ಪರಿಸರದಷ್ಟೇ ಸಂಪ್ರದಾಯವೂ ಮುಖ್ಯ, ನಾನು ಪಟಾಕಿ ಹಚ್ಚುತ್ತೇನೆ: ಚೌಹಾಣ್

Posted By:
Subscribe to Oneindia Kannada

ಭೋಪಾಲ್, ಅಕ್ಟೋಬರ್ 18: "ಪರಿಸರ ಸಂರಕ್ಷಣೆ ಎಷ್ಟು ಮುಖ್ಯವೋ, ನಮ್ಮ ಸಂಪ್ರದಾಯವೂ ಅಷ್ಟೇ ಮುಖ್ಯ. ಆದ್ದರಿಂದ ನಾವು ಪಟಾಕಿ ಹಚ್ಚಿಯೇ ದೀಪಾವಳಿ ಆಚರಿಸುತ್ತೇವೆ" ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ದೀಪಾವಳಿಯಲ್ಲಿ ಪಟಾಕಿ ಸಿಡಿಸುವವರು ಎಚ್ಚರವಾಗಿರಿ!

ದೇಶದ ಹಲವು ರಾಜ್ಯಗಳು ಪಟಾಕಿ ನಿಷೇಧಿಸುವ ಕುರಿತು ಗಂಭೀರ ಚಿಂತನೆ ಮಾಡಿರುವ ಸಮಯದಲ್ಲಿ ಚೌಹಾಣ್ ಹೇಳಿಕೆ ಕೊಂಚ ವಿವಾದವೆನ್ನಿಸಿದೆ.

Will burst firecrackers as traditions are important as environment: MP CM

ಪರಿಸರ ಮಾಲಿನ್ಯಕ್ಕೆ ಕೇವಲ ಪಟಾಕಿಯಷ್ಟೇ ಕಾರಣವಲ್ಲ. ಆದ್ದರಿಂದ ನಾವು ಹಣತೆ ಹಚ್ಚಿ, ಕೆಲವು ಪಟಾಕಿಗಳನ್ನು ಸಿಡಿಸಿ ಹಬ್ಬ ಆಚರಿಸುತ್ತೇವೆ. ಪರಿಸರ ಎಷ್ಟು ಮುಖ್ಯವೋ, ನಮಗೆ ಸಂಪ್ರದಾಯವೂ ಅಷ್ಟೇ ಮುಖ್ಯ. ದೀಪಾವಳಿಯನ್ನು ನಾವು ಸಾಂಪ್ರದಾಯಿಕವಾಗಿ ಆಚರಿಸುತ್ತೇವೆ ಎಂದು ಚೌಹಾಣ್ ಹೇಳಿದ್ದಾರೆ.

ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ ಸುಪ್ರೀಂ ಕೋರ್ಟ್ ಪಟಾಕಿ ನಿಷೇಧಿಸುವಂತೆ ಅಲ್ಲಿನ ಸರ್ಕಾರಕ್ಕೆ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Madhya Pradesh Chief MinisterShivraj Singh Chouhan on Oct 18th announced that he will burst firecrackers on Diwali because traditions are as important as the environment.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ