ಹೆಣ್ಣುಮಕ್ಕಳ ಕಲಾವಂತಿಕೆಗೆ ಸಾಕ್ಷಿಯಾದ ಗಣರಾಜ್ಯೋತ್ಸವ

Posted By:
Subscribe to Oneindia Kannada

ನವದೆಹಲಿ, ಜನವರಿ, 27: ನಮ್ಮ ನಾಡಿನ ನೃತ್ಯ, ಸಂಗೀತ ಹೀಗೆ ನಾನಾ ಕಲಾ ಪರಂಪರೆ ಪೀಳಿಗೆಯಿಂದ ಪೀಳಿಗೆಗೆ ಹರಿದು ಬರುತ್ತಿರುವುದು ಮಹಿಳಾ ಮಣಿಗಳ ಮೂಲಕ. ಇದರಿಂದ ಮಹಿಳಾ ಪ್ರತಿಭೆ, ಕಲಾವಂತಿಕೆಗೆ ತನ್ನದೇ ಆದ ಇತಿಹಾಸ ಇದೆ ಎಂದು ನಿರ್ಭೀಡೆಯಿಂದ ಹೇಳಬಹುದು.

ಈ ಬಾರಿ ನವದೆಹಲಿಯ ರಾಜಪಥದಲ್ಲಿ ನಡೆದ 67ನೇ ಗಣರಾಜ್ಯೋತ್ಸವ ನಾನಾ ರಾಜ್ಯಗಳ ನೂರಾರು ಕಲಾಕಾರರ ಸಮಾಗಮ, ಸಾಂಪ್ರದಾಯಿಕ ನೃತ್ಯಗಳ ಪ್ರದರ್ಶನ, ಫ್ರಾನ್ಸ್ ಶಿಸ್ತು ಸಿಪಾಯಿಗಳ ಮೆರವಣಿಗೆ, ಶ್ವಾನ ದಳ ನಡೆ ಹೀಗೆ ಹಲವಾರು ವಿಶೇಷತೆಗಳಿಗೆ ವೇದಿಕೆಯಾಯಿತು. ಇವುಗಳ ಜೊತೆಗೆ ನಾಡಿನಾದ್ಯಂತ ಹಾಗೂ ನವದೆಹಲಿಯಲ್ಲಿ ಕಾಣಿಸಿಕೊಂಡ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟ ಹೆಣ್ಣುಮಕ್ಕಳ ನೃತ್ಯಗಳು.

ನವದೆಹಲಿ, ಡೆಹರಾಡೂನ್, ಗುವಾಹಟಿ, ಜಮ್ಮು ಕಾಶ್ಮೀರ, ಪಂಜಾಬ್, ಪಶ್ವಿಮ ಬಂಗಾಳ, ರಾಜಸ್ತಾನ ಹೀಗೆ ನಾನಾ ರಾಜ್ಯಗಳ ಹೆಣ್ಣು ಮಕ್ಕಳು ತಮ್ಮ ಸಾಂಪ್ರದಾಯಿಕ ವೇಷಭೂಷಣ, ನೃತ್ಯ, ಇನ್ನಿತರ ಕಲೆಗಳ ಮೂಲಕ ತಮ್ಮ ರಾಜ್ಯ, ಪ್ರದೇಶದ ಕಲಾವಂತಿಕೆ ಮೇಲೆ ನೂರಾರು ಮಂದಿ ದೃಷ್ಟಿ ನೆಡುವಂತೆ ಮಾಡಿದರು.[ಸೇನಾ ಶಕ್ತಿ ಅನಾವರಣ, ಕರ್ನಾಟಕದ ಕಾಫಿ ಕಂಪು]

ಈ ಅದ್ದೂರಿ ಗಣರಾಜ್ಯೋತ್ಸವದಲ್ಲಿ ನೆರೆದಿದ್ದ ನೂರಾರು ಮಂದಿಯ ಗಮನ ಸೆಳೆದ ಮಹಿಳಾ ಮಣಿಗಳ ನೃತ್ಯ ಭಂಗಿ, ಅವರ ವೇಷಭೂಷಣವನ್ನು ಪಿಟಿಐ ಚಿತ್ರಗಳ ಮೂಲಕ ಕಣ್ತುಂಬಿಕೊಳ್ಳೋಣ.

ನವದೆಹಲಿಯಲ್ಲಿ ಜಾನಪದ ಕಲಾವಿದರು

ನವದೆಹಲಿಯಲ್ಲಿ ಜಾನಪದ ಕಲಾವಿದರು

ನವದೆಹಲಿ ರಾಜಪಥದಲ್ಲಿ ಭಾಗವಹಿಸಿದ ಜಾನಪದ ಕಲಾವಿದರು ಅಸ್ಸಾಂ ಟ್ಯಾಬ್ಲೋದಲ್ಲಿ ಪಾಲ್ಗೊಂಡು ನೃತ್ಯ ಮಾಡುತ್ತಾ ನಗೆ ಮೊಗ ಬೀರಿದ್ದು ಹೀಗೆ.

ಪಶ್ವಿಮ ಬಂಗಾಳದ ಬುಡಕಟ್ಟು ನೃತ್ಯ

ಪಶ್ವಿಮ ಬಂಗಾಳದ ಬುಡಕಟ್ಟು ನೃತ್ಯ

ಪಶ್ವಿಮ ಬಂಗಾಳದ ಭೀರ್ ಭೂಮ್ ನಲ್ಲಿ ನಡೆದ 67ನೇ ಗಣರಾಜ್ಯೋತ್ಸವದಲ್ಲಿ ಮಹಿಳಾ ಮಣಿಗಳು ಮಾಡಿದ ಬುಡಕಟ್ಟು ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬುಡಕಟ್ಟು ಮಂದಿ ತಲೆ ಮೇಲೆ ಮೂರು ಬಿಂದಿಗೆ ಹೊತ್ತು, ಡೊಲಾಕ್ ಇನ್ನಿತರ ಸಂಗೀತವಾದನಗಳಿಗೆ ತಕ್ಕಂತೆ ಹೆಜ್ಜೆ ಹಾಕಿದ ಭಂಗಿ ಎಲ್ಲರ ಗಮನ ಸೆಳೆಯಿತು. 'ಯಪ್ಪಾ ಹೇಗೆ ಬ್ಯಾಲೆನ್ಸ್ ಮಾಡಿದ್ರು ನೋಡು. ಒಬ್ಬರ ಬಿಂದಿಗೆ ಕೂಡ ಬೀಳಲಿಲ್ಲ ಎನ್ನುತ್ತಾ ನೋಡುಗರೆಲ್ಲಾ ಅವರ ನೃತ್ಯಕ್ಕೆ ಸೈ' ಎಂದರು.

ಕಾಶ್ಮೀರದ ಸಾಂಪ್ರದಾಯಿಕ ನೃತ್ಯ ರೂಫ್

ಕಾಶ್ಮೀರದ ಸಾಂಪ್ರದಾಯಿಕ ನೃತ್ಯ ರೂಫ್

ಕಾಶ್ಮೀರದ ಸಾಂಪ್ರದಾಯಿಕ ನೃತ್ಯವಾದ ರೂಫ್ ನೃತ್ಯ ಮಾಡಿದ ಶಾಲಾ ಮಕ್ಕಳು 67ನೇ ವರ್ಷದ ಗಣರಾಜ್ಯೋತ್ಸವದ ಕೇಂದ್ರ ಬಿಂದುವಾದರು. ಇದನ್ನು ಹೆಚ್ಚಾಗಿ ಈದ್ ಮತ್ತು ರಂಜಾನ್ ಹಬ್ಬಗಳಲ್ಲಿ ಎಲ್ಲಾ ಮಹಿಳೆಯರು ಸೇರಿ ಮಾಡುತ್ತಾರೆ.

ಗುವಾಹಟಿಯಲ್ಲಿ ಗಣರಾಜ್ಯೋತ್ಸವ

ಗುವಾಹಟಿಯಲ್ಲಿ ಗಣರಾಜ್ಯೋತ್ಸವ

ಅಸ್ಸಾಮ್ ನ ದೊಡ್ಡ ನಗರವಾದ ಗುವಾಹಟಿಯಲ್ಲಿ ತಮ್ಮ ಸಾಂಪ್ರದಾಯಿಕ ನೃತ್ಯದಲ್ಲಿ ಕೆಂಪು, ಕ್ರೀಮ್ ಬಣ್ಣದ ವಿಶೇಷ ಧರಿಸಿ ಸಂಗೀತಕ್ಕೆ ಹೆಜ್ಜೆ ಹಾಕಿದರು.

ಡೆಹ್ರಾಡೂನ್ ಸಾಂಪ್ರದಾಯಿಕ ವಸ್ತ್ರ

ಡೆಹ್ರಾಡೂನ್ ಸಾಂಪ್ರದಾಯಿಕ ವಸ್ತ್ರ

ದೊಡ್ಡದಾದ ಕೊರಳ ಹಾರ, ಬಳೆ ಆಕಾರದ ಮೂಗುತಿ, ಜುಮುಕಿ ರೂಪದ ದೊಡ್ಡ ಓಲೆಗಳು, ಉದ್ದ ಜಡೆ ಇವು ಉತ್ತರಖಂಡದ ಡೆಹ್ರಾಡೂನ್ ನ ಸಾಂಪ್ರದಾಯಿಕ ಉಡುಪು. 67ನೇ ಗಣರಾಜ್ಯೋತ್ಸವದಲ್ಲಿ ಈ ಧಿರಿಸು ತೊಟ್ಟ ಶಾಂತ ಮೊಗದ ಶಾಲಾ ಹುಡುಗಿಯರು ಕ್ಯಾಮರ ಕಣ್ಣಿನಲ್ಲಿ ಕಂಡದ್ದು ಹೀಗೆ.

ಮೊಣಕಾಲುದ್ದ ಸೀರೆ, ಶಾಂಭವಿ ಜುಟ್ಟು

ಮೊಣಕಾಲುದ್ದ ಸೀರೆ, ಶಾಂಭವಿ ಜುಟ್ಟು

ಪಶ್ವಿಮ ಬಂಗಾಳದ ಬಲೂರ್ ಘಾಟ್ ನಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಶಾಲಾ ಮಕ್ಕಳು ಮೊಣಕಾಲುದ್ದ ಸೀರೆ ತೊಟ್ಟು, ಶಾಂಭವಿ ಜುಟ್ಟು ಹಾಕಿ ಸಂತೋಷದಿಂದ ಕುಣಿದು ಬಹಳ ಸಂತಸಗೊಂಡರು

ಬುರುಕಾದಲ್ಲಿ ನೃತ್ಯ

ಬುರುಕಾದಲ್ಲಿ ನೃತ್ಯ

ಜೋಧ್ ಪುರದ ಮೌಲಾನಾ ಅಬ್ದುಲ್ ಕಲಾಂ ಶಾಲಾ ಮಕ್ಕಳು ತೊಟ್ಟ ಬುರುಕದಲ್ಲಿ ನೃತ್ಯದ ಭಂಗಿಯಲ್ಲಿ ಕಾಣಿಸಿಕೊಂಡದ್ದು ಹೀಗೆ.

ಅಮೃತಸರದ ಶಾಲಾ ಮಕ್ಕಳ ಜೋಲಿ ನೃತ್ಯ

ಅಮೃತಸರದ ಶಾಲಾ ಮಕ್ಕಳ ಜೋಲಿ ನೃತ್ಯ

ಪ್ರಾಪಂಚಿಕ ಖ್ಯಾತಿ ಪಡೆದ ಸುವರ್ಣ ದೇವಾಲಯ ಇರುವ ಪಂಜಾಬಿನ ಅಮೃತಸರದ ಶಾಲಾ ಮಕ್ಕಳು ೬೭ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದು, ಬಹಳ ಸಂಭ್ರಮದಿಂದ ನೃತ್ಯ ಮಾಡಿದ್ದು ಹೀಗೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Students performing during the 67th Republic Day parade in Amritsar, Panjab, School girls presenting folk dance "Rouf" during the 67th Republic Day celebrations at Bakshi Stadium in Srinagar,Folk artists perform on Assam tableau during the during the 67th Republic Day parade at Rajpath in New Delhi on Tuesday.
Please Wait while comments are loading...