ಯಡಿಯೂರಪ್ಪ ಪುತ್ರನಿಗೆ ಒಲಿಯಲಿದೆ ಕೇಂದ್ರ ಮಂತ್ರಿ ಭಾಗ್ಯ? ಮೋದಿ ಸಂಪುಟದಲ್ಲಿ ಯಾರು ಔಟ್‌? ಯಾರು ಇನ್?‌

ನವದೆಹಲಿ, ಜುಲೈ 04: 2024 ರ ಲೋ‌ಕಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿ‌ ಸಚಿವ ಸಂಪುಟದಲ್ಲಿ ಮೇಜರ್‌ ಸರ್ಜರಿಗೆ ಮುಂದಾಗಿದ್ದು, ಹಲವು ಲೆಕ್ಕಾಚಾರವನ್ನ ಹಾಕಿಕೊಂಡಿರುವ ಮೋದಿಸಂಪುಟ ಪುನಾರಚನೆಗೆ ತಯಾರಿ ನಡೆಸಿದ್ದಾರೆ.

ಈಗಾಗಲೇ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಂತ್ರಿ ಪರಿಷತ್ ಸಭೆಯಲ್ಲಿ ಲೋಕಸಭಾ ಚುನಾವಣೆಗೆ ಹೇಗೆ ತಯಾರಿ ಇರಬೇಕು ಎಂಬ ಬಗ್ಗೆ ಸಲಹೆ ನೀಡಿದ್ದಾರೆ. ಅಲ್ಲದೇ ಸಂಪುಟ ಪುನಾರಚನೆ ಆಗುತ್ತೆ ಎನ್ನುವ ಚರ್ಚೆಗಳು ಶುರುವಾಗಿವೆ. ಹೀಗಾಗಿ ಮುಂದಿನ ಸಂಸತ್ ಅಧಿವೇಶನಕ್ಕೂ ಮುನ್ನ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಆ ರಾಜ್ಯಗಳತ್ತ ಪ್ರಧಾನಿ ಮೋದಿ ಗಮನಹರಿಸಿದ್ದು, ಕೆಲ ಚುನಾವಣೆ ಇರುವ ಕ್ಷೇತ್ರಗಳತ್ತ ಹೆಚ್ಚಿನ ಒತ್ತು ನೀಡುವ ಪ್ಲಾನ್‌ ಹಾಕಿಕೊಂಡಿದ್ದಾರೆ.

Lok Sabha Elections 2024

ಇನ್ನೂ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ್ದು, ಕೆಲ ಕೇಂದ್ರ ಸಚಿವರಿಗೆ ಕೊಕ್‌ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ನಾಲ್ಕು ಕೇಂದ್ರ ಸಚಿವರ ಪೈಕಿ ಕೆಲವರಿಗೆ ಕೊಕ್‌ ಕೊಟ್ಟು ಕೆಲವರಿಗೆ ಸಂಪುಟ ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲೂ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಈಗಾಗಲೇ ಬಿಜೆಪಿ ಹೈಕಮಾಂಡ್‌ ನಾಯಕರನ್ನ ಭೇಟಿ ಮಾಡಿರುವ ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಜೊತೆಗೂ ಈ ವಿಚಾರವಾಗಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

ಕರ್ನಾಟಕದಿಂದ ಮೋದಿ ಸಂಪುಟದಲ್ಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ರಾಜೀವ್ ಚಂದ್ರಶೇಖರ್ , ಶೋಭಾ ಕರಂದ್ಲಾಜೆ ಹಾಗೂ ಎ ನಾರಾಯಣ ಸ್ವಾಮಿಯವರಿದ್ದು. ಇತ್ತ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಚರ್ಚೆ ನಡೆದಿದ್ದು, ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ ನಲ್ಲಿ ಶೋಭಾ ಕರಂದ್ಲಾಜೆ ಹೆಸರು ಮುಂಚೂಣಿಯಲ್ಲಿದ್ದು, ಶೋಭಾ ಕರಂದ್ಲಾಜೆ ಕೊಕ್‌ ನೀಡಿ ಅವರ ಬದಲಿಗೆ ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ಮಂತ್ರಿ ಭಾಗ್ಯ ಒಲಿದು ಬರುವ ಸಾಧ್ಯತೆ ಇದೆ. ಇನ್ನು ಕೇಂದ್ರ ಸಚಿವ ನಾರಾಯಣ ಸ್ವಾಮಿಯವರನ್ನು ಬದಲಾಯಿಸಿ ಬಂಜಾರ ಸಮುದಾಯದ ಉಮೇಶ್ ಜಾದವ್ ಗೆ ಸಂಪುಟದಲ್ಲಿ ಅವಕಾಶ ನೀಡುವ ಬಗ್ಗೆ ಚಿಂತನೆಗಳು ನಡೆದಿವೆ ಎಂದು ಹೇಳಲಾಗಿದೆ.

Lok Sabha Elections 2024

ಇನ್ನೂ ಈ ವರ್ಷಾಂತ್ಯದ ವೇಳೆ ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣೆ ದೃಷ್ಟಿಯಿಂದಾಗಿ ಸಂಪುಟ ಪುನಾರಚನೆ ವೇಳೆ ಈ ರಾಜ್ಯಗಳಿಗೆ ಹೆಚ್ಚಿನ ಮಹತ್ವ ನೀಡಲಿದ್ದಾರೆ. ಅಷ್ಟೇ ಅಲ್ಲದೆ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಹಲವು ತಂತ್ರಗಳನ್ನ ಹಾಕಿಕೊಂಡಿದೆ. ಬಿಜೆಪಿ ತನ್ನ ಮಿತ್ರ ಬಳಗವನ್ನು ಹೆಚ್ಚಿಸಲು ಮಿತ್ರಪಕ್ಷಗಳಿಗೂ ಮಂತ್ರಿ ಸ್ಥಾನ ನೀಡಲುವ ಸಾಧ್ಯತೆ ಇದೆ. ಇನ್ನೂ ಎನ್ ಸಿಪಿ ಬಂಡಾಯಗಾರಿಗೂ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಲಿದ್ದು ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್ ಗೆ ಕೇಂದ್ರ ಮಂತ್ರಿ ಭಾಗ್ಯ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇತ್ತ ದೇವೇಂದ್ರ ಫಡ್ನವಿಸ್ ಗೆ ಕೇಂದ್ರ ಮಂತ್ರಿ ನೀಡಿ ರಾಷ್ಟ್ರರಾಜಕಾರಣಕ್ಕೆ ಕರೆತರುವ ಚಿಂತನೆಯನ್ನ ಮೋದಿ ನಡೆಸಿದ್ದು, ಪ್ರಸ್ತುತ ಮೋದಿ ಸಂಪುಟದಲ್ಲಿ ಮಹಾರಾಷ್ಟ್ರದ ಎಂಟು ಮಂದಿ ಸಚಿವರಿದ್ದಾರೆ. ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ನಾರಾಯಣ ರಾಣೆ ಮತ್ತು ರಾಮದಾಸ್ ಅಠಾವಳೆ ಮಂತ್ರಿಗಳಾಗಿದ್ದಾರೆ. ಮಹಾರಾಷ್ಟ್ರದ ಶಿಂಧೆ ಬಣ ಮೂವರನ್ನು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದು, ಕೆಲವರನ್ನ ಸಚಿವ ಸ್ಥಾನದಿಂದ ಕೈಬಿಡಲಿದೆ.

ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆ ಮುಗಿರುವುದರಿಂದ ಪ್ರಸ್ತುತ ಸಂಪುಟದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಮನ್ಸುಖ್ ಮಾಂಡವಿಯಾ, ಪುರುಷೋತ್ತಮ ರೂಪಾಲ, ದರ್ಶನ ಜರ್ದೋಶ್, ದೇವುಸಿಂಗ್ ಚೌಹಾಣ್ ಮತ್ತು ಮಹೇಂದ್ರ ಮುಂಜ್ಪಾರಾ ಸಚಿವರುಗಳಲ್ಲಿ ಮನ್ಸುಖ್ ಮಾಂಡವಿಯಾ, ಪರುಷೋತ್ತಮ ರೂಪಲಾ ಮತ್ತು ದರ್ಶನಾ ಜರ್ದೋಶ್ ಅವರಿಗೆ ಕೋಕ್ ನೀಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+