ಪಾಂಡಿತ್ಯ ವಂಶಪಾರಂಪರ್ಯವಾಗಿ ಬರುವುದಲ್ಲ: ರಾಹುಲ್ ಗೆ ಜೇಟ್ಲಿ ಟಾಂಗ್!
Recommended Video

ನವದೆಹಲಿ, ಜೂನ್ 14: "ಪಾಂಡಿತ್ಯ ಎಂಬುದು ವಂಶಪಾರಂಪರ್ಯವಾಗಿ ಬರುವಂಥದ್ದಲ್ಲ. ಅದನ್ನು ನಾವೇ ಕಲಿತು, ಬೆಳೆಸಿಕೊಳ್ಳಬೇಕು" ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಟಾಂಗ್ ನೀಡಿದ್ದಾರೆ!
"ಕೋಕಾಕೋಲಾ ಕಂಡುಹಿಡಿದವನು ಮೊದಲು ನಿಂಬೆಹಣ್ಣಿನ ಪಾನಕ ಮಾರುತ್ತಿದ್ದ" ಎಂಬ ಹೇಳಿಕೆ ನೀಡುವ ಮೂಲಕ ನಗೆಪಾಟಲಿಗೆ ಗುರಿಯಾಗಿದ್ದ ರಾಹುಲ್ ಗಾಂಧಿಯವರನ್ನು ಅರುಣ್ ಜೇಟ್ಲಿ ಅಣುಕಿಸಿದರು.
Is Congress Becoming Ideologyless? Is Anti-Modism its only ideology? https://t.co/YRHKRy0Uyt
— Arun Jaitley (@arunjaitley) June 13, 2018
ದಿ ಡಿಸ್ಕವರಿ ಆಫ್ ಇಂಡಿಯಾ ಎಂಬ ಮಹಾನ್ ಕೃತಿಯನ್ನು ನೀಡಿದವರ ಮರಿಮೊಮ್ಮಗ ಮುಂದೊಂದು ದಿನ 'ದಿ ರೀಡಿಸ್ಕವರಿ ಆಫ್ ಕೋಕಾ ಕೋಲಾ' ಎಂಬ ಕೃತಿಯನ್ನು ನೀಡುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ" ಎಂದು ಸಹ ಅವರು ಛೇಡಿಸಿದ್ದಾರೆ.

ಕಾಂಗ್ರೆಸ್ ಮೋದಿಯವರನ್ನು ವಿರೋಧಿಸುವುದನ್ನೇ ತನ್ನ ಸಿದ್ಧಾಂತವನ್ನಾಗಿಸಿಕೊಂಡಿದ್ದನ್ನೂ ಅವರು ಟ್ವಿಟ್ಟರ್ ನಲ್ಲಿ ಅಣುಕಿಸಿದರು. 'ಕಾಂಗ್ರೆಸ್ ಸಿದ್ಧಾಂತರಹಿತವಾಗುತ್ತಿದೆಯಾ? ಅಥವಾ ಮೋದಿಯವರನ್ನು ವಿರೋಧಿಸುವುದೇ ಅದರ ಸಿದ್ಧಾಂತವಾ?' ಎಂದು ಅವರು ಪ್ರಶ್ನಿಸಿದ್ದಾರೆ.












Click it and Unblock the Notifications