ಗುಜರಾತ್ ಫಲಿತಾಂಶದ ಮೇಲೆ ಪಕ್ಕದ ರಾಜಸ್ಥಾನದ ಕಣ್ಣೇಕೆ?
Recommended Video

ಅಹಮದಾಬಾದ್, ಡಿಸೆಂಬರ್ 18 : ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಪಕ್ಕದ ರಾಜಸ್ಥಾನದ ಮೇಲೆ ಪ್ರಭಾವ ಬೀರಲಿದೆಯೇ?. ಪಕ್ಕದ ರಾಜ್ಯದ ಇಬ್ಬರು ಪ್ರಭಾವಿ ನಾಯಕರು ಗುಜರಾತ್ ಚುನಾವಣೆ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು.
ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್, ಬಿಜೆಪಿಯ ಭೂಪೇಂದರ್ ಯಾದವ್ ಗುಜರಾತ್ ಚುನಾವಣೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ವಿಶೇಷವೆಂದರೆ ಏಪ್ರಿಲ್‌ನಲ್ಲಿ ಎರಡೂ ಪಕ್ಷಗಳು ರಾಜ್ಯದ ಉಸ್ತುವಾರಿಯನ್ನು ಬದಲಾವಣೆ ಮಾಡಿದ್ದವು. ಈ ಇಬ್ಬರೂ ನಾಯಕರು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ.

ಜೋಧ್‌ಪುರದ ಮೂಲದ ಅಶೋಕ್ ಗೆಹ್ಲೋಟ್ ಎರಡು ಬಾರಿ ರಾಜಸ್ಥಾನದ ಮುಖ್ಯ ಮಂತ್ರಿಯಾಗಿದ್ದವರು. ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಟಲ್ ಅವರ ಪರಮಾಪ್ತರು.
"The mood of the people of Gujarat will lead Congress to victory, can't comment much on initial trends; let the final results come" says state party in-charge Ashok Gehlot as counting continues #GujaratVerdict pic.twitter.com/fGcQKkpOP9
— ANI (@ANI) December 18, 2017
ಭೂಪೇಂದ್ರ್ ಯಾದವ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆಪ್ತರು. ರಾಜಸ್ಥಾನದ ಮೂಲದ ಈ ಇಬ್ಬರೂ ನಾಯಕರು ಗುಜರಾತ್ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಆದ್ದರಿಂದ, ಫಲಿತಾಂಶ ಪಕ್ಕದ ರಾಜ್ಯದ ಮೇಲೆಯೂ ಪ್ರಭಾವ ಬೀರಲಿದೆ.
2014ರಲ್ಲಿ ಭೂಪೇಂದ್ರ್ ಯಾದವ್ ಜಾರ್ಖಂಡ್ ರಾಜ್ಯದ ಸಹ ಉಸ್ತುವಾರಿ ಆಗಿದ್ದರು. ಚುನಾವಣೆಯಲ್ಲಿ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು. ಏಪ್ರಿಲ್‌ನಲ್ಲಿ ಅವರನ್ನು ಗುಜರಾತ್ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಯಿತು.

ಇತ್ತೀಚೆಗೆ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಅಶೋಕ್ ಗೆಹ್ಲೋಟ್ ಸ್ಕ್ರೀನಿಂಗ್ ಕಮಿಟಿ ಮುಖ್ಯಸ್ಥರಾಗಿದ್ದರು. ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಆದ್ದರಿಂದ, ಏಪ್ರಿಲ್‌ನಲ್ಲಿ ಅವರನ್ನು ಗುಜರಾತ್ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಯಿತು.












Click it and Unblock the Notifications