ಹುತಾತ್ಮಯೋಧರಿಗೆ ನಮನ ಸಲ್ಲಿಸಲು ಮರೆಯದಿರಿ
ಜಮ್ಮು ಕಾಶ್ಮೀರ, ಜುಲೈ, 25 : ಓ ನನ್ನ ದೇಶ ಬಾಂಧವರೆ ಕಣ್ಣೀರ ಕಥೆಯಿದು ಕೇಳಿ ದೇಶಕ್ಕಾಗಿ ಮಡಿದ ವೀರ ಯೋಧರ ಕಥೆ ಕೇಳಿ. ದೇಶ ಆಚರಿಸಲು ದೀಪಾವಳಿ, ಗಡಿಯಲ್ಲಿ ರಕ್ತದ ಓಕುಳಿ...ಈ ಗೀತೆ ಒಮ್ಮೆ ಕೇಳಿದರೆ ಸಾಕು ಕಣ್ಣೀರ ಹನಿ ಕೆನ್ನೆ ಮೇಲೆ ಜಾರಿ ಭೂಮಿ ಮತ್ತು ಮನಸ್ಸು ಎರಡನ್ನು ಒದ್ದೆಮಾಡುತ್ತದೆ.
ಹೌದು...ಇದು ಕಾರ್ಗಿಲ್ ಯುದ್ದದ ಕುರಿತಾದ ಗೀತೆ...ಕಾರ್ಗಿಲ್ ನಲ್ಲಿ ತಮ್ಮ ಪ್ರಾಣತೆತ್ತ ಹುತಾತ್ಮರನ್ನು, ಹೆಮ್ಮೆಯ ಯೋಧರನ್ನು ನೆನೆಯುವ 16ನೇ ಕಾರ್ಗಿಲ್ ವಿಜಯ್ ದಿವಸ್ ಸಮಾರಂಭ ಶನಿವಾರ ಜಮ್ಮುಮತ್ತು ಕಾಶ್ಮೀರದ ದ್ರಾಸ್ ನಲ್ಲಿ ನಡೆಯಿತು. ಇದರಲ್ಲಿ ವೀರಯೋಧರ ತ್ಯಾಗ ಬಲಿದಾನ, ಸೇವಾಮನೋಭಾವ ಸ್ಮರಿಸುವ ವಿಶೇಷ ಕಾರ್ಯಕ್ರಮ ನಡೆಯಿತು.[ಕಾರ್ಗಿಲ್ ವಾರ್ ಬಳಿಕ ಭಾರತ ಶಕ್ತಿಶಾಲಿ ದೇಶವಾಗಿದೆ]

ಕಾರ್ಗಿಲ್ ಯುದ್ಧ ನಡೆದು ಈಗಾಗಲೇ 15 ವರ್ಷಗಳು ಸಂದಿವೆ. 16ನೇ ವರ್ಷದ ವೀರ ನಮನ ಕಾರ್ಯಕ್ರಮ ಭಾನುವಾರ ನಡೆಯಲಿದ್ದು, ವೀರರಿಗೆ ದೀಪ ಬೆಳಗಿಸುವುದರ ಮೂಲಕ ವಂದನೆ ಸಲ್ಲಿಸಲಾಗುತ್ತದೆ.
ಕಾರ್ಗಿಲ್ ಯುದ್ದ 1999ರಲ್ಲಿ ಪಾಕಿಸ್ತಾನ ಮತ್ತು ಭಾರತ ಸೇನೆ ನಡುವೆ ನಡೆದಿದ್ದು, ಭಾರತೀಯ ಸೇನೆಯಲ್ಲಿ ಸೈನಿಕರು, ಅಧಿಕಾರಿಗಳು ಸೇರಿದಂತೆ ಸುಮಾರು 490ಮಂದಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಮುಂದೆ ಭಾರತೀಯ ಸೇನಾ ಪಡೆ ಮತ್ತೊಂದು ಕಾರ್ಗಿಲ್ ಯುದ್ದ ಸಂಭವಿಸಲು ಆಸ್ಪದ ಕೊಡುವುದಿಲ್ಲ ಆರ್ಮಿ ಚೀಫ್ ಜನರಲ್ ದಲ್ಬೀರ್ ಸಿಂಗ್ ಎಂದು ಹೇಳಿದ್ದಾರೆ.












Click it and Unblock the Notifications