ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಮನೆ ದಾರಿ ನಿಮಗೆ ಹೇಳುವ ಜಿಪಿಎಸ್‌ ಶೂ

|
Google Oneindia Kannada News

ನವದೆಹಲಿ, ಸೆ. 1 : ಕೇವಲ ಒಂದು ಬಟನ್‌ ಒತ್ತಿದರೆ ಸಾಕು ನಿಮ್ಮ ಮನೆಯ ದಾರಿಯನ್ನು ನಿಮ್ಮ ಕಾಲಿಗೆ ಹಾಕಿಕೊಂಡಿರುವ ಶೂ ಹೇಳುತ್ತದೆ.

ಅಲ್ಲದೇ ಎಷ್ಟು ದೂರ ನಡೆಯಬೇಕು, ಹೆಜ್ಜೆಗಳ ಲೆಕ್ಕ ಎಷ್ಟು? ಬರ್ನ್‌ ಆಗುವ ಕ್ಯಾಲೋರಿಗಳೇಷ್ಟು? ಸಾಗಬೇಕಾದ ದಾರಿಗಳ ದಿಕ್ಕು ಯಾವುದು? ಎಂಬೆಲ್ಲಾ ಮಾಹಿತಿಗಳನ್ನು ಈ ಮಾಯಾ ಪಾದಕವಚ ನೀಡುತ್ತದೆ.

ಹೌದು... ಇಂಥ ಜಿಪಿಎಸ್‌ ಆಧಾರಿತ ಶೂಗಳನ್ನು ನವದೆಹಲಿಯ ಇಂಜಿನಿಯರಿಂಗ್‌ ಪದವಿಧರರಾದ 30 ವರ್ಷದ ಕ್ರಿಸ್ಪನ್‌ ಲಾರೆನ್ಸ್‌ ಮತ್ತು 28 ವರ್ಷದ ಅನಿರುದ್ಧ ಶರ್ಮಾ ಜೊತೆಯಾಗಿ ಕಂಡುಹಿಡಿದಿದ್ದಾರೆ. 50 ಜನ ಕಾರ್ಮಿಕರ ಸಹಕಾರವನ್ನು ಪಡೆದುಕೊಂಡಿದ್ದಾರೆ.

shoe

'ಲೇ ಚಲ್‌' ಎಂದು ಹೆಸರಿಟ್ಟಿರುವ ಶೂ ಬ್ಲೂ ಟೂತ್‌ ತಂತ್ರಜ್ಞಾನದ ಅನ್ವಯ ಕೆಲಸ ಮಾಡುತ್ತದೆ. ಮೊಬೈಲ್‌ನಲ್ಲಿರುವ ಜಿಪಿಎಸ್‌ ಅನ್ನು ಬ್ಲೂ ಟೂತ್‌ ಮೂಲಕ ಶೂಗಳಿಗೆ ಸಂಪರ್ಕಿಸಲಾಗುವುದು. ಕಂಪಿಸುವ ಮೂಲಕ ಎಡ ಮತ್ತು ಬಲಕ್ಕೆ ತಿರುಗುವ ಸೂಚನೆಯನ್ನು ಶೂ ನೀಡುತ್ತಿರುತ್ತದೆ. ಇದು ಗೂಗಲ್‌ ಮ್ಯಾಪ್‌ ನೆರವಿನಲ್ಲಿ ಕೆಲಸ ಮಾಡುತ್ತದೆ.

ಇದು ಅಂಧರಿಗೆ ವರದಾನವಾಗಿದ್ದು ಅವರಿಗೆ ಮಾರ್ಗದರ್ಶನ ನೀಡಲು ಬೇರೆ ಯಾರ ಸಹಾಯ ಅಗತ್ಯವಿರಲ್ಲ. ಈ ಹಿನ್ನೆಲೆಯಲ್ಲೇ ಶೂ ತಯಾರು ಮಾಡಲಾಗಿದೆ ಎಂದು ಲಾರೆನ್ಸ್‌ ತಿಳಿಸಿದ್ದಾರೆ.

ಬದ್ಧಿಮಾಂದ್ಯ ರೋಗಿಗಳು, ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಇದೇ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು. ಜನರ ಕೈಗೆಟಕುವ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಚನೆಯಿದೆ ಎಂದು ಲಾರೆನ್ಸ್‌ ಹೇಳಿದ್ದಾರೆ.

English summary
Two engineering graduates invented a shoes which are working on the help of Bluetooth transceiver. Shoes giving direction to indicate a left or right turn.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X