India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್‌ನಲ್ಲಿ ಪತ್ರಕರ್ತರು, ರಾಜಕಾರಣಿಗಳ ಸಹಾಯಕರನ್ನು ಅನುಸರಿಸದಿರಲು ರಾಹುಲ್ ಗಾಂಧಿ ನಿರ್ಧರಿಸಿದ್ದೇಕೆ?

|
Google Oneindia Kannada News

ನವದೆಹಲಿ, ಜೂ. 03: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 50 ಟ್ವಿಟ್ಟರ್‌ ಅಕೌಂಟ್‌ಗಳನ್ನು ಅನುಸರಿಸದಿರುವ (ಅನ್‌ಫಾಲೋ ಮಾಡಲು) ನಿರ್ಧರಿಸಿದ್ದು ಹಲವು ವದಂತಿಗಳಿಗೆ ಕಾರಣವಾಗಿದೆ.

ಟ್ವಿಟರ್‌ನಲ್ಲಿ 18.8 ಮಿಲಿಯನ್ ಫಾಲೋವರ್ಸ್ ಹೊಂದಿರುವ ಕೇರಳದ ವಯನಾಡಿನ ಸಂಸದ ರಾಹುಲ್‌, ಗುರುವಾರ ಬೆಳಿಗ್ಗೆಯ ಹೊತ್ತಿಗೆ 219 ಟ್ವೀಟರ್‌ ಅಕೌಂಟ್‌ಗಳನ್ನು ಮಾತ್ರ ಫಾಲೋ ಮಾಡುತ್ತಿದ್ದು 55 ರಷ್ಟು ಟ್ವೀಟರ್‌ ಖಾತೆಗಳನ್ನು ಅನ್‌ಫಾಲೋ ಮಾಡಿದ್ದಾರೆ.

ಎಲ್ಲರಿಗೂ ಉಚಿತ ಲಸಿಕೆಗಾಗಿ ಧ್ವನಿಯೆತ್ತಲು ರಾಹುಲ್ ಗಾಂಧಿ ಕರೆಎಲ್ಲರಿಗೂ ಉಚಿತ ಲಸಿಕೆಗಾಗಿ ಧ್ವನಿಯೆತ್ತಲು ರಾಹುಲ್ ಗಾಂಧಿ ಕರೆ

ಇನ್ನು ನೆಟ್ಟಿಗರ ಆಸಕ್ತಿಯನ್ನು ಕೆರಳಿಸಿದ ಮತ್ತೊಂದು ಸಂಗತಿಯೆಂದರೆ, ರಾಹುಲ್ ಗಾಂಧಿ ಮಾಜಿ ವಿಶೇಷ ಸಂರಕ್ಷಣಾ ಗುಂಪಿನ ಕಮಾಂಡೋ ಕೆ.ಬಿ. ಬೈಜುರ ಸಹಾಯಕ ಎಂದು ಪರಿಗಣಿಸಲ್ಪಟ್ಟ ನಿಖಿಲ್ ಮತ್ತು ನಿವೇದಿತ್ ಆಳ್ವಾರನ್ನು ಫಾಲೋ ಮಾಡದಿರುವುದು.

ಕೆ.ಬಿ. ಬೈಜುರ ಖಾತೆ ಅನ್‌ಫಾಲೋ

ಕೆ.ಬಿ. ಬೈಜುರ ಖಾತೆ ಅನ್‌ಫಾಲೋ

ಚಲನಚಿತ್ರ ತಯಾರಿಕೆಯ ಹಿನ್ನೆಲೆ ಹೊಂದಿರುವ ನಿಖಿಲ್ ಈ ಹಿಂದೆ ರಾಹುಲ್‌ ಗಾಂಧಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಭಾಯಿಸಿದ್ದರು. ರಾಹುಲ್‌ ಟ್ವೀಟ್‌ಗಳನ್ನು ತಿದ್ದುವ ಮೂಲಕ 2019 ರ ಲೋಕಸಭಾ ಚುನಾವಣೆಯ ಮೊದಲು ಮತ್ತು ಚುನಾವಣೆ ಸಂದರ್ಭದಲ್ಲಿ ಭಾರೀ ಸುದ್ದಿಯಾಗುತ್ತಿದ್ದ ರಾಹುಲ್‌ ಟ್ವೀಟ್‌ಗಳಿಗೆ ಕಾರಣವಾಗಿದ್ದರು. ರಾಹುಲ್‌ ಗಾಂಧಿಯ ಪ್ರವಾಸಗಳ ಆಯೋಜನೆಗೆ ಬೈಜು ಸಹಾಯ ಮಾಡಿದ್ದಾರೆ. ವಿಶೇಷವಾಗಿ ಕೇರಳಕ್ಕೆ ಹಾಗೂ ಅವರ ಸಂಸತ್ತಿನಲ್ಲಿ ಪ್ರತಿನಿಧಿಸುವ ರಾಜ್ಯಗಳಿಗೆ ಪ್ರವಾಸದ ಸಂದರ್ಭ. ಗಾಂಧಿಯವರ ಭೇಟಿಗಳ ಸಿದ್ಧತೆಗಳ ಮೇಲ್ವಿಚಾರಣೆಗಾಗಿ ಬೈಜು ತನ್ನ ನೆಲೆಯನ್ನು ರಾಜ್ಯಕ್ಕೆ ಸ್ಥಳಾಂತರಿಸಿದ್ದರು.

ಅಮಿತಾಬ್‌ ಬಚ್ಚನ್‌ ಖಾತೆ ಅನ್‌ ಫಾಲೋ

ಅಮಿತಾಬ್‌ ಬಚ್ಚನ್‌ ಖಾತೆ ಅನ್‌ ಫಾಲೋ

ರಾಹುಲ್‌ ಗಾಂಧಿ ಬಿಹಾರದ ರಾಜಕೀಯ ಕುಟುಂಬಕ್ಕೆ ಸೇರಿದ ಮತ್ತು ಪಕ್ಷದ ಮಹಿಳಾ ವಿಭಾಗದ ಜೊತೆಗಿದ್ದ ಪ್ರತಿಷ್ಠಾ ಸಿಂಗ್‌ರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುತ್ತಿರುವ ಅಲಂಕಾರ್‌ ಸವಾಯಿಯ ಖಾತೆಯನ್ನು ಅನ್‌ಫಾಲೋ ಮಾಡಿದ್ದಾರೆ. ಈ ನಡುವೆ ರಾಹುಲ್‌, ಕಾಂಗ್ರೆಸ್‌ನ ಡಿಜಿಟಲ್ ತಂಡದ ಮುಖ್ಯಸ್ಥ ರೋಹನ್ ಗುಪ್ತಾರನ್ನು ಅನುಸರಿಸುತ್ತಿದ್ದಾರೆ. ಇನ್ನು ರಾಹುಲ್‌ ಗಾಂಧಿ ರಾಜಕೀಯ ವ್ಯಕ್ತಿಗಳ ಸಹಾಯಕರು ಮಾತ್ರವಲ್ಲದೇ ಹಲವಾರು ಪತ್ರಕರ್ತರನ್ನೂ ಅನುಸರಿಸುತ್ತಿಲ್ಲ. ಬಾಲಿವುಡ್‌ನ ಸೂಪರ್‌ಸ್ಟಾರ್‌ ಅಮಿತಾಬ್ ಬಚ್ಚನ್ ಖಾತೆಯನ್ನು ಅನುಸರಿಸದೆ ಇರುವುದು ಮತ್ತೊಂದು ಗಮನಾರ್ಹ ವಿಚಾರ.

ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ಬಗ್ಗೆ ಕೇಂದ್ರಕ್ಕೆ 3 ಪ್ರಶ್ನೆ ಕೇಳಿದ ರಾಹುಲ್ ಗಾಂಧಿಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ಬಗ್ಗೆ ಕೇಂದ್ರಕ್ಕೆ 3 ಪ್ರಶ್ನೆ ಕೇಳಿದ ರಾಹುಲ್ ಗಾಂಧಿ

ಅನ್‌ಫಾಲೋ ಮಾಡಿದರೆ ವಿರೋಧಿ ಎಂದು ಅರ್ಥವಲ್ಲ

ಅನ್‌ಫಾಲೋ ಮಾಡಿದರೆ ವಿರೋಧಿ ಎಂದು ಅರ್ಥವಲ್ಲ

ಇನ್ನು ಈ ಎಲ್ಲಾ ಬೆಳವಣಿಗೆಯ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು, ಗಾಂಧಿ ಕೆಲವರನ್ನು ಅನ್‌ಫಾಲೋ ಮಾಡಿದ್ಧೇಕೆ ಎಂಬ ಬಗ್ಗೆ ಮಾತನಾಡಿ, ಅನ್‌ಫಾಲೋ ಮಾಡಿದರೆ, ಆ ವ್ಯಕ್ತಿಗಳ ಮೇಲೆ ದ್ವೇಷವಿದೆ ಅಥವಾ ಕೋಪವಿದೆ, ವಿರೋಧವಿದೆ ಎಂದು ಅರ್ಥವಲ್ಲ. ಯಾರೊಂದಿಗೆ ಕಾರ್ಯ ನಿರ್ವಹಿಸುತ್ತಾರೆ ಅವರ ಟ್ವೀಟರ್‌ ಖಾತೆಯನ್ನು ರಾಹುಲ್‌ ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗೆಯೇ ಪತ್ರಕರ್ತರು ಪತ್ರಿಕಾಗೋಷ್ಠಿ ಮೂಲಕ ರಾಹುಲ್‌ರೊಂದಿಗೆ ಮಾತುಕತೆ ನಡೆಸುತ್ತಾರೆ. ಹಾಗಿರುವಾಗ ಅವರನ್ನು ಫಾಲೋ ಮಾಡಬೇಕಾಗಿಲ್ಲ ಎನ್ನುತ್ತಾರೆ ಈ ಆಪ್ತ.

ಶಾರುಖ್‌ ಖಾನ್‌ ಟ್ವೀಟರ್‌ ಖಾತೆಯನ್ನು ಈವರೆಗೂ ಅನುಸರಿಸದ ರಾಹುಲ್‌

ಶಾರುಖ್‌ ಖಾನ್‌ ಟ್ವೀಟರ್‌ ಖಾತೆಯನ್ನು ಈವರೆಗೂ ಅನುಸರಿಸದ ರಾಹುಲ್‌

ಇನ್ನು ರಾಹುಲ್‌ ಗಾಂಧಿ ಅಮಿತಾಬ್ ಬಚ್ಚನ್ ಖಾತೆಯನ್ನು ಅನ್‌ಫಾಲೋ ಮಾಡಿದ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅಷ್ಟಕ್ಕೂ ರಾಹುಲ್‌ ಗಾಂಧಿ ಈವರೆಗೂ ಶಾರುಖ್‌ ಖಾನ್‌ ಟ್ವೀಟರ್‌ ಖಾತೆಯನ್ನು ಫಾಲೋ ಮಾಡಿಲ್ಲ. ಆದರೆ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾರ ಆಪ್ತರು ಶಾರುಖ್‌ ಖಾನ್‌.

ಲಾಕ್‌ಡೌನ್‌ನಿಂದ ನಿರುದ್ಯೋಗ ದುಪ್ಪಟ್ಟಾಗಿದೆ; ರಾಹುಲ್ ಟೀಕೆಲಾಕ್‌ಡೌನ್‌ನಿಂದ ನಿರುದ್ಯೋಗ ದುಪ್ಪಟ್ಟಾಗಿದೆ; ರಾಹುಲ್ ಟೀಕೆ

ಅನ್‌ಫಾಲೋ ಮಾಡಿದ್ದೇಕೆ?

ಅನ್‌ಫಾಲೋ ಮಾಡಿದ್ದೇಕೆ?

ಕಾಂಗ್ರೆಸ್‌ನ ಕೆಲ ಮುಖಂಡರುಗಳ ಪ್ರಕಾರ ಪ್ರಿಯಾಂಕಾ ಗಾಂಧಿ ತನ್ನ ಸಹೋದರನ ನಿರ್ಧಾರವನ್ನು ತಿಳಿದಿದ್ದರು. ಗಾಂಧಿ ರಾಜಕೀಯ ಟ್ವೀಟ್‌ಗಳನ್ನು ಫಾಲೋ ಮಾಡಬಹುದಾದ, ಹೆಚ್ಚಾಗಿ ಪ್ರಚಾರ ದೊರಕಬಹುದಾದ, ಅದರಿಂದ ಅಧಿಕ ರಾಜಕೀಯ ಲಾಭ ದೊರೆಯಬಹುದಾದ ವ್ಯಕ್ತಿಗಳನ್ನು ಮಾತ್ರ ಫಾಲೋ ಮಾಡಲು ರಾಹುಲ್‌ ನಿರ್ಧಾರಿಸಿದ್ದಾರೆ ಎಂದು ವರದಿಯಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Why Rahul Gandhi Decides To Unfollow Journalists, Aides On Twitter? Know more..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X