ಪಾಟ್ನಾ ರೈಲ್ವೆ ನಿಲ್ದಾಣದ ವೈಫೈ ಹೆಚ್ಚು ಬಳಕೆಯಾಗಿದ್ದು ಬ್ಲೂಫಿಲ್ಮ್ ನೋಡಲು!

Written By: Ramesh
Subscribe to Oneindia Kannada

ಪಾಟ್ನಾ, ಅಕ್ಟೋಬರ್. 18 : ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಿರುವ ಉಚಿತ ವೈಫೈ ಸೇವೆ ಬ್ಲೂಫಿಲ್ಮ್ ನೋಡಲು ಹೆಚ್ಚಾಗಿ ಬಳಕೆಯಾಗುತ್ತಿದೆಯಂತೆ. ಹೀಗೆಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದ ರೈಲು ನಿಲ್ದಾಣಗಳಲ್ಲಿ ಕಲ್ಪಿಸಿರುವ ಉಚಿತ ಇಂಟರ್ನೆಟ್ ಸೇವೆ (ವೈ-ಫೈ) ಅತಿಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದು ಬಿಹಾರದ ಪಟ್ನಾ ರೈಲು ನಿಲ್ದಾಣದಲ್ಲಿ. ಇಲ್ಲಿ ಜನ ಇಂಟರ್ನೆಟ್ ಸಂಪರ್ಕವನ್ನು ಹೆಚ್ಚು ಬಳಸಿರುವುದು ಬ್ಲೂಫಿಲ್ಮ್ ವೀಕ್ಷಿಸಲು. ಪ್ರಯಾಣಿಕರು ಯಾವ ವೆಬ್‌ಸೈಟ್‌ಗೆ ಹೆಚ್ಚು ಭೇಟಿ ನೀಡುತ್ತಾರೆ ಎಂಬ ಬಗ್ಗೆ ಅಧಿಕಾರಿಗಳು ನಡೆಸಿದ ಪರಿಶೀಲನೆಯಿಂದ ಈ ಮಾಹಿತಿ ಬಹಿರಂಗವಾಗಿದೆ.

Wifi

ಬಿಹಾರದಲ್ಲಿ ವೈ-ಫೈ ಸೌಲಭ್ಯವನ್ನು ಮೊದಲು ಕಲ್ಪಿಸಿದ್ದುಪಾಟ್ನಾ ರೈಲು ನಿಲ್ದಾಣದಲ್ಲಿ. ಈ ನಿಲ್ದಾಣದ ಮೂಲಕ ಪ್ರತಿನಿತ್ಯ 200ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತವೆ. ಪಟ್ನಾ ನಿಲ್ದಾಣದಲ್ಲಿ ಜನ ಬ್ಲೂಫಿಲ್ಮ್ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ, ಅಲ್ಲಿಂದ ವಿಡಿಯೊ ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದಾರೆ.

ಜತೆಗೆ ಯೂಟ್ಯೂಬ್ ನಲ್ಲಿನ ವಿಡಿಯೊ ವೀಕ್ಷಣೆಗೆ, ವೈ-ಫೈ ಸೌಲಭ್ಯವನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಎಂದು ಅವರು ವಿವರಿಸಿದರು. ಇನ್ನು ಕೆಲವರು ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿಕೊಳ್ಳಲು, ಬಾಲಿವುಡ್‌ ಹಾಗೂ ಹಾಲಿವುಡ್‌ ಸಿನಿಮಾ ಡೌನ್‌ಲೋಡ್‌ ಮಾಡಿಕೊಳ್ಳಲು ವೈ-ಫೈ ಬಳಸುತ್ತಿದ್ದಾರೆ ಎಂದರು.

ಕಳೆದ ತಿಂಗಳಷ್ಟೇಪಾಟ್ನಾ ರೈಲು ನಿಲ್ದಾಣದಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಆರಂಭಿಸಲಾಗಿತ್ತು. ಇದುವರೆಗೆ ದೇಶದ 23 ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಆರಂಭಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
tops the chart in terms of internet search using the free Wi-Fi service, though the maximum searches were for porn sites, a railway official said on Monday.
Please Wait while comments are loading...