ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಆರೋಗ್ಯ ದಿನ: ಸಾರ್ವತ್ರಿಕ ಆರೋಗ್ಯ ಸರ್ವರಿಗೂ ಸಮಪಾಲು

By ಪೂರ್ಣಿಮಾ ಜಿ.ಆರ್.
|
Google Oneindia Kannada News

'ಆರೋಗ್ಯ ಮಾನವನ ಹಕ್ಕು, ಯಾರೊಬ್ಬರೂ ಸಹ ಅವಶ್ಯಕ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗದ ಕಾರಣ ಖಾಯಿಲೆಗೆ ಒಳಗಾಗಬಾರದು ಅಥವಾ ಸಾಯಬಾರದು.' ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ, ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಏಪ್ರಿಲ್ 7 ನ್ನು 'ವಿಶ್ವ ಆರೋಗ್ಯ ದಿನ'ವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಬಾರಿಗೆ 'ಸಾರ್ವತ್ರಿಕ ಆರೋಗ್ಯ ರಕ್ಷಣೆ-ಎಲ್ಲರಿಗೂ, ಎಲ್ಲಾಕಡೆ'(Universal Health Coverage: Everyone, Everywhere ) ಎಂಬ ಧ್ಯೇಯವಾಕ್ಯದೊಂದಿಗೆ ಈ ದಿನ ಆಚರಿಸುತ್ತಿದೆ.

ಮೋದಿ ಸರ್ಕಾರದಿಂದ 10 ಕೋಟಿ ಕುಟುಂಬಗಳಿಗೆ ಆರೋಗ್ಯ ವಿಮೆಮೋದಿ ಸರ್ಕಾರದಿಂದ 10 ಕೋಟಿ ಕುಟುಂಬಗಳಿಗೆ ಆರೋಗ್ಯ ವಿಮೆ

ಅಷ್ಟೇ ಅಲ್ಲದೆ 'ಸುಸ್ಥಿರ ಅಭಿವೃದ್ಧಿ ಗುರಿ' 2015 ಶೃಂಗಸಭೆಯನ್ವಯ 2030ರ ಹೊತ್ತಿಗೆ ಯುನೈಟೆಡ್ ನೇಷನ್ ನ ಎಲ್ಲಾ ಸದಸ್ಯ ರಾಷ್ಟ್ರಗಳು ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸಲು ಒಪ್ಪಿಕೊಂಡಿರುವುದನ್ನು ಸಹ ಇದು ಜ್ಞಾಪಿಸುತ್ತದೆ. ಪ್ರತಿಯೊಂದು ದೇಶವು ಪ್ರಜೆಗಳ ಆರೋಗ್ಯ, ಶಿಕ್ಷಣ ಮತ್ತು ಜೀವನೋಪಾಯದ ಮೇಲೆ ಮಾಡುವ ವೆಚ್ಚವು ಆ ದೇಶದ ಮಾನವ ಸಂಪನ್ಮೂಲದ ಬಂಡವಾಳವಾಗಿದ್ದು, ಇದರ ಸಮೃದ್ಧಿಯು ದೇಶದ ಅಭಿವೃದ್ಧಿಯನ್ನು ಸೂಚಿಸುತ್ತದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಉತ್ತಮ ಆರೋಗ್ಯವು ಮನುಷ್ಯನ ಜೀವಿತಾವಧಿಯನ್ನು ಹೆಚ್ಚಿಸುವುದಲ್ಲದೆ ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆ ಉತ್ತಮ ಆರೋಗ್ಯದ ಮೇಲೆ ನಿಂತಿರುತ್ತದೆ. ಈ ನಿಟ್ಟಿನಲ್ಲಿ ವಿಶ್ವದ ಕೆಲವು ದೇಶಗಳು ಈಗಾಗಲೇ ಸಾರ್ವತ್ರಿಕ ಆರೋಗ್ಯ ರಕ್ಷಣೆಯತ್ತಾ ಗಮಾನರ್ಹ ಪ್ರಗತಿಯನ್ನು ಸಾಧಿಸಿವೆ, ಆದರೆ ಬಹುತೇಕ ದೇಶಗಳು ಪ್ರಗತಿಯನ್ನು ಸಾಧಿಸುವತ್ತಾ ಕಾರ್ಯಯೋಜನೆ ರೂಪಿಸಿಕೊಂಡಿವೆ.

ಸಾರ್ವತ್ರಿಕ ಆರೋಗ್ಯ ರಕ್ಷಣೆ

ಸಾರ್ವತ್ರಿಕ ಆರೋಗ್ಯ ರಕ್ಷಣೆ

'ಎಲ್ಲಾ ಜನರು ಹಾಗೂ ಸಮುದಾಯಗಳು ಯಾವುದೇ ರೀತಿಯ ತಾರತಮ್ಯವಿಲ್ಲದೆ, ಯಾರನ್ನು ಸಹ ಸೇವೆಯಿಂದ ಹೊರಗಿಡದೆ, ಎಲ್ಲರಿಗೂ, ಎಲ್ಲಾಕಡೆ ಯಾವುದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗದಂತೆ ಗುಣಮಟ್ಟದ ಅಗತ್ಯ ಆರೋಗ್ಯ ಸೇವೆಯನ್ನು ಪಡೆಯುವುದು'- ವಿಶ್ವ ಆರೋಗ್ಯ ಸಂಸ್ಥೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಎಂದರೆ ಉಚಿತ ಆರೋಗ್ಯ ಸೇವೆ ಎಂದು ಭಾವಿಸಬಾರದು. ಯಾವುದೇ ದೇಶವು ಉಚಿತ ಆರೋಗ್ಯ ಸೇವೆಯನ್ನು ನಿರಂತರವಾಗಿ ನೀಡಲು ಸಾಧ್ಯವಿಲ್ಲ. ಸಾರ್ವತ್ರಿಕ ಆರೋಗ್ಯ ರಕ್ಷಣೆಯು ವಿಶಾಲವಾಗಿದ್ದು, ಇದು ಆರ್ಥಿಕ ತೊಂದರೆಗಳ ರಕ್ಷಣೆ, ಅಗತ್ಯ ಆರೋಗ್ಯ ಸೇವೆಗಳ ಲಭ್ಯತೆ, ಸುರಕ್ಷತೆ, ಪರಿಣಾಮಕಾರಿ ಮತ್ತು ಗುಣಮಟ್ಟದ ಸೇವೆಗಳು ಹಾಗು ಕೈಗೆಟಕುವ ದರದಲ್ಲಿ ಅಗತ್ಯ ಔಷಧಿಗಳು, ಲಸಿಕೆಗಳು ಹಾಗೂ ರೋಗಗಳನ್ನು ತಡೆಗಟ್ಟುವ ಕ್ರಮ ಮುಂತಾದವುಗಳನ್ನು ಒಳಗೊಂಡಿರುತ್ತದೆ.

2025ರ ಹೊತ್ತಿಗೆ ಭಾರತದಿಂದ ಕ್ಷಯ ರೋಗ ನಿರ್ಮೂಲನೆ: ನರೇಂದ್ರ ಮೋದಿ 2025ರ ಹೊತ್ತಿಗೆ ಭಾರತದಿಂದ ಕ್ಷಯ ರೋಗ ನಿರ್ಮೂಲನೆ: ನರೇಂದ್ರ ಮೋದಿ

ಸಾರ್ವಜನಿಕ ಆರೋಗ್ಯ ರಕ್ಷಣೆ ಏಕೆ ಬೇಕು?

ಸಾರ್ವಜನಿಕ ಆರೋಗ್ಯ ರಕ್ಷಣೆ ಏಕೆ ಬೇಕು?

ಆರೋಗ್ಯ ಸೇವೆಯು ದುಬಾರಿಯಾದಾಗ ಹೆಚ್ಚಿನ ಸಂಕಷ್ಟ ಅನುಭವಿಸುವವರು ಬಡವರು. ಅವರ ಆದಾಯದ ಹೆಚ್ಚಿನ ಪಾಲು ಆರೋಗ್ಯಕ್ಕೆ ಖರ್ಚಾದರೆ ಅವರ ಜೀವನಶೈಲಿಯು ಕುಗ್ಗುವುದರ ಜೊತೆಗೆ ಅವರನ್ನು ಸಾಲದಲ್ಲಿ ಇರಿಸುವುದರ ಮೂಲಕ ಜೀವನಪೂರ್ತಿ ಕೊಡಿಟ್ಟ ಹಣ ಮತ್ತು ಮಾಡಿಟ್ಟ ಅಲ್ಪಸ್ವಲ್ಪ ಸ್ವತ್ತುಗಳನ್ನು ಸಹ ಮಾರಬೇಕಾಗುತ್ತದೆ, ಇದು ಅವರ ಮತ್ತು ಅವರ ಮಕ್ಕಳ ಜೀವನವನ್ನು ಸಂಕಷ್ಟದತ್ತಾ ದೂಡುತ್ತದಲ್ಲದೆ, ದೇಶದ ಪ್ರಗತಿಗೆ ಅಡ್ಡಿಯಾಗುತ್ತದೆ. ಆರೋಗ್ಯದ ಮೇಲೆ ಮಾಡುವ ಇಂತಹ ಖರ್ಚನ್ನು ದುರಂತವೆಚ್ಚ ಎನ್ನುತ್ತಾರೆ. ಸಾರ್ವತ್ರಿಕ ಆರೋಗ್ಯ ಸೇವೆಯನ್ನು ಆಳತೆ ಮಾಡದ ಹೊರತು ಪ್ರಗತಿಯನ್ನು ತಿಳಿಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಪ್ರಗತಿಯನ್ನು ಅಳತೆಮಾಡುವಲ್ಲಿ 'ಸುಸ್ಥಿರ ಅಭಿವೃದ್ಧಿಯ 3ನೇ ಗುರಿಯು' ಒಂದು ಮಾನದಂಡವಾಗಿದ್ದು. ಎಸ್‍ಡಿಜಿಯ 3.8ನೇ ಅಂಶವು ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಪ್ರತಿನಿಧಿಸುತ್ತದೆ. ಇದು ಅಗತ್ಯ ಆರೋಗ್ಯ ಸೇವೆಗಳ ಲಭ್ಯತೆ ಮತ್ತು ಆರೋಗ್ಯದ ಮೇಲೆ ದುರಂತವೆಚ್ಚವನ್ನು ಮಾಡುವ ಜನಸಂಖ್ಯೆ ಅನುಪಾತದ ಪ್ರಮಾಣದ ಸೂಚಕಗಳ ಮೂಲಕ ಅಳೆಯಬಹುದಾಗಿದೆ.

'ಆರೋಗ್ಯಯುತ ಕರ್ನಾಟಕದ ನಿರ್ಮಾಣ ನಮ್ಮ ಗುರಿ' : ಸಿದ್ದರಾಮಯ್ಯ 'ಆರೋಗ್ಯಯುತ ಕರ್ನಾಟಕದ ನಿರ್ಮಾಣ ನಮ್ಮ ಗುರಿ' : ಸಿದ್ದರಾಮಯ್ಯ

ಸುಸ್ಥಿರ ಅಭಿವೃದ್ಧಿ ಮತ್ತು ಆರೋಗ್ಯ

ಸುಸ್ಥಿರ ಅಭಿವೃದ್ಧಿ ಮತ್ತು ಆರೋಗ್ಯ

ಸುಮಾರು ಅರ್ಧದಷ್ಟು ಜನಸಂಖ್ಯೆಯು (7.3 ಬಿಲಿಯನ್)ಇನ್ನೂ ಎಲ್ಲಾ ಅಗತ್ಯ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿ ಹೊಂದಿರುವ ದೇಶಗಳು, ಸುಸ್ಥಿರ ಅಭಿವೃದ್ಧಿ ಗುರಿಯನ್ನು ತಲುಪಬೇಕಾದರೆ 2023ರ ವೇಳೆಗೆ ಒಂದು ಬಿಲಿಯನ್ ಜನರು ಸಾರ್ವತ್ರಿಕ ಆರೋಗ್ಯರಕ್ಷಣೆಯನ್ನು ಪಡೆಯಬೇಕಾಗುತ್ತದೆ. ಸುಮಾರು 100ದಶಲಕ್ಷ ಜನರು ತೀವ್ರ ಬಡತನದಲ್ಲಿದ್ದು, ದಿನಕ್ಕೆ 1.90 ಡಾಲರ್ ಅಥವಾ ಅದಕ್ಕಿಂತ ಕಡಿಮೆ ಹಣದಲ್ಲಿ ದಿನನಿತ್ಯದ ಬದುಕನ್ನು ದೂಡಬೇಕಾಗಿದೆ, ಇದಕ್ಕೆ ಕಾರಣವೆಂದರೆ ಅವರು ಆರೋಗ್ಯ ಸೇವೆಗಳಿಗೆ ತಮ್ಮ ಸ್ವಂತ ಪಾಕೆಟ್ ನಿಂದ ಪಾವತಿಸಬೇಕಾಗಿರುವುದು.

ದುರಂತ ವೆಚ್ಚವೆಂದರೆ...

ದುರಂತ ವೆಚ್ಚವೆಂದರೆ...

ಸುಮಾರು 800 ಮಿಲಿಯನ್ ಜನರು ತಮ್ಮ ಕುಟುಂಬದ ಆಯವ್ಯಯದಲ್ಲಿ ಕನಿಷ್ಠ ಶೇ. 10ರಷ್ಟನ್ನು ಕುಟುಂಬದವರ ಆರೋಗ್ಯದ ವೆಚ್ಚದ ಮೇಲೆ ಖರ್ಚುಮಾಡುತ್ತಾರೆ. ಸುಮಾರು 100 ಮೀಲಿಯನ್ ಜನರು ಆರೋಗ್ಯದ ಮೇಲೆ ಮಾಡುವ ಖರ್ಚಿನಿಂದ ತೀವ್ರ ಬಡತನಕ್ಕೆ ಒಳಗಾಗುತ್ತಿದ್ದು, ಆರೋಗ್ಯದ ಮೇಲೆ ಮಾಡುವ ಇಂತಹ ವೆಚ್ಚವನ್ನು 'ದುರಂತ ವೆಚ್ಚ' ಎಂದು ಕರೆಯುತ್ತಾರೆ. ಸಾರ್ವತ್ರಿಕ ಆರೋಗ್ಯ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸಲು ಯುನೈಟೆಡ್ ನೇಷನ್ ಎಲ್ಲಾ ಸದಸ್ಯ ದೇಶಗಳಿಗೆ ಆರೋಗ್ಯದ ವಿಷಯಗಳಿಗೆ ಸಂಬಂಧಿಸಿದಂತಹ ಗುರಿಗಳನ್ನು ನೀಡಿದೆ. ಅವುಗಳಲ್ಲಿ ತಾಯಿ ಮತ್ತು ಮಗುವಿಗೆ ಸಂಬಂಧಿಸಿದಂತೆ ಗುರಿಗಳೆಂದರೆ; 2030ರ ವೇಳೆಗೆ ಜಾಗತಿಕವಾಗಿ ತಾಯಂದಿರ ಮರಣದರವನ್ನು 70ಕ್ಕೆ, ನವಜಾತ ಶಿಶುವಿನ ಮರಣದರ ಮತ್ತು 5 ವರ್ಷ ಒಳಗಿನ ಮಕ್ಕಳ ಮರಣ ಪ್ರಮಾಣ ದರವನ್ನು (ಪ್ರತಿ ಸಾವಿರ ಜನನಕ್ಕೆ) ತಲಾ 12 ಮತ್ತು 25ಕ್ಕೆ ಇಳಿಸುವುದು.

ಆರೋಗ್ಯ ರಕ್ಷಣೆಯಲ್ಲಿ ಭಾರತದ ಗುರಿ

ಆರೋಗ್ಯ ರಕ್ಷಣೆಯಲ್ಲಿ ಭಾರತದ ಗುರಿ

ಯುನೈಟೆಡ್ ನೇಷನ್ ನ 2015 'ಸುಸ್ಥಿರ ಅಭಿವೃದ್ಧಿ ಗುರಿ'ಯನ್ನು ಅಳವಡಿಸಿಕೊಂಡಿರುವ ವಿಶ್ವದ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದ್ದು, ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದಿದೆ. ಸುಸ್ಥಿರ ಅಭಿವೃದ್ದಿ ಗುರಿಯ ಅನುಷ್ಠಾನ ಬಗ್ಗೆ ಯುನೈಟೆಡ್ ನೇಷನ್ ನ 'ಹೈ ಲೆವೆಲ್ ಪೊಲಿಟಿಕ್ ಫೋರಂನ 'ವಾಲೆಂಟರಿ ನ್ಯಾಷಿನಲ್ ರಿವ್ಯೂ' ನಲ್ಲಿ ಸ್ವಯಂ ಪ್ರೇರಿತ ಮೌಲ್ಯಮಾಪನಕ್ಕೆ ಒಳಗಾಗಿರುವ 40 ದೇಶಗಳಲ್ಲಿ ಭಾರತವು ಒಂದು. ಈ ವರದಿಯು ಸುಸ್ಥಿರ ಅಭಿವೃದ್ಧಿ ಗುರಿಯ ಅನುಷ್ಠಾನವನ್ನು ಒರೆಹಚ್ಚುವ ಪ್ರಯತ್ನ ಮಾಡಿದೆ. ಕೆಳಗಿನ ಅಂಶಗಳು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಪ್ರಗತಿಯನ್ನು ತೋರಿಸುತ್ತದೆ. ಆದರೆ ಈ ಪ್ರಗತಿಯು ಎಲ್ಲಾ ರಾಜ್ಯಗಳಲ್ಲಿ ಎಕರೂಪವಾಗಿಲ್ಲದೆ, ಪ್ರಾದೇಶಿಕ ಅಸಮಾನತೆ ಇರುವುದನ್ನು ಮರೆಯುವಂತಿಲ್ಲ. ಸಾರ್ವತ್ರಿಕ ಆರೋಗ್ಯವನ್ನು ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ಅದರತ್ತಾ ಕಾರ್ಯನಿರ್ವಹಿಸುತ್ತಿವೆ.

ಯಾರ್ಯಾರ ಪಾತ್ರ ಏನೇನು..?

ಯಾರ್ಯಾರ ಪಾತ್ರ ಏನೇನು..?

* ಪ್ರಾಥಮಿಕ ಆರೋಗ್ಯ ಸೇವೆಯನ್ನು ಬಲಪಡಿಸುವುದು, ಶುದ್ಧ ಕುಡಿಯುವ ನೀರು, ನೈರ್ಮಲ್ಯ ವ್ಯವಸ್ಥೆ, ಪೌಷ್ಠಿಕ ಆಹಾರ ಹಾಗೂ ಸಾಂಕ್ರಮಿಕ ರೋಗಗಳ ತಡೆಗಟ್ಟುವುದು ಮುಂತಾದವು ಸರ್ಕಾರದ ಕೆಲಸ.
* ಸರ್ಕಾರ ತೆಗೆದುಕೊಂಡ ಕಾರ್ಯಕ್ರಮಗಳು, ಯೋಜನೆಗಳು ಅಂತಿಮ ಬಳಕೆದಾರರಿಗೆ ತಲುಪುವಲ್ಲಿ ಇರುವ ಅಡೆತಡೆಗಳನ್ನು ಗುರುತಿಸುವುದು ಮುಂತಾದವು ನಾಗರಿಕ ಸೇವಾ ಸಂಸ್ಥೆಗಳು ಮತ್ತು ನಾಗರಿಕರ ಪಾತ್ರ.
* ಕಾರ್ಯನೀತಿ ರೂಪಕರು ಮತ್ತು ರಾಜಕಾರಣಿಗಳನ್ನು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಹೊಣೆಗಾರರನ್ನಾಗಿ ಮಾಡುವುದು. ಜನಸಾಮನ್ಯರಲ್ಲಿ ಸೇವೆಯನ್ನು ಒತ್ತಾಯಿಸುವ ಜವಾಬ್ದಾರಿಯನ್ನು ಮೂಡಿಸುವುದು ಸಹ ಅಗತ್ಯವಾಗಿ ಆಗಬೇಕಾದ ಕೆಲಸ.

English summary
The World Health Day is a global health awareness day celebrated every year on 7 April, under the sponsorship of the World Health Organization (WHO), as well as other related organisations. In 1948, the WHO held the First World Health Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X