ಪಾಕ್ ಕ್ರೌರ್ಯಕ್ಕೆ ಸಾಕ್ಷಿಯಾದ ಮಚಿಲ್ ನಲ್ಲಿ ಪಹರೆ ಸುಲಭವಲ್ಲ!

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ನವೆಂಬರ್ 23: ಗಡಿ ನಿಯಂತ್ರಣ ರೇಖೆಯ ಮಚಿಲ್ ವಲಯದಲ್ಲಿ ಮಂಗಳವಾರ ಮೂವರು ಸೈನಿಕರನ್ನು ಕೊಲ್ಲಲಾಗಿದೆ. ಪಾಕಿಸ್ತಾನದ ಕ್ರೌರ್ಯವನ್ನು ಈ ಘಟನೆ ಮತ್ತೊಮ್ಮೆ ತೆರೆದಿಟ್ಟಿದೆ. ಅಂದಹಾಗೆ ಈ ವಲಯ ಭಾರತದ ಪಾಲಿಗೆ ದೊಡ್ಡ ಸವಾಲಿನದು. ಕುಪ್ವಾರ ಹಾಗೂ ಲೋಲಬ್ ಕಣಿವೆಯೊಳಗೆ ನುಸುಳಲು ಮಚಿಲ್ ವಲಯದಲ್ಲಿ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ.

ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಇದೇ ಮಾತನ್ನು ಮತ್ತೆ ಹೇಳಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ ದೊಡ್ಡ ಮಟ್ಟದ ಒಳ ನುಸುಳುವ ಪ್ರಯತ್ನಗಳು ಇಲ್ಲಾಗಿವೆ. ಮಚಿಲ್ ಭೂ ಪ್ರದೇಶವೇ ತುಂಬ ಕಷ್ಟಕರ ಯಾಕೆ ಅಂದರೆ, ಇಲ್ಲಿನ ಕಾಡು, ಸವಾಲೆನಿಸುವಂಥ ಹವಾಮಾನ ಹಾಗೂ ಈ ಪ್ರದೇಶ 6,500 ಅಡಿ ಎತ್ತರದಲ್ಲಿರುವುದರಿಂದ ಪಹರೆ ಸುಲಭ ಸಂಗತಿಯಲ್ಲ.[ಭಾರತೀಯ ಯೋಧನ ರುಂಡ ಕತ್ತರಿಸಿ ಬಿಸಾಕಿದ ಪಾಕ್ ಉಗ್ರರು]

ಆದರೆ, ಪಾಕಿಸ್ತಾನಿಯರು ಜಮ್ಮು-ಕಾಶ್ಮೀರದೊಳಗೆ ನುಸುಳಲು ಪದೇ ಪದೇ ಬಳಸುವುದು ಇದೇ ಮಾರ್ಗವನ್ನು. ಭಾರತೀಯ ಸೇನೆಗೆ ದೊಡ್ಡ ಸವಾಲಾಗಿರುವುದು ಇಲ್ಲಿರುವ ಒತ್ತೊತ್ತಾದ ಕಾಡು. ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಪಾಕ್ ಉಗ್ರರು ಕುಪ್ವಾರದೊಳಗೆ ನುಸುಳಲು ಈ ದಾರಿ ಬಳಸುತ್ತಾರೆ.

Kupwara

ಕಾಶ್ಮೀರ ಕಣಿವೆಯ ಹಿಂಸಾಚಾರ ಮಚಿಲ್ ನ ಸ್ಥಿತಿಯನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ. ಕಾಶ್ಮೀರ ಹಿಂಸಾಚಾರ ತಡೆಯುವ ಸಲುವಾಗಿ ಹೆಚ್ಚಿನ ರಕ್ಷಣಾ ಸಿಬ್ಬಂದಿ ತೆರಳಿದಾಗ ಮಚಿಲ್ ನಲ್ಲಿ ಪಹರೆಗೆ ಸೈನಿಕರು ಕಡಿಮೆ ಇರುತ್ತಾರೆ. ಆಗ ಈ ಪ್ರದೇಶದ ಮೂಲಕ ಉಗ್ರರು ಒಳನುಸುಳುವುದು ಹೆಚ್ಚಾಗಿದೆ.[ಹತರಾದ ಉಗ್ರರ ಬಳಿ ಸಿಕ್ಕಿತು 2 ಸಾವಿರ ರು. ನೋಟು]

ಉಗ್ರರನ್ನು ನೇಮಿಸುವುದು ಹಾಗೂ ಒಳನುಸುಳುವುದನ್ನು ಗಮನಿಸಿದರೆ ಕುಪ್ವಾರದಲ್ಲೇ ಭಯೋತ್ಪಾದಕರು ಏಕೆ ತಮ್ಮ ಅಡಗುತಾಣ ಮಾಡಿಕೊಳ್ಳುತ್ತಾರೆ ಅನ್ನೋದು ತಿಳಿಯುತ್ತದೆ. ಬಹುತೇಕ ವಿದೇಶಿ ಉಗ್ರರಿಗೆ ಕುಪ್ವಾರ ನೆಲೆಯಾಗಿದೆ. ಅವರೆಲ್ಲ ನುಸುಳಿ ಬರುವುದು ಇದೇ ಮಚಿಲ್ ನಿಂದ.

ಮಚಿಲ್ ಪ್ರದೇಶದಲ್ಲಿ ದಟ್ಟ ಅರಣ್ಯವಿದೆ. ಅಲ್ಲಿ ಪಹರೆ ಬಹಳ ಕಷ್ಟ. ಆದರೆ ಕಾಶ್ಮೀರದ ಹಿಂಸಾಚಾರ ಸ್ಥಿತಿ ಹತೋಟಿಗೆ ಬರುತ್ತಿದೆ. ಆದ್ದರಿಂದ ಹೆಚ್ಚಿನ ರಕ್ಷಣಾ ಸಿಬ್ಬಂದಿಯನ್ನು ಮಚಿಲ್ ವಲಯದಲ್ಲಿ ನಿಯೋಜಿಸಬಹುದು ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಒನ್ಇಂಡಿಯಾಗೆ ಮಾಹಿತಿ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
On Tuesday, Pakistan resorted to yet another brutal act. Three Indian soldiers were killed in the Machil sector along the Line of Control. This has been a problematic zone for India as there are several attempts being made to infiltrate through sector in a bid to land at Lolab Valley and Kupwara.
Please Wait while comments are loading...