• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

"ಕಂಗನಾ ರಣಾವತ್ ಅವರ ಪದ್ಮ ಪ್ರಶಸ್ತಿ ಹಿಂಪಡೆಯಿರಿ": ಕಾಂಗ್ರೆಸ್

|
Google Oneindia Kannada News

ನವದೆಹಲಿ ನವೆಂಬರ್ 12: "1947 ರಂದು ಅಲ್ಲ, 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು" ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಹೀಗಾಗಿ ನಟಿ ಕಂಗನಾ ರಣಾವತ್ ಅವರಿಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ತಕ್ಷಣ ಹಿಂಪಡೆಯಬೇಕು ಎಂದು ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ.

" ರಣಾವತ್ ಅವರಿಗೆ ನೀಡಲಾದ ಪದ್ಮ ಪ್ರಶಸ್ತಿಯನ್ನು ತಕ್ಷಣವೇ ಹಿಂಪಡೆಯಬೇಕು. ಅಂತಹ ಪ್ರಶಸ್ತಿಗಳನ್ನು ನೀಡುವ ಮೊದಲು ಮಾನಸಿಕ ಮೌಲ್ಯಮಾಪನವನ್ನು ಮಾಡಬೇಕು. ಪದ್ಮ ಪ್ರಶಸ್ತಿ ಪಡೆದವರು ಎಂದಿಗೂ ರಾಷ್ಟ್ರದ ಮಹಾನ್ ವ್ಯಕ್ತಿಗಳನ್ನು ಮತ್ತು ವೀರರನ್ನು ಅಗೌರವಗೊಳಿಸುವುದಿಲ್ಲ" ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಈ ಪೋಸ್ಟ್‌ನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಕಂಗನಾ ರಣಾವತ್ ಅವರ ಹೇಳಿಕೆಯನ್ನು ನಾಚಿಕೆಗೇಡಿನ ಮತ್ತು ಆಘಾತಕಾರಿ ಎಂದು ಕರೆದಿರುವ ಶರ್ಮಾ ಅವರು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಕಡಿಮೆ ಮಾಡಿದ್ದಾರೆ ಎಂದು ದೂರಿದ್ದಾರೆ. ಕಾಂಗ್ರೆಸ್ ಕಂಗನಾ ಅವರ ಹೇಳಿಕೆಯನ್ನು "ದೇಶದ್ರೋಹ" ಎಂದು ಕರೆದಿದೆ. ಪಕ್ಷದ ನಾಯಕರು ರಾಷ್ಟ್ರದ ಕ್ಷಮೆಯಾಚಿಸಬೇಕು ಮತ್ತು ರಾಷ್ಟ್ರದ ಮಹಾನ್ ವೀರರನ್ನು ಅಗೌರವಿಸುವವರನ್ನು ಪಕ್ಷದಿಂದ ತೆಗೆದುಹಾಕಬೇಕು ಎಂದು ಹೇಳಿದ್ದಾರೆ.

ಭಾರತಕ್ಕೆ 2014ರಲ್ಲಿ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯ ಎಂದ ಕಂಗನಾ ವಿರುದ್ಧ ದೂರುಭಾರತಕ್ಕೆ 2014ರಲ್ಲಿ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯ ಎಂದ ಕಂಗನಾ ವಿರುದ್ಧ ದೂರು

ಸುದ್ದಿ ವಾಹಿನಿ ಟೈಮ್ಸ್ ನೌ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಕಂಗನಾ ರಣಾವತ್ ಹೇಳಿಕೆಯನ್ನು ಹಲವು ಪಕ್ಷಗಳು ಕಟುವಾಗಿ ಟೀಕಿಸಿವೆ. " 1947 ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ನಿಜವಾದ ಸ್ವಾತಂತ್ರ್ಯ 2014 ರಲ್ಲಿ ಬಂದಿತು" ಎನ್ನುವ ಕಂಗನಾ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಈ ವಾರದ ಆರಂಭದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಮತ್ತು ಈ ಹಿಂದೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ 34 ವರ್ಷದ ನಟಿ ಕಂಗನಾ ಆಡಳಿತಾರೂಢ ಬಿಜೆಪಿಗೆ ತನ್ನ ಬೆಂಬಲದ ಬಗ್ಗೆ ಯಾವಾಗಲೂ ಧ್ವನಿ ಎತ್ತುತ್ತಲೇ ಇರುತ್ತಾರೆ. ನಿನ್ನೆಯ ಬಿಜೆಪಿಯನ್ನು ಹೊಗಳುತ್ತಾ " 1947 ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ನಿಜವಾದ ಸ್ವಾತಂತ್ರ್ಯ 2014 ರಲ್ಲಿ ಮೋದಿ ಸರ್ಕಾರ ಬಂದ ಬಳಿಕ ಬಂದಿತು" ಎಂದು ಹೇಳಿರುವುದು ಸಾಕಷ್ಟು ವಿವಾದವನ್ನು ಸೃಷ್ಟಿಸಿದೆ. ನಿನ್ನೆ ಆಕೆಯ ಕಾಮೆಂಟ್‌ಗಳನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ ಖಂಡಿಸಿದ್ದಾರೆ.

"ಮಹಾತ್ಮ ಗಾಂಧಿಯವರ ತ್ಯಾಗವನ್ನು ಕೆಲವೊಮ್ಮೆ ಅವಮಾನಿಸುವುದು, ಕೆಲವೊಮ್ಮೆ ಅವರ ಹಂತಕನನ್ನು (ನಾಥೂರಾಂ ಗೋಡ್ಸೆ) ಹೊಗಳುವುದು, ಮತ್ತು ಈಗ ಮಂಗಲ್ ಪಾಂಡೆ, ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬಗ್ಗೆ ತಿರಸ್ಕಾರ. ಇದನ್ನು ಹುಚ್ಚುತನ ಅಥವಾ ದೇಶದ್ರೋಹ ಎಂದು ಕರೆಯುತ್ತೀರಾ?" - ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ನಟಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಂಬೈ ಪೊಲೀಸರನ್ನು ಕೇಳಿದೆ. ಎಎಪಿ ನಾಯಕಿ ಪ್ರೀತಿ ಶರ್ಮಾ ಮೆನನ್ ಅವರು ಕಂಗನಾ ಹೇಳಿದ್ದು "ದೇಶದ್ರೋಹಿ ಮತ್ತು ಪ್ರಚೋದಕ" ಎಂದು ಹೇಳಿದ್ದಾರೆ. ಶಿವಸೇನೆಯ ನಾಯಕ ನೀಲಂ ಗೋರ್ಹೆ ಕೂಡ ನಟಿ ದೇಶದ್ರೋಹದ ಪ್ರಕರಣವನ್ನು ಎದುರಿಸಬೇಕು ಎಂದು ಹೇಳುತ್ತಾರೆ.

ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಕೂಡ ಈ ಗೀತೆಗೆ ಧ್ವನಿಗೂಡಿಸಿದರು. "ನಟಿ ಕಂಗನಾ ರಣಾವತ್ ಅವರ ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ. ಕೇಂದ್ರವು ಕಂಗನಾ ರನೌತ್ ಅವರಿಂದ ಪದ್ಮಶ್ರೀಯನ್ನು ಹಿಂಪಡೆಯಬೇಕು ಮತ್ತು ಅವರನ್ನು ಬಂಧಿಸಬೇಕು" ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಹೇಳಿದ್ದಾರೆ.

English summary
Actor Kangana Ranaut's Padma Shri should be "withdrawn immediately", former Union Minister Anand Sharma has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X