ಡಿಸೆಂಬರ್ ನಲ್ಲಿ ಚಳಿಗಾಲದ ಸಂಸತ್ ಅಧಿವೇಶನ: ಅನಂತಕುಮಾರ್

Posted By:
Subscribe to Oneindia Kannada

ನವದೆಹಲಿ, ನವೆಂಬರ್ 21: ಸಂಸತ್ ನ ಚಳಿಗಾಲದ ಅಧಿವೇಶನವನ್ನು ಡಿಸೆಂಬರ್ ನಲ್ಲಿ ಕರೆಯಲಾಗುತ್ತದೆ. ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಮಂಗಳವಾರ ಹೇಳಿದರು.

ವೈಶಾಲಿಯಲ್ಲಿ 2ನೇ ಪ್ರಾಕೃತ ವಿವಿ ಸ್ಥಾಪನೆಗೆ ಪ್ರಯತ್ನ : ಅನಂತ್ ಕುಮಾರ್

ಚಳಿಗಾಲದ ಅಧಿವೇಶನ ಕರೆಯಲು ತಡ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮಾಡಿದ ಆರೋಪವನ್ನು ನಿರಾಕರಿಸಿದ ಅವರು, ವಿರೋಧ ಪಕ್ಷಗಳು ಕೆಲವು ವಿಚಾರಗಳು ಮಾತ್ರ ಮರೆಯುವಂಥ ರೋಗದಿಂದ ಬಳಲುತ್ತಿವೆ. 2008ರಿಂದ 2013ರ ಮಧ್ಯೆ ಚಳಿಗಾಲದ ಅಧಿವೇಶನವನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಡಿಸೆಂಬರ್ ನಲ್ಲೇ ಕರೆದಿದೆ.

Winter session in December, UPA too did it: Ananthkumar

ಸಾಮಾನ್ಯವಾಗಿ ಸಂಸತ್ ಅಧಿವೇಶನ ಹಾಗೂ ವಿಧಾನಸಭೆ ಚುನಾವಣೆ ಒಂದಕ್ಕೊಂದು ಎದುರು ಬದುರಾಗದಂತೆ ನೋಡಿಕೊಳ್ಳಲಾಗುತ್ತದೆ. ಈ ಹಿಂದೆ ಕೂಡ ಹಾಗೇ ಮಾಡಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ಅನಂತಕುಮಾರ್ ತಿಳಿಸಿದ್ದಾರೆ.

ಸಂಸತ್ ನ ಚಳಿಗಾಲದ ಅಧಿವೇಶನವನ್ನು ಕೇಂದ್ರ ಸರಕಾರ ಮುಂದೂಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ಆರೋಪ ಮಾಡಿದ್ದರು.

ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎದುರಿಸುತ್ತಿರುವ ಹತಾಶೆ ಮನೋಭಾವದ ಪರಿಣಾಮ ಇದು ಎಂದು ಅನಂತಕುಮಾರ್ ಹೇಳಿದ್ದಾರೆ.

ಅನಂತ್ ಕುಮಾರ್ ಭೇಟಿ, ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟನೆ

ಸಾಮಾನ್ಯವಾಗಿ ನವೆಂಬರ್ ತಿಂಗಳ ಮೂರನೇ ವಾರದಿಂದ ಡಿಸೆಂಬರ್ ತಿಂಗಳ ಮೂರನೇ ವಾರದವರೆಗೆ ಚಳಿಗಾಲದ ಅಧಿವೇಶನ ನಡೆಯುತ್ತದೆ.

"ಇದು ಗೋಡೆ ಮೇಲಿನ ಬರಹದಂತೆ ಸ್ಪಷ್ಟ ಮತ್ತು ಜೋರಾಗಿ ಕೇಳಿಬರುತ್ತಿದೆ. ಗುಜರಾತ್ ಹಾಗೂ ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿನ ಹತಾಶ ಮನೋಭಾವದ ಕಾರಣಕ್ಕೆ ಕಾಂಗ್ರೆಸ್ ಇಂಥ ಆರೋಪ ಮಾಡುತ್ತಿದೆ" ಎಂದು ಅನಂತಕುಮಾರ್ ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರಕಾರ ಸಂಸದೀಯ ಪ್ರಜಾಪ್ರಭುತ್ವಕ್ಕೆ ಬದ್ಧವಾಗಿದೆ. ಡಿಸೆಂಬರ್ ನಲ್ಲಿ ಚಳಿಗಾಲದ ಅಧಿವೇಶನ ಕರೆಯಲಾಗುವುದು ಹಾಗೂ ಸದ್ಯದಲ್ಲೇ ದಿನಾಂಕ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The government will call the winter session of Parliament in December and its dates will be announced soon, Parliamentary Affairs Minister Ananth Kumar said today while citing precedents during the UPA rule to reject the Congress' allegations of "delay".

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ