ಎಸ್ಪಿ ಶಾಸಕನ ಮೇಲೆ ಅತ್ಯಾಚಾರ ಆರೋಪ ಮಾಡಿದ್ದ ಮಹಿಳೆ ಶವ ಪತ್ತೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಲಖನೌ, ಫೆಬ್ರವರಿ 13: ಸಮಾಜವಾದಿ ಪಕ್ಷದ ಶಾಸಕ ಅರುಣ್ ವರ್ಮಾ 2013ರಲ್ಲಿ ಕೆಲವು ಯುವಕರ ಜೊತೆಗೆ ಸೇರಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದ 22 ವರ್ಷದ ಮಹಿಳೆಯ ಶವ ಉತ್ತರಪ್ರದೇಶದ ಸುಲ್ತಾನ್ ಪುರ್ ನ ಆಕೆಯ ಮನೆ ಹತ್ತಿರ ಪತ್ತೆಯಾಗಿದೆ ಎಂದು ಸೋಮವಾರ ಪತ್ತೆಯಾಗಿದೆ.

ಶನಿವಾರದಿಂದ ಆಕೆ ನಾಪತ್ತೆಯಾಗಿದ್ದರು.ಜೈಸಿಂಗ್ ಪುರ್ ನ ಪ್ರಾಥಮಿಕ ಶಾಲೆಯೊಂದರ ಬಳಿ ಶವ ಪತ್ತೆಯಾಗಿದೆ. ಈ ಬಗ್ಗೆ ಎಫ್ ಐಆರ್ ದಾಖಲಾಗಿದೆ. ಆಕೆ ಕತ್ತಿನ ಬಳಿ ಗಾಯದ ಗುರುತುಗಳಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮೃತ ಮಹಿಳೆಯು ಸ್ಥಳೀಯ ಶಾಸಕ ಹಾಗೂ ಈ ಬಾರಿ ಸುಲ್ತಾನ್ ಪುರ್ ನ ಎಸ್ ಪಿ ಅಭ್ಯರ್ಥಿ ಮತ್ತು ಇತರರ ವಿರುದ್ಧ 2013ರಲ್ಲಿ ಸಾಮೂಹಿಕ ಅತ್ಯಾಚಾರದ ಆರೋಪ ಮಾಡಿದ್ದರು.[ಪತ್ರಕರ್ತರಿಗೆ ಬೆಂಕಿ ಹಚ್ಚುತ್ತೇನೆ ಎಂದು ಧಮ್ಕಿ ಹಾಕಿದ ಸಚಿವ]

Woman who accused SP MLA of rape found dead

ಉತ್ತರ ಪ್ರದೇಶದಲ್ಲಿ ನಡೆಯುವ ಎರಡನೇ ಹಂತದ ವಿಧಾನಸಭೆ ಚುನಾವಣೆಯಲ್ಲಿ ಅರುಣ್ ವರ್ಮಾ ಸ್ಪರ್ಧಿಸುತ್ತಿದ್ದಾರೆ. ಅಂದಹಾಗೆ, ಒಂದು ಹಂತದಲ್ಲಿ ಆ ಮಹಿಳೆಯು ತನ್ನ ಆರೋಪವನ್ನು ಹಿಂಪಡೆದಿದ್ದರು. ಆದರೆ ಕೆಲವು ಯುವಕರ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಆ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 22-year-old woman, who had accused Samajwadi Party MLA Arun Verma of raping her along with some other youth in 2013, was found murdered near her house in Sultanpur, police said on Monday.
Please Wait while comments are loading...