ಜುಲೈ1 ರಿಂದ ಜಿಎಸ್‍ಟಿ ಜಾರಿಗೊಳ್ಳುವುದು ಅನುಮಾನ?

ಭಾರತೀಯ ಅರ್ಥ ವ್ಯವಸ್ಥೆಯ ಮೇಲೆ ಭಾರೀ ದೊಡ್ಡ ಪರಿಣಾಮ ಬೀರಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜುಲೈ 1ರಿಂದ ಜಾರಿಗೊಳ್ಳಲಿದ

ನವದೆಹಲಿ, ಜೂನ್ 13: 'ಒಂದೇ ದೇಶ, ಒಂದೇ ತೆರಿಗೆ' ಚಿಂತನೆಯಡಿ ಕೇಂದ್ರ ಸರ್ಕಾರ ಜಾರಿಗೆ ತರಲು ಯತ್ನಿಸುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಈ ಹಿಂದೆ ನಿರ್ಧರಿಸಿದಂತೆ ಜುಲೈ 1ರಿಂದ ಜಾರಿಗೆ ಬರುವುದು ಬಹುತೇಕ ಅನುಮಾನ ಎಂದು ಮೂಲಗಳು ತಿಳಿಸಿವೆ. ಏನಿಲ್ಲವೆಂದರೂ, ಕನಿಷ್ಠ ಮೂರು ತಿಂಗಳ ಮಟ್ಟಿಗೆ ಜಿಎಸ್ ಟಿ ಜಾರಿ ಮುಂದೂಡಲ್ಪಡಲಿದೆ ಎಂದು ಹೇಳಲಾಗುತ್ತಿದೆ.

ಜಿಎಸ್ ಟಿ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರಗಳು ತಮ್ಮ ತೆರಿಗೆ ವ್ಯವಸ್ಥೆಯಲ್ಲಿ ಹಾಗೂ ರಾಜ್ಯಗಳಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಕೆಲವಾರು ತೆರಿಗೆ ಮಾರ್ಗಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿರುವುದ ಸಾಕಷ್ಟು ಮಾರ್ಪಾಟುಗಳನ್ನು ಮಾಡಿಕೊಳ್ಳಬೇಕೆಂದು ಕೆಲ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರವನ್ನು ಕೋರಿವೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ತೆರಿಗೆ ವ್ಯವಸ್ಥೆಯು ಜಾರಿಗೊಳ್ಳುವುದು ಅನುಮಾನ ಎಂದು ಹೇಳಲಾಗಿದೆ.

Will GST postponed for 3 months?

ವದಂತಿ ತಳ್ಳಿಹಾಕಿದ ಕಾರ್ಯದರ್ಶಿ: ಈ ಬಗೆಯ ಕೆಲ ಸುದ್ದಿಗಳನ್ನು ಆದಾಯ ಇಲಾಖೆ ಕಾರ್ಯದರ್ಶಿ ಹಸ್ಮುಕ್ ಅದಿಯಾ ತಳ್ಳಿ ಹಾಕಿದ್ದಾರೆ. ಅಲ್ಲದೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಆದಾಯ ತೆರಿಗೆಯ ಹಿರಿಯ ಅಧಿಕಾರಿಗಳು, ವದಂತಿಗಳನ್ನು ಅಲ್ಲಗಳೆದಿದ್ದಾರೆ.

ಜಿಎಸ್‍ಟಿ ಬಗ್ಗೆ ಗೊಂದಲಗಳು ಉಂಟಾಗಿರುವುದರಿಂದ ಅದರ ಅನುಷ್ಠಾನವನ್ನು ಕನಿಷ್ಠ ಒಂದು ತಿಂಗಳ ಮಟ್ಟಿಗಾದರೂ ಮುಂದೂಡುವಂತೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅಮಿತ್ ಮಿತ್ರಾ ಮನವಿ ಮಾಡಿದ್ದರಾದರೂ ಜುಲೈ 1 ರಿಂದ ಜಿಎಸ್‍ಟಿ ಕಾರ್ಯರೂಪಕ್ಕೆ ಬರಲಿದೆ ಎಂದು ಇಂದು ಆದಾಯ ಇಲಾಖೆ ಉನ್ನತ ಅಧಿಕಾರಿಗಳು ಟ್ವಿಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+