕೊಂಡಿತು ಎಂಬುದು ಯಾರಿಗೂ ತಿಳಿದಿಲ್ಲ. ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಯುಎನ್ ಅಧಿಕೃತವಾಗಿ ಘೋಷಿಸಿಲ್ಲ ಎಂದು ವಿಶ್ವಸಂಸ್ಥೆ ದೃಢಪಡಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಕಲಾಂ ಅವರ ಕೊಡುಗೆಯನ್ನು ಸ್ಮರಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಅವರ ಒಳನೋಟವುಳ್ಳ ಉಪನ್ಯಾಸಗಳು ಮತ್ತು ಬೋಧನೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ.

ಅಬ್ದುಲ್ ಕಲಾಂ ಅವರು ಯಾವಾಗಲೂ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಗೊಳಿಸುವಲ್ಲಿ ಶ್ರಮಿಸಿದರು. ಜೊತೆಗೆ ನಮ್ಮ ದೇಶವನ್ನು ಪ್ರತಿ ಕ್ಷೇತ್ರದಲ್ಲೂ ಯಶಸ್ಸಿನ ಹೊಸ ಎತ್ತರಕ್ಕೆ ಕೊಂಡೊಯ್ಯುವ ಪ್ರಗತಿಪರ ಮನಸ್ಸುಗಳನ್ನು ಹೊಂದಿದ್ದಾರೆ. ಅಬ್ದುಲ್ ಕಲಾಂ ಅವರ ವಿದ್ಯಾರ್ಥಿಗಳ ಮೇಲಿನ ಪ್ರೀತಿಯನ್ನು ಆಚರಿಸಲು ವಿಶ್ವ ವಿದ್ಯಾರ್ಥಿಗಳ ದಿನ ಅಸ್ತಿತ್ವಕ್ಕೆ ಬಂದಿತು.

ವಿಶ್ವ ವಿದ್ಯಾರ್ಥಿಗಳ ದಿನ 2022: ಥೀಮ್

ವಿಶ್ವ ವಿದ್ಯಾರ್ಥಿಗಳ ದಿನ 2022: ಥೀಮ್

ವಿಶ್ವ ಶಿಕ್ಷಕರ ದಿನದ ಈ ವರ್ಷದ ಥೀಮ್ "ಶಿಕ್ಷಣದ ಪರಿವರ್ತನೆಯು ಶಿಕ್ಷಕರಿಂದ ಪ್ರಾರಂಭವಾಗುತ್ತದೆ".

ಎ. ಪಿ. ಜೆ. ಅಬ್ದುಲ್ ಕಲಾಂ ಅವರನ್ನು ಭಾರತದಾದ್ಯಂತ ವಿದ್ಯಾರ್ಥಿಗಳು ಪ್ರೀತಿಸುತ್ತಿದ್ದರು. ಕಲಾಂ ಸ್ವತಃ ಶಿಕ್ಷಣ ನೀಡುವ ಶಿಕ್ಷಕರಾಗಲು ಹೆಚ್ಚು ಇಷ್ಟಪಡುತ್ತಿದ್ದರು ಹಾಗೂ ಹಾಗೇ ಆಗಬೇಕೆಂದೂ ಬಯಸಿದ್ದರು. ತಾವು ಸ್ವತಃ ಕಲಿತು ಕಲಿಸುವುದಲ್ಲದೇ ತಮ್ಮ ವಿದ್ಯಾರ್ಥಿಗಳೂ ಹೆಚ್ಚು ಹೆಚ್ಚಾಗಿ ಕಲಿತು ಮುಂದೆ ಬರಲು ಅವರು ಪ್ರೇರೇಪಿಸುತ್ತಿದ್ದರು. ಶಿಕ್ಷಣದ ಕುರಿತಾದ ಅವರ ಕಾಳಜಿ ಹಾಗೂ ಪ್ರೇರಣೆಯನ್ನು ಗಮನಿಸಿದ ವಿಶ್ವ ಸಂಸ್ಥೆ ಅವರ ಹುಟ್ಟಿದ ದಿನಾಂಕವನ್ನೇ ಅಂದರೆ ಅಕ್ಟೋಬರ್ ಹದಿನೈದರಂದು ವಿಶ್ವ ವಿದ್ಯಾರ್ಥಿಗಳ ದಿನದ ರೂಪದಲ್ಲಿ ಆಚರಿಸಲು ಕ್ರಮ ಕೈಗೊಂಡಿತು ಹಾಗೂ ಆ ಪ್ರಕಾರ ಈ ದಿನವನ್ನು 'ವಿಶ್ವ ವಿದ್ಯಾರ್ಥಿಗಳ ದಿನ'ದ ಹೆಸರಿನಲ್ಲಿಯೇ ಆಚರಿಸಲಾಗುತ್ತಿದೆ.

ವಿಶ್ವ ವಿದ್ಯಾರ್ಥಿಗಳ ದಿನದ ಮಹತ್ವ

ವಿಶ್ವ ವಿದ್ಯಾರ್ಥಿಗಳ ದಿನದ ಮಹತ್ವ

ವಿಶ್ವ ವಿದ್ಯಾರ್ಥಿಗಳ ದಿನವನ್ನು ಮಹತ್ವದ ಘಟನೆ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಮಾಜಿ ಭಾರತೀಯ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನವನ್ನು ಸೂಚಿಸುತ್ತದೆ. ಈ ದಿನವನ್ನು ಮುಖ್ಯವೆಂದು ಪರಿಗಣಿಸುವ ಇತರ ಕಾರಣಗಳು ಹೀಗಿವೆ:

ಇದು ಶಿಕ್ಷಣದ ಮಹತ್ವವನ್ನು ಪುನರುಚ್ಚರಿಸುತ್ತದೆ.

ಶಿಕ್ಷಣದ ಮೂಲಭೂತ ಹಕ್ಕನ್ನು ಗುರುತಿಸುವ ದಿನ.

ಇದು ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಅದ್ಭುತ ಕೆಲಸವನ್ನು ಸ್ಮರಿಸುತ್ತದೆ,

ಜೊಇತೆಗೆ ವಿದ್ಯಾರ್ಥಿಗಳಿಗೆ ಕಲಿಸುವ ಕಲಾಂ ಅವರ ಒಲವು ನೆನಪಾಗುತ್ತದೆ.

ದೇಶ ಕಂಡ ಅದ್ಭುತ ವಿಜ್ಞಾನಿ

ದೇಶ ಕಂಡ ಅದ್ಭುತ ವಿಜ್ಞಾನಿ

ಡಾ ಕಲಾಂ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ಅಥವಾ ಭಾರತ ರತ್ನ ನೀಡಲಾಯಿತು. ಭಾರತ ಸರ್ಕಾರದ ವೈಜ್ಞಾನಿಕ ಸಲಹೆಗಾರರಾಗಿ ಕೆಲಸ ಮಾಡಿದ್ದಕ್ಕಾಗಿ ಅವರಿಗೆ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಲಾಂ ಅವರು ಜುಲೈ 27, 2015 ರಂದು ಐಐಎಂ-ಶಿಲ್ಲಾಂಗ್‌ನಲ್ಲಿ ಉಪನ್ಯಾಸ ನೀಡುವಾಗ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾದರು.

ಐ ಐ ಎಂ ಶಿಲ್ಲಾಂಗ್ ನಲ್ಲಿ ಅವರು ಅಮ್ದು ತಮ್ಮ ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಿದ್ದಾಗಲೇ ಅಕಾಸ್ಮಾತ್ತಾಗಿ ಕುಸಿದು ಬಿದ್ದರು ಹಾಗೂ ಹೆಚ್ಚೂ ಕಡಿಮೆ ಅದೇ ಕ್ಷಣದಲ್ಲಿ ಸಾವನ್ನಪ್ಪಿದರು. ಆ ದಿನದಂದು ಕಂಬನಿ ಮಿಡಿಯದ ಭಾರತೀಯನೇ ಇರಲಾರ. ಜಾತಿ, ಧರ್ಮ, ಕುಲ, ಅಂತಸ್ತು ಯಾವುದೂ ಈ ದಿನ ಪರಿಗಣನೆಗೇ ಬಂದಿರಲಿಲ್ಲ. ಅವರು ಕೇವದ ದೇಶದ ಮಾತ್ರವಲ್ಲ, ಪ್ರತಿ ಯುವಜನತೆಯ ಅಧ್ಯಕ್ಷರಾಗಿದ್ದರು. ಚಿಕ್ಕ ಹಳ್ಳಿಯಲ್ಲಿ ಪೇಪರ್ ವಿತರಿಸುತ್ತಿದ್ದ ಹುಡುಗನೊಬ್ಬ ಶ್ರೇಷ್ಠ ವಿಜ್ಞಾನಿ ಹಾಗೂ ಭಾರತದ ರಾಷ್ಟ್ರಾಧ್ಯಕ್ಷನಾಗಬಹುದು ಎಂಬುದನ್ನು ಅವರು ಜಗತ್ತಿಗೆ ತೋರಿಸಿಕೊಟ್ಟರು. ಅವರ ನಿಧನ ವರ್ಷಗಳ ನಂತರ, ಅವರ ಕೊಡುಗೆಗಳು ದೇಶದಲ್ಲಿನ ಕೆಲವು ಅತ್ಯುತ್ತಮ ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳಾಗಿ ಇನ್ನೂ ನೆನಪಿನಲ್ಲಿ ಉಳಿದಿವೆ.

English summary
World Students Day 2022 Date, History, Theme and Significance of APJ Abdul Kalam Birth Anniversary in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X