ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೆ ಸಂಕಷ್ಟ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಏಪ್ರಿಲ್ 09: ಕಣ್ಮಿಟುಕಿನಿಂದ ದೇಶದೆಲ್ಲೆಡೆ ಸಂಚಲನ ಮೂಡಿಸಿದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಿಯಾ ವಿರುದ್ಧ ಮತ್ತೆ ಸುಪ್ರೀಂಕೋರ್ಟಿನಲ್ಲಿ ದೂರು ದಾಖಲಾಗಿದೆ.

ಇಸ್ಲಾಂ ಧರ್ಮದಲ್ಲಿ ಕಣ್ಣು ಹೊಡೆಯುವುದು ಹಾಗೂ ಹುಬ್ಬು ಹಾರಿಸುವುದು ನಿಷಿದ್ಧ, ಪ್ರಿಯಾ ಕಣ್ಸನ್ನೆ ಹಾಡಿನಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ. ಹಾಡಿನ ಸಾಹಿತ್ಯ ಹಾಗೂ ಚಿತ್ರದ ದೃಶ್ಯಗಳು ಆಕ್ಷೇಪಾರ್ಹವಾಗಿವೆ ಎಂದು ದೂರಲ್ಲಿ ಹೇಳಲಾಗಿದೆ.

ಯಾರೀಕೆ ಪ್ರಿಯಾ ಪ್ರಕಾಶ್ ವಾರಿಯರ್? ಏನು ಇವಳ ದಾಖಲೆ?

'ಒರು ಅಡಾರ್ ಲವ್' ಚಿತ್ರ, ಪ್ರಿಯಾ ಪ್ರಕಾಶ್ ವಿರುದ್ಧ ಬರುತ್ತಿರುವ ದೂರುಗಳ ಬಗ್ಗೆ ಚಿತ್ರದ ನಿರ್ದೇಶಕ ಓಮರ್ ಲುಲು ಆಕ್ಷೇಪಿಸಿದ್ದಾರೆ.

Wink forbidden in Islam, says plea in SC against Priya Varrier song

ಉತ್ತರ ಕೇರಳದ ಮಲಬಾರ್ ನಲ್ಲಿ ಪ್ರತಿ ಮದುವೆ ಸಮಾರಂಭದ ವೇಳೆ ಈ ಸಾಂಪ್ರದಾಯಿಕ ಹಾಡನ್ನು ಹಾಡಲಾಗುತ್ತದೆ. ಮಲಬಾರ್ ನ ಮುಸ್ಲಿಮರು 1978ರಿಂದಲೇ ಈ ಹಾಡನ್ನು ಹಾಡುತ್ತಿದ್ದಾರೆ. ಈವರೆಗೆ ಈ ಹಾಡು ಆಕ್ಷೇಪಾರ್ಹವಾಗಿರಲಿಲ್ಲ. ಸಿನಿಮಾದಲ್ಲಿ ಮಾತ್ರ ಏಕೆ ಆಕ್ಷೇಪಾರ್ಹ ಎಂದು ಪ್ರಶ್ನಿಸಿದ್ದಾರೆ.

ಪ್ರಿಯಾ ವಾರಿಯರ್ ವಿರುದ್ಧದ ತನಿಖೆಗೆ ತಡೆ ನೀಡಿದ ಸುಪ್ರೀಂಕೋರ್ಟ್

ಪ್ರಿಯಾ ಪ್ರಕಾಶ್ ಅವರ ವಿರುದ್ಧ ಮಾತ್ರ ದೂರು ನೀಡಿಲ್ಲ. ಈ ಚಿತ್ರದಲ್ಲಿ ಆ ಹಾಡಿನಲ್ಲಿ ಯಾರೇ ಅಭಿನಯಿಸಿದ್ದರೂ ನಮ್ಮ ಆಕ್ಷೇಪ ಇರುತ್ತಿತ್ತು. 'ಮಾಣಿಕ್ಯ ಮಲಯಾಯ ಪೂವಿ..' ಹಾಡಿನ ಸಾಹಿತ್ಯಕ್ಕೂ ಪ್ರವಾದಿ ಮೊಹಮ್ಮದರ ಜೀವನಕ್ಕೂ ಸಾಮ್ಯತೆ ಇದೆ, ಜತೆಗೆ ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಶಬ್ದಗಳಿವೆ ದೂರಿನಲ್ಲಿ ಹೇಳಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

'ಒರು ಅಡಾರ್ ಲವ್' ಚಿತ್ರದಿಂದ ಮಾಣಿಕ್ಯ ಮಲರಾಯ ಪೂವಿ ಹಾಡನ್ನು ತೆಗೆದು ಹಾಕುವಂತೆ ಈ ಹಿಂದೆ ಕೂಡಾ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಪ್ರಿಯಾ ವಿರುದ್ಧ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An application has been filed in the Supreme Court objecting to the wink scene in a song from the upcoming Malayalam movie Oru Adaar Love. The application states that the act of winking is anti-Islam and is forbidden.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ