ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಕಾರ್ಮಿಕ ನೀತಿ; 15 ನಿಮಿಷ ಹೆಚ್ಚು ಕೆಲಸ ಮಾಡಿದರೂ ಸಿಗುತ್ತಾ "ಒಟಿ"?

|
Google Oneindia Kannada News

ನವದೆಹಲಿ, ಫೆಬ್ರುವರಿ 15: ಹೊಸ ಕಾರ್ಮಿಕ ನೀತಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ತಯಾರಿ ನಡೆಸಿದ್ದು, ಕಾರ್ಮಿಕ ವಲಯದಲ್ಲಿ ಹಲವು ಬದಲಾವಣೆಗಳನ್ನು ತರುವ ಭರವಸೆ ನೀಡಿದೆ. ಪರಿಷ್ಕೃತ ನಿಯಮಗಳೊಂದಿಗೆ ರೂಪುಗೊಳ್ಳುತ್ತಿರುವ ಹೊಸ ನೀತಿಗಳು ಜಾರಿಯಾದರೆ, ಕಾರ್ಮಿಕರಿಗೆ ಹಲವು ಸೌಕರ್ಯಗಳು ದೊರೆಯಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದೀಗ ಹೊಸ ನೀತಿಯು ಕೆಲಸದ ಅಧಿಕಾವಧಿ ವೇತನವನ್ನೂ (OT) ಒಳಗೊಂಡಿದ್ದು, ಇದರಲ್ಲಿ ಕೆಲವು ಮಾರ್ಪಾಡಾಗುವುದಾಗಿ ತಿಳಿದುಬಂದಿದೆ. "ಹಿಂದೂಸ್ತಾನ್ ಟೈಮ್ಸ್‌" ಈ ಕುರಿತು ವರದಿ ಮಾಡಿದ್ದು, "ಹೊಸ ಕಾನೂನಿನಡಿಯಲ್ಲಿ ಸರ್ಕಾರವು ಅಸ್ತಿತ್ವದಲ್ಲಿರುವ ಕೆಲಸದ ಅಧಿಕಾವಧಿಯ ಮಿತಿಯನ್ನು ಬದಲಾಯಿಸಬಹುದು" ಎಂದು ತಿಳಿಸಿದೆ. ಮುಂದೆ ಓದಿ...

ಕಾರ್ಮಿಕ ನೀತಿ ಬದಲು, ಇನ್ಮುಂದೆ ವಾರಕ್ಕೆ 4 ದಿನ ಮಾತ್ರ ಕಚೇರಿ ಕೆಲಸ! ಕಾರ್ಮಿಕ ನೀತಿ ಬದಲು, ಇನ್ಮುಂದೆ ವಾರಕ್ಕೆ 4 ದಿನ ಮಾತ್ರ ಕಚೇರಿ ಕೆಲಸ!

 ನಿಗದಿತ ಸಮಯಕ್ಕಿಂತ 15 ನಿಮಿಷ ಹೆಚ್ಚು ಕೆಲಸ ಮಾಡಿದರೆ ಒಟಿ...

ನಿಗದಿತ ಸಮಯಕ್ಕಿಂತ 15 ನಿಮಿಷ ಹೆಚ್ಚು ಕೆಲಸ ಮಾಡಿದರೆ ಒಟಿ...

ಈ ಹೊಸ ನೀತಿಯಡಿಯಲ್ಲಿ, ನಿಗದಿತ ಸಮಯಕ್ಕಿಂತ 15 ನಿಮಿಷ ಹೆಚ್ಚಿಗೆ ಕೆಲಸ ಮಾಡಿದರೂ ಅದನ್ನು ಅಧಿಕಾವಧಿ ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿದುಬಂದಿದೆ. ಕೆಲಸದ ನಿಗದಿತ ಅವಧಿಗೆ ಮೀರಿ 15 ನಿಮಿಷ ಹೆಚ್ಚಿಗೆ ಕೆಲಸ ಮಾಡಿದರೆ ಆ ನೌಕರ ಅಧಿಕಾವಧಿ ವೇತನ ಪಡೆಯಲು ಅರ್ಹ ಎನ್ನಲಾಗಿದೆ.

"ಅಧಿಕಾವಧಿಗೆ ತಕ್ಕಂತೆ ಪಾವತಿ"

ನೌಕರರು ನಿಗದಿತ ಸಮಯಕ್ಕಿಂತ 15 ನಿಮಿಷ ಅಧಿಕವಾಗಿ ಕೆಲಸ ಮಾಡಿದರೆ, ಆ ಅವಧಿಗೆ ತಕ್ಕಂತೆ ಕಂಪನಿಗಳು ನೌಕರರಿಗೆ ವೇತನ ನೀಡಬೇಕಾಗುತ್ತದೆ ಎಂದು ಹೊಸ ನೀತಿಯಲ್ಲಿ ನಿಯಮ ರೂಪಿಸಿರುವುದಾಗಿ ತಿಳಿದುಬಂದಿದೆ. ಈ ಹೊಸ ನೀತಿಗಳ ಕುರಿತು ಹಲವು ತಜ್ಞರೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ಕಾರ್ಮಿಕ ಸಚಿವಾಲಯ ತಿಳಿಸಿದೆ.

 ಈ ಹಿಂದೆ ಅಧಿಕಾವಧಿ ಮಿತಿ ಎಷ್ಟಿತ್ತು?

ಈ ಹಿಂದೆ ಅಧಿಕಾವಧಿ ಮಿತಿ ಎಷ್ಟಿತ್ತು?

ಈ ಹಿಂದೆ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಅಥವಾ ಹೆಚ್ಚಿಗೆ ಕೆಲಸ ಮಾಡಿದರೆ ಅದನ್ನು ಅಧಿಕಾವಧಿ ಎಂದು ಪರಿಗಣಿಸಿ ಪಾವತಿ ಮಾಡುವ ನಿಯಮವಿತ್ತು. ಅರ್ಧ ಗಂಟೆ ಹೆಚ್ಚಿಗೆ ಕೆಲಸ ಮಾಡಿದರೆ ಅದನ್ನು ಅಧಿಕಾವಧಿ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಆ ಮಿತಿಯನ್ನು ಈಗ 15 ನಿಮಿಷಗಳಿಗೆ ಇಳಿಸಲಾಗಿದೆ. ಸದ್ಯಕ್ಕೆ ಕಾನೂನುಗಳ ತಿದ್ದುಪಡಿ ನಡೆಯುತ್ತಿದ್ದು, ಈ ತಿಂಗಳ ಕೊನೆಯಲ್ಲಿ ಹೊಸ ನೀತಿನಿಯಮಗಳ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾರ್ಮಿಕರ ಕೆಲಸದ ಅವಧಿ, ಸಂಬಳ, ಕಾರ್ಮಿಕರ ಸುರಕ್ಷತೆ, ಆರೋಗ್ಯ ಹಾಗೂ ಉದ್ಯೋಗ ಸ್ಥಳದ ವಾತಾವರಣ, ಸಾಮಾಜಿಕ ಸುರಕ್ಷತೆ ನೀತಿ ನಿಬಂಧನೆಗಳನ್ನು ಅಂತಿಮಗೊಳಿಸುತ್ತಿರುವುದಾಗಿ ತಿಳಿದುಬಂದಿದೆ.

 ಪಿಎಫ್ ಹಾಗೂ ಇಎಸ್ ಐ ಸೌಲಭ್ಯ ನೀಡುವುದು ಕಡ್ಡಾಯ

ಪಿಎಫ್ ಹಾಗೂ ಇಎಸ್ ಐ ಸೌಲಭ್ಯ ನೀಡುವುದು ಕಡ್ಡಾಯ

ಈ ಹೊಸ ನೀತಿಯಡಿಯಲ್ಲಿ, ಕಂಪನಿಗಳು ತಮ್ಮ ನೌಕರರಿಗೆ ಪಿಎಫ್ ಹಾಗೂ ಇಎಸ್ ಐ ಸೌಲಭ್ಯ ಒದಗಿಸುವುದನ್ನು ಖಚಿತಪಡಿಸಬೇಕಾಗಿದೆ. ನೌಕರರು ಗುತ್ತಿಗೆ ಅಥವಾ ಮೂರನೇ ವ್ಯಕ್ತಿಗಳ ಮೂಲಕ ಕಂಪನಿಗೆ ಸೇರಿದ್ದಾರೆನ್ನುವ ನೆಪವೊಡ್ಡಿ ಈ ಸೌಲಭ್ಯಗಳಿಂದ ಅವರನ್ನು ವಂಚಿತರನ್ನಾಗಿ ಮಾಡುವಂತಿಲ್ಲ ಎಂಬ ನಿಯಮ ರೂಪಿತಗೊಳ್ಳುತ್ತಿದೆ.

 ಕೆಲಸದ ಅವಧಿ ಬದಲಾವಣೆ ಕುರಿತು ಕಾನೂನು

ಕೆಲಸದ ಅವಧಿ ಬದಲಾವಣೆ ಕುರಿತು ಕಾನೂನು

ಕಳೆದ ವಾರವಷ್ಟೇ, ನೌಕರರ ಕೆಲಸದ ಅವಧಿ ಕುರಿತು ಚರ್ಚೆಯಾಗಿತ್ತು. ವಾರಕ್ಕೆ 48 ಗಂಟೆಗಳ ಕೆಲಸ ಅಥವಾ ವಾರದಲ್ಲಿ 4 ದಿನಗಳ ಕೆಲಸ ವಿಧಿಸುವ ಹೊಸ ಕಾರ್ಮಿಕ ನೀತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಕಾರ್ಮಿಕ ಕಾರ್ಯದರ್ಶಿ ಅಪೂರ್ವ ಚಂದ್ರ ಹೇಳಿದ್ದರು. ದಿನಕ್ಕೆ 12 ಗಂಟೆ ಅವಧಿ ಕೆಲಸದಂತೆ ವಾರಕ್ಕೆ 4 ದಿನ, ದಿನಕ್ಕೆ 10 ಗಂಟೆ ಅವಧಿ ಕೆಲಸದಂತೆ ವಾರಕ್ಕೆ 5 ಈ ದಿನ ಅಥವಾ 8 ಗಂಟೆ ಪ್ರತಿದಿನದ ಕೆಲಸದಂತೆ ವಾರಕ್ಕೆ 6 ದಿನಗಳ ಕೆಲಸ ವಿಧಿಸಲು ಸಂಸ್ಥೆಗಳಿಗೆ ಅನುಮತಿ ಸಿಗಲಿದೆ. ಕಾರ್ಮಿಕ ನೀತಿಯಲ್ಲಿ ಹಲವು ಬದಲಾವಣೆಯನ್ನು ನಿರೀಕ್ಷಿಸಬಹುದು ಎನ್ನಲಾಗಿತ್ತು.

English summary
Government may change the existing time limit of overtime under the new law and working more than 15 minutes beyond the scheduled hours will be considered as overtime,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X