ಹಾರ್ಡಾಗಿ ಕೆಲಸ ಮಾಡುವುದಕ್ಕಿಂತ ಸ್ಮಾರ್ಟಾಗಿ ಕೆಲಸ ಮಾಡಿ: ಸಿಬಿಐ ನಿರ್ದೇಶಕ ಪ್ರವೀಣ್ ಸೂದ್
ನವದೆಹಲಿ, ಜೂನ್ 10: ಸಿಬಿಐ ಅಧಿಕಾರಿಗಳು ಕಷ್ಟಪಟ್ಟು ಕೆಲಸ ಮಾಡುವುದರ ಜೊತೆಗೆ ಸ್ಮಾರ್ಟಾಗಿ (ಚುರುಕಾಗಿ) ಕೆಲಸ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಂಸ್ಥೆ ನಿರ್ದೇಶಕ ಪ್ರವೀಣ್ ಸೂದ್ ಅವರು ಹೊಸ ಸಬ್ ಇನ್ಸ್‌ಪೆಕ್ಟರ್‌ಗಳಿಗೆ ಪಾಸಿಂಗ್-ಔಟ್ ಸಮಾರಂಭದಲ್ಲಿ ಹೇಳಿದರು.
ಶೇಕಡಾ 61ರಷ್ಟು ಇಂಜಿನಿಯರ್‌ಗಳು (22 ಬಿ.ಟೆಕ್ ಮತ್ತು ಎಂ.ಟೆಕ್) ಮತ್ತು ಉಳಿದ ಸ್ನಾತಕೋತ್ತರ ಪದವೀಧರರು ಮತ್ತು ವಿವಿಧ ವಿಭಾಗಗಳಲ್ಲಿ ಪದವೀಧರರನ್ನು ಒಳಗೊಂಡಿರುವ ಎರಡು ಹೊಸ ಬ್ಯಾಚ್ ಸಬ್ ಇನ್ಸ್‌ಪೆಕ್ಟರ್‌ಗಳು ಸೇವೆಗೆ ಸೇರಲು 73 ವಾರಗಳ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.

ಗಾಜಿಯಾಬಾದ್‌ನ ಸಿಬಿಐ ಅಕಾಡೆಮಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರವೀಣ್ ಸೂದ್, ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ನ್ಯಾಯಯುತವಾಗಿರಬೇಕು. ತಮ್ಮ ವೃತ್ತಿಯು ಕಠಿಣ ಪರಿಶ್ರಮವನ್ನು ಬಯಸುತ್ತದೆ. ಕಠಿಣ ಪರಿಶ್ರಮದ ಜೊತೆಗೆ ತಾವು ಚುರುಕಾಗಿ ಕೆಲಸ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಕೋರ್ಸ್ ಸಮಯದಲ್ಲಿ, ಮೂಲಭೂತ ಕೋರ್ಸ್‌ಗೆ ಒಳಪಡುವ ಹೊಸದಾಗಿ ಸೇರ್ಪಡೆಗೊಂಡ ಎಸ್‌ಐಗಳಿಗೆ ಮೊದಲ ಬಾರಿಗೆ ಸರ್ಟಿಫೈಡ್ ಫ್ರಾಡ್ ಎಕ್ಸಾಮಿನರ್ (ಸಿಎಫ್‌ಇ) ಕುರಿತು ತರಬೇತಿಯನ್ನು ಪ್ರಾರಂಭಿಸಲಾಯಿತು. ಸಿಎಫ್‌ಇ ಪ್ರಮಾಣೀಕರಣವನ್ನು ಅಸೋಸಿಯೇಷನ್ ಆಫ್ ಸರ್ಟಿಫೈಡ್ ಫ್ರಾಡ್ ಎಕ್ಸಾಮಿನರ್ಸ್ (ACFE), ಯುಎಸ್‌ನಿಂದ ನಡೆಸಲಾಗುತ್ತದೆ. ಎಸ್‌ಐ ಪ್ರಶಿಕ್ಷಣಾರ್ಥಿಗಳು ಹಣಕಾಸಿನ ವಹಿವಾಟುಗಳು ಮತ್ತು ವಂಚನೆ ಯೋಜನೆಗಳು, ಕಾನೂನು, ವಂಚನೆ ತಡೆಗಟ್ಟುವಿಕೆ ಮತ್ತು ತಡೆಗಟ್ಟುವಿಕೆ ಮತ್ತು ತನಿಖೆ ಸೇರಿದಂತೆ ಆರು ವಾರಗಳ ಕಠಿಣ ತರಬೇತಿಯನ್ನು ಪಡೆದಿದ್ದಾರೆ ಎಂದು ಸೂದ್ ಹೇಳಿದರು.
2020-21ರಲ್ಲಿ ತರಬೇತಿಯಲ್ಲಿ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕವನ್ನು ಪಡೆದಿದ್ದಕ್ಕಾಗಿ ಅವರು ಜೆಎಸ್ ಇಮ್ಯಾನುಯೆಲ್, ಎಸ್‌ಪಿ (ತರಬೇತಿ), ಮತ್ತು ಸಿಬಿಐ ಅಕಾಡೆಮಿಯ ಡೆಪ್ಯುಟಿ ಎಸ್‌ಪಿ ಆಕಾಂಕ್ಷಾ ಗುಪ್ತಾ ಅವರನ್ನು ಶ್ಲಾಘಿಸಿದರು. ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರು ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರಾಗಿ ಮೇ 28ರಂದು ಅಧಿಕಾರ ವಹಿಸಿಕೊಂಡಿದ್ದರು. ಸುಮಾರು 37 ವರ್ಷಗಳ ಸುದೀರ್ಘ ಅಧಿಕಾರಾವಧಿಯಲ್ಲಿ ವಿವಿಧ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.












Click it and Unblock the Notifications